ಈ ಪುಟವನ್ನು ಪರಿಶೀಲಿಸಲಾಗಿದೆ
474 'ಕರ್ಣಾಟಕ ಕವಿಚರಿತೆ. [17 ನೆಯ
ಬ್ರಹ್ಮಾಂಡಪುರಾಣದ ತೀರ್ಥಕಾಂಡದೊಳಗೆ ಉಕ ಅಥವಾ ಕಾಂಚಿಯ ಮಹಾತ್ಮ್ಯವು ಹೇಳಿದೆ. ಈ ಕಾವ್ಯದ ಉತ್ಕೃಷ್ಟ ತೆಯನ್ನು ಕವಿ
ಅಳಿ ಮುಸುಕದ ಸುಮಲತ | ತೆಳವರೆಯದ ಕನ್ನೆಯಂತಿರಿನಿವಾಲಂತು |
ಚ್ವಳಿಪತಿಳಿಜೊನ್ನ ದಂತೆರ್ದೆ | ಗೊಳೆ ಸೇೞ್ವೌಂ ಹಸ್ತಿಗಿರಿಯ ಮಹಾತ್ಮ್ಯಮನಾಂ ||
ಎಂಬ ಪದ್ಯದಲ್ಲಿ ತಿಳಿಸಿದ್ದಾನೆ. ಗ್ರಂಥಾವತಾರದಲ್ಲಿ ವರದರಾಜ ಸ್ತುತಿ ಇದೆ. ಬಳಿಕ ಕವಿ ಲಕ್ಷ್ಮಿ, ಭೂದೇವಿ, ನೀಳಾದೇವಿ, ಅನಂತ, ಗರುಡ, ವಿಶ್ವಕ್ಸೇನ, ದಿವ್ಯಸೂರಿಗಳು, ರಾಮಾನುಜ ಇವರುಗಳನ್ನು ಪರಿವಿಡಿಯಿಂದ ಸ್ತುತಿಸಿದ್ದಾನೆ. ಆಶ್ವಾಸಗಳ ಕೊನೆಯಲ್ಲಿ
ಇದು..................ಕರಿಧರಣೀಧರಶಿಖರಮಂದಿರವರದರಾಜಚರಣರಾಜೀವಮಕರಂದಬೃಂದಾಸ್ವಾದನಮುದಿತದ್ವಿರೇಫಾಯಮಾನ..........ಚಿಕ್ಕದೇವಮಹಾರಾ ಜೇಂದ್ರಸಾಂದ್ರಕೃಪಾಪಾಲಿತಸರ್ವತಂತ್ರಸ್ವತಂತ್ರ ಶ್ರೀಚಿಕ್ಕುಪಾಧ್ಯಾಯವಿರಚಿತಮಸ್ಪ ಹಸ್ತಿಗಿರಿ ಮಹಾತ್ಮ್ಯದೊಳ್
ಎಂಬ ಗದ್ಯವಿದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತೇವೆ ---
ಕನ್ನಡದನಾಡು
ಗಾಡಿಯ ಸೀಮೆ ಚೆಲ್ವೊಗೆವ ತಾಣಮಲಂಪಿನ ಸಂತೆ ಸೆಂಪು ಸಾ |
ರ್ದಾಡುವ ಭೂಮಿ ಸೌಖ್ಯದೆಡೆ ಪುಣ್ಯದ ಗೊತ್ತು ವಿನೋದದಾಗರಂ ||
ಮೋಡಿಯ ಮಂಟಪಂ ಸಿರಿಯ ಪೆರ್ಚುಗೆಗೊಳ್ಮನೆ ಮುಕ್ತಿಕಾಂತೆ ಕೈ |
ಗೂಡುವ ಬೀಡು ಕನ್ನಡದನಾಡು ವಿರಾಜೆಪುದೆಂತು ಒಣ್ಣಿಸೆಂ ||
ವಿಷ್ಣುದರ್ಶನಮಾಡಿದ ಬ್ರಹ್ಮನ ಭಕ್ತ್ಯತಿಶಯ
ಓಡುವನಾಡುವಂ ಒೞಿಕೆ ಸುತ್ತುವನಳ್ಕುವನೊರ್ಮೆ ಹರ್ಷದಿಂ |
ನೋಡುವನೊಲ್ದು ಬೇಡುವನನನ್ಯಮನಂ ಮಿಗೆ ಬೀೞುತೆೞ್ದು ಮುಂ ||
ಡಾಡುವನಪ್ಪವಂ ತಡಹಿ ತಕ್ಕೆಯೊಳಿಟ್ಟು ಬೆಮರ್ತು ಮುದ್ದಿಪಂ |
ಪಾಡುವನೆಯ್ದುವಂ ನಲಿದು ತತ್ಪದದೊಳ ತನುವಂ ಸಮರ್ಪಿಪಂ ||