ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

460 ಕರ್ಣಾಟಕ ಕವಿಚರಿತೆ. [17 ನೆಯ 7 ಪದಗಳೂ ಅಥವಾ ಹಾಡುಗಳೂ ಇವೆ. ಈ ಕಾರಣದಿಂದ ಪ್ರತಿಖಂಡಕ್ಕೂ ಕವಿ ಸಪ್ತಪದಿ ಎಂಬ ಹೆಸರನ್ನು ಕೊಟ್ಟಿದ್ದಾನೆ. ಒಂದೊಂದೇ ಸಪ್ತಪದಿಯಲ್ಲಿಯೂ ಹೇಳಿರುವ ವಿಷಯದ ಸಾರಾಂಶವು ಆಯಾಸಪ್ತಪದಿಯ ಆದಿಯಲ್ಲಿ ವಚನರೂಪವಾಗಿ ಕೊಟ್ಟಿದೆ. ಈ ಗ್ರಂಥವನ್ನು ಬರೆವುದಕ್ಕೆ ಕಾರಣವು ಹೀಗೆ ಹೇಳಿದೆ- ಹರಿಸಂಕೀರ್ತ ನಮೊಂದೇ | ಪರಗತಿಗನುಕೂಲಮೆಂದು ನಿರವಿಸಿ ನೆಗೞ್ದಂ ||

ಪಾಲಂ ಬಯಸಿದ ರೋಗಿಗೆ | ಪಾಲಿಂದೌಷಧಮನೀವ ವೈದ್ಯನತೆರದಿಂ |
ದೀಲೋಗರೊಲ್ವ ಗೀತದ | ಮಲದೊಳೇ ಮುಕ್ತಿಗತಿಯ ಮೊಗದೋರೆಸಿದಂ || 
ಈ ಗ್ರಂಥದ “ ಎರಡುಂಭಾಗದೊಳ್ ಶ್ರೀಮನ್ನಾರಾಯಣನ ಗುಣಾನುಭವಮಾದ ನಿತ್ಯಫಲಮಂ ಅವನಡಿದಾವರೆಯೊಳ್ ನಂಬುಗೆಯೆಂಬ ತದುಪಾಯಮುಮಂ” ನಿರೂಪಿಸಿದ್ದಾನೆ. ಚಿಕದೇವರಾಯನ ಪರಾಕ್ರಮಾದಿಗುಣಗಳನ್ನು ವರ್ಣಿಸುವ ಭಾಗವು ಬಿನ್ನಪದಲ್ಲಿರುವುದಕ್ಕಿಂತಲೂ ಇಲ್ಲಿ ಸ್ವಲ್ಪ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ತಿರುಮಲಾರ್ಯನ ಅಪ್ರತಿಮ ವೀರಚರಿತ, ಚಿಕದೇವರಾಜವಿಜಯ ಈ ಗ್ರಂಥಗಳಲ್ಲಿಯ ಪದ್ಯಗಳು ಪ್ರಕೃತಗ್ರಂಥದಲ್ಲಿ ಬಹಳಮಟ್ಟಿಗೆ ದೊರೆವುದರಿಂದ ತಿರುಮಲಾರ್ಯನೇ ಈ ಗ್ರಂಥವನ್ನು ಬರೆದು ತನ್ನ ಸ್ವಾಮಿಯ ಹೆಸರಿನಲ್ಲಿ ಪ್ರಸಿದ್ದಿ ಪಡಿಸಿರಬಹುದು ಎಂಬ ಸಂದೇಹಕ್ಕೆ ಅವಕಾಶವಿದೆ.

ಗ್ರಂಥಾವತಾರದಲ್ಲಿ ಗೋಪಾಲಸ್ತುತಿ ಇದೆ. ಈ ಗ್ರಂಥದಿಂದ ಸ್ವಲ್ಪ ಭಾಗವನ್ನು ತೆಗೆದು ಬರೆಯುತ್ತೇವೆ

                      ಚಿಕ್ಕದೇವರಾಯನ ಸ್ತುತಿ 

ಚದುರಂ ಚಾಗಿಯಲಂವುಗಾರನೆರೆಯಂ ಸಂಗೀತಸಾಹಿತ್ಯ ಕೋ | ವಿದನುತ್ಸಾಹಿ ವಿವೇಕಶಾಲಿ ನಯಶೀಲಂ ನೇಮಗಾರಂ ಕಲಾ || ವಿದನೊಳ್ವಾತುಗನೋಜೆಗಾರನುಚಿತಜ್ಞಂ ಭಾವುಕಂ ಭಾಮಿನೀ | ಹೃದಯಗ್ರಾಹಿ ದಯಾಪಯೋಧಿ ಚಿಕದೇವೇಂದ್ರಂ ಮಹೀಚಂದ್ರಮಂ | ರಾಗ ಖಾಬಿ, ರೂಪಕತಾಳ ಪಲ್ಲವಿ || ನಂಬು ನಂಬು ನಂಬು ನೆರೆ ನಂಬು | ನಂಬು ಶ್ರೀಕೃಷ್ಣಪದಾಂಬುಜಂಗಳ | ಹಂಬಲಿಸದಿರು ಹಲವನು | ಕರಣದೋಷಂಗಳ ಕಳೆವನು | ಕಲ್ಮಷವನೆಲ್ಲ ತೊಳೆವನು |