ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

459 ಶತಮಾನ ಚಿಕ್ಕದೇವರಾಜ ನಂದಮಿಗೆ ಸೆರ್ಜಸಮನೊಂದಿ ಸೊಗನಾೞ್ಗುಂ || ಒಂಬತ್ತನೆಯ ಬಿನ್ನಪದಲ್ಲಿ ಸ್ವಲ್ಪಭಾಗ ಸಕಲಲೋಕನಿಯಾಮಕಾ ! ನೀನೀಸಂಸಾರದೊಳೊರೊರ್ವ೦ಗೆ ಪಟ್ಟಾಭಿಷೇಕಾದಿಸುಖಮಂ ಓರೊರ್ವ೦ಗೆ ಶಿರಶ್ಛೇದನಾದಿದುಃಖಮನೆಸಗುವುೞುಂ ವಿಷಮನೆಂದುಂ, ಕರ್ಮಾನುಗುಣಮಾದ ಫಲಮನೀವುದೞುಂ ಕರ್ಮಕ್ಕೆ ಪರತಂತ್ರನೆಂದುಂ, ಪಾಪಿಗಳ್ ಪಡುವ ದುಃಖಮಂ ಪರಿಹರಿಸದೆ ನೋಡುತಿರ್ಪುದೞೆಂ ನಿರ್ದಯನೆಂದುಂ ಸ್ವಲ್ಪಬುದ್ಧಿಗಳ್ಗೆ ತೋರ್ಕು೦. ಇದೞ ನೆಲೆಯಂ ವಿಚಾರಿಸೆ “ನೀನಾಳ್ದನಾದುದೞೆ೦ ನಿನ್ನಾಳ್ಗಳೆನಿಪ ಜೀವರನಿಬರೊಳಂ ಸಮಬುದ್ದಿಯಿಂದೆಲ್ಲರುಂ ನಿನ್ನ ಮನಂಬರ್ಪಂತೆ ಊೞಿಗಮನೆಸಗಿ ಬರ್ದುಂಕವೇೞ್ಪುದೆಂದೆಣಿಸಿ ಇಂತಿಂತುನಡೆವರ್ಗೆ ಮೋಕ್ಷಮೆಂದುಂ ಇಂತಿಂತು ನಡೆವರ್ಗೆ ಇಹಪರಸೌಖ್ಯಮೆಂದುಂ ಮಿತಿಮಾಡಿ ಆಮಿತಿಯೊಳಾರಾವತೆೞದೊಳ್ ನಡೆವರ್ ಅವರವರ್ಗೆ ಆಮಿತಿಮಾಡಿದ ಫಲಮಂ ತಪ್ಪದೆ ಕುಡುವುದರೆಂ ನೀಂ ಸರ್ವಸಮಂ, ನಿನರೊರ್ವರೊಳಂ ವೈಷಮ್ಯವಿಲ್ಲ, ಇಂತು ಅವರವರ ಕರ್ಮಾನುಗುಣಮಾಗಿ ಫಲಂಗಳನಿತ್ತುಂ ನೀಂ ಸ್ವತಂತ್ರನಲ್ಲದೆ ಪರತಂತ್ರವಲ್ತು. ಪಾಪಿಗಳ್ಗೆ ಪಾಪಾನುಗುಣವಮಾದ ದುಃಖಮನೀಯುಂತು ಅಜಾಮಿಳಂ ಮೊದಲಾದ ಓರೊರ್ವರೊಳ್ ಮಿತಿಮೀೞೆ ದಯೆಗೆಯ್ದುದೞುಂ ಪರಮದಯಾಳುವೆನಿಸುವೈ.

                           2. ಭಾಗವತ 

ಇದು ಸಂಸ್ಕೃತಭಾಗವತಕ್ಕೆ ಗದ್ಯರೂಪವಾದ ಟೀಕೆ. ಇದಕ್ಕೆ ಚಿಕದೇವರಾಜಸೂಕ್ತಿವಿಲಾಸ ಎಂದು ಹೆಸರು.

                           3. ಭಾರತ
ಉತ್ತರಪರ್ವಗಳಿಗೆ ಮಾತ್ರ, ಎಂದರೆ ಶಾಂತಿಪರ್ವದಿಂದ ಕನ್ನಡ ಟೀಕೆಯನ್ನು ಬರೆದಿರುವಂತೆ ತೋರುತ್ತದೆ.
                           4. ಶೇಷಧರ್ಮ 

ಇದೂ ಸಂಸ್ಕೃತಕ್ಕೆ ಗದ್ಯರೂಪವಾದ ಕನ್ನಡಟೀಕೆ.

                           5. ಗೀತಗೋಪಾಲ 

ಇದು ಜಯದೇವನ ಗೀತಗೋವಿಂದದಹಾಗೆ ಕೀರ್ತನೆಗಳನ್ನು ಒಳಕೊಂಡಿದೆ. ಇದರಲ್ಲಿ ಪೂರ್ವಭಾಗ, ಉತ್ತರಭಾಗ ಎಂದು ಎರಡುಭಾಗಗಳಿವೆ. ಪ್ರತಿ ಭಾಗದಲ್ಲಿಯೂ 7 ಖಂಡಗಳೂ ಪ್ರತಿಖಂಡದಲ್ಲಿಯೂ