ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ತಿರುಮಲಾರ್ಯ 461 ಪಿರಿಯರ ಸಂಗತಿಗೆರೆವನು | ಪೆತ್ತನೆಂದೇತರುಗೆದಳೆವನು ||1|| ಪಿಂತಣ ತಪ್ಪ ಮರೆವನು ಬೇಡಿದುದನೆಲ್ಲ ಕರೆವನು | ಅಂತರಂಗದೊಳು ಮೆರೆವನು | ಆನಂದರಸವನೆರೆವನು | ೨ | ಕರ್ಮದ ಬೇರ ಕಡಿವನು | ಕಾಲನ ಬಾಯ ಬಡಿವನು | ನಿರ್ಮಲಮತಿಯ ಕೊಡುವನು | ನೆವವಿಲ್ಲದಕ್ಕ ರುವಡುವನು || 3 | ವುರುಳುಗೊಳಿಸಿ ಪೊರೆವನು | ಪೊಸಿಸಬೇಟದಿ ಬೆರೆವನು || ಎರೆಹೊರೆಯಿಲ್ಲದಿರುವನು | ಎಳೆದ ದಾರಿಗೆ ಬರುವನು ||4 || ಚಿಕದೇವರಾಯನ ದೇವನು | ಸೇವಕಜನರ ಜೀವನು | ಸಕಲವಿಧದೊಳು ಕಾವನು | ಸರ್ವಾಭೀಷ್ಟವನೀವನು | 5 | ತಿರುಮಲಾರ್ಯ 1645-1706 ಈತನು ಅಪ್ರತಿಮವೀರಚರಿತ, ಚಿಕದೇವರಾಜವಿಜಯ, ಜಿಕದೇ ವರಾಜವಂಶಾವಳಿ, ಚಿಕದೇವರಾಜಶತಕ ಈ ಗ್ರಂಥಗಳನ್ನು ಬರೆದಿದ್ದಾನೆ. ಅಲ್ಲದೆ ಮೈಸೂರು ದೊರೆಯಾದ ಚಿಕ್ಕದೇವರಾಜನ (1672-1704) ಹಸರಿನಲ್ಲಿ ಹುಟ್ಟಿರುವ ಗೀತಗೋಪಾಲ, ಚಿಕದೇವರಾಜಬಿನ್ನಪ ಮುಂತಾದ ಗ್ರಂಥಗಳನ್ನೂ ಈತನೇ ರಚಿಸಿದುದಾಗಿ ಪ್ರತೀತಿಯಿದೆ, ಚಿಕದೇವರಾಜಶತಕವು ನಮಗೆ ದೊರೆತಿಲ್ಲ. ಇವನು ಶ್ರೀವೈಷ್ಣಕವಿ ಕೌಶಿಕಗೋತ್ರದವನು; ಇವನ ತಂದೆ ಚಿಕ್ಕದೇವರಾಜನ ತಂದೆಯಾದ ದೊಡ್ಡದೇವರಾಜನ (1659-1672) ಪೌರಾಣಿಕನಾದ ಅಳಸಿಂಗರಾರ್ಯನು, ತಾಯಿ ಸಿಂಗಮೈನು. ಈತನು ಶ್ರೀರಂಗ ಪಟ್ಟಣದಲ್ಲಿ 1645ರಲ್ಲಿ ಜನಿಸಿದನು, ೧೭೦೬ ರಲ್ಲಿ ಮೃತನಾದಂತೆ ಹೇಳುತ್ತಾರೆ; ಚಿಕ್ಕದೇವರಾಜನೊಡನೆ ಬೆಳೆದು ಮಿತ್ರನಾಗಿ ವಿದ್ಯಾಭ್ಯಾಸವನ್ನು ಮಾಡಿ ಆಸ್ಥಾನಪಂಡಿತನಾಗಿದ್ದು ಕೊನೆಗೆ ಆ ದೊರೆಯ ಮಂತ್ರಿಯಾದನು; ಕೆಲವು ಕಾಲ, ಮಧುರೆಯ ನಾಯಕನ ಹೆಂಡತಿ ಮಂಗಮ್ಮನ ಬಳಿಯಲ್ಲಿಯೂ ಮಂತ್ರಿಯಾಗಿದ್ದಂತೆ ತಿಳಿಯುತ್ತದೆ. ಇವನಿಗೆ ತಿರುಮಲಯ್ಯಂಗಾರ್ ಎಂಬ ಹೆಸರೂ ಉಂಟು, “ಅವನೆಲ್ಮೆ ಪುಮಾಕೃತಿವೆತ್ತವೊಲೆಸೆವ ಸುಕೃತಿ