ಈ ಪುಟವನ್ನು ಪರಿಶೀಲಿಸಲಾಗಿದೆ
ಶತಮಾನ] ವೀರಜನಜತಿ 425
ಈಗ್ರಂಥದಿಂದ ಒಂದೆರಡು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ__
ಸೂರ್ಯೋದಯ
ಮೂಡಣದ್ರಿಯ ಕೆಂಪು ತೋಱೌ ತಾರಗೆ ಪರಿಯೆ |
ಗೂಢಮಾಗಿರ್ದ ಕಮಲಂ ಬಿರಿಯೆಯಳಿ ಸರಿಯೆ |
ಕೂಡಿಸಿದ ತಂಬೆಲರ ಚಳಿ ಮುಱ'ಯೆ ತಾಮ್ರಚೂಡಂ ಕರೆಯೆ ರಜನಿ
ಪರೆಯೆ || ಗಾಢದಲಿ ಚಕ್ರವಾಕಂ ಮೆಱೌಯೆ ಮಿಗೆ ಸಿರಿಯ |
ಕೂಡಿ ದೇಗುಲವಾದ್ಯ ಮೊರೆಯೆ ಕಿವಿ ಕಿಕ್ಕಿಱ'ಯೆ |
ಮಡಿದನು ರವಿ ಹಕ್ಕಿಯುಲಿದು ಮಱುಯೊಳು ಬೆರೆಯೆ ನೈದಿಲೆಯ
ಸೊಂಪು ಪಱುಯೆ||
ದೇವರ ದರ್ಶನ
ದಾರಿದ್ರನಿಗೆ ಧನವು ಬಯಸೆ ಬಂದಂತೆ ಬಲು |
ನೀರಡಸಿದವಗೆ ಗಂಗೋದಕವು ದೊರೆತಂತೆ |
ಕುರುಡನಿಗೆ ಕಣ್ಗಳವು ಬಂದತೆಱನಂತೆ ಕುಮತಿಗೆ ಗುರುವು ಸಿಲುಕಿದಂತೆ॥
ಭರದಿಂದ ಬಿಸಿಲಿನೊಳು ಬೞಲಿದವನಿಗೆ ನೇೞಲು |
ದೊರೆತಂತೆ ಪರಮಪತಿತಗೆ ಮುಕುತಿಯಾದಂತೆ |
ನೀರೊಳಗೆ ಮುೞುಗಿ ಸಾವಸಿಗೆ ನಾವೆಯು ಸಿಲುಕಿದಂತೆನಗೆಯೊಲಿದೆ
ಸ್ವಾಮಿ |
----
ವೀರಜನಪತಿ. ಸು 1650
ಈತನು ವಿಕ್ರಮವಿಲಾಸವನ್ನು ಬರೆದಿದ್ದಾನೆ. ಇವನು ವೀರಶೈವ
ಕವಿ; ಇವನ ತಂದೆ ಬೆಳಗೋಡಹುಚ್ಚ ಭೋಪಾಲಚಂದ್ರನ ಕುಲತಿಲಕನಾದ ಹಾಲೇಂದ್ರ , ತಾಯಿ ಮಲ್ಲಾಂಬಿಕೆ. ಇವನು ಸುಮಾರು 1650 ರಲ್ಲಿ ಇದ್ದಿ ರಬಹುದೆಂದು ತೋರುತ್ತದೆ. ಪೂರ್ವಕವಿಗಳನ್ನು ಈಪದ್ಯದಲ್ಲಿ ಸ್ಮರಿ ಸಿದ್ದಾನೆ-
ಕವಿಕಾಳಿದಾಸ ಮಯೂರನುದ್ಧಟ ಬಾಣ | ಕವಿಮಲುಹಣ ಭವಭೂತಿ |
ಭುವನವಿನುತಗಸ್ವ ಶಿವಕವಿಗಳ ನೋಂತು | ವಿವರಿಸೆ ನಾನೀಕೃತಿಯ ||
ಇವನ ಗ್ರಂಥ
54