ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕದ ಭಂಡಗಳನ್ನು ಉತ್ತರದೇಶಕ್ಕೂ ಕಳುಹಿಸುತ್ತಿದ್ದಂತೆಯೂ, 1255 ರಲ್ಲಿ ಕುಂಜನಂಬಿಸೆಟ್ಟ ಎಂಬವನು ಮಾಳವ, ಕಳಿಂಗ, ಚೋಳ, ಪಾಂಡ್ಯ ಈ ರಾಜರುಗಳ ಸಮಯಕ್ಕೆ ಬೇಕಾದ ವಸ್ತುಗಳನ್ನು ಒದಗಿಸಿ ಕೊಡುತ್ತ ಹೊಯ್ಸಳರಾಜ್ಯದಲ್ಲಿ ಕೀರ್ತಿಯನ್ನು ಪಡೆದಿದ್ದಂತೆಯೂ ಕೆಳ ಗಣ ಕಾಸನಪದ್ಯಗಳಿಂದ ತಿಳಿಯುತ್ತದೆ--- ಧರಣೀಪಾಳಕನಪ್ಪ ವೊಯ್ಸಳನ ರಾಜಶ್ರೇಷ್ಠಿಗಳ್ ತಮ್ಮುತಿ | ರ್ಬರೆನಲ್ ವೊಯ್ಸಳಸೆಟ್ಟಿಯುಂ ಗುಣಗಣಾಂಭೋರಾಶಿಯೆಂಬೊಂದು ಸುಂ || ದರಗಂಭೀರದ ನೇಮಿಸೆಟ್ಟಿಯುಮಿವರ್ ಶ್ರೀಜೈನಧರ್ಮಕ್ಕೆ ತಾ | ಯ್ಗರೆಗಳ್ ತಾಮೆನೆ ಸಂದ ವೆಂಪಸದಳಂ ಪರ್ವಿತ್ತು ಭೂಭಾಗದೊಳ್ || ಹರಿಯ ಹಯಕ್ಕೆ ತೋಡೆನಿಪ ಹೇಷಚಯಂಗಳನಿಂದ್ರದಂತಿಯೋಳ4 | ದೆರೆಯೆನಿಸಿರ್ಪ ದಂತಿಗಳನಭ್ರದೊಳಾದ ಸುಸಾಣಿಮುತ್ತಿನೊಳ್ || ಸರಿಯೆನಿಸಿರ್ಪ ಮುತ್ತುಗಳನೆಯ್ದೆ ಬಹಿತ್ರದೆ ತಂದು ಮಾರುದಂ |

ಧರಣಿಪರ್ಗೊಲ್ದು ಕಮ್ಮಟದ. - ಚೆಟ್ಟಪಸಟ್ಟಿ ಸಂತತಂ || 

ಹರಿದಾಶಾಭಾಂಡಮಂ ವಾರುಣಿಗೆ ನಡಸುವಂ ವಾರುಣೀವಸ್ತುವಂ ವಿ | ಸ್ತರದಿಂದಿಂದ್ರಾಶೆಯೊಳ್ ಪೆರ್ಚಿಸುವನೊಸೆದು ಕೌಬೇರಿಯಿಂ ದ್ಯುಮ್ನ ಮ ಂನೋ|| ಡಿರೆ,ಯಾ ಮ್ಯಾಭಾಗದೊಳ್ ಸಂದಿಸುವನೆಸೆವ ಮೌಲ್ಯಂಗಳಂ ಯಾಮ್ಯದಿಂದು| ತ್ತರದಿಕ್ಕಿಂಗಟ್ಟುವಂ ನೋಡನುಪಮವಣಿಜಂ ದಾಸೆಯಂ ದೋಷದೂರಂ2 || ಬೀರನ ಮಾಳವೇಂದ್ರನ ಕಳಿಂಗನ ಚೋಳನ ಪಾಂಡ್ಯಭೂತಳಾ | ಧಾರನ ಮುಟ್ಟಿದೊಂದವಸರಂಗಳನಾಗಳೆ ಪೂಣ್ದು ಮಾರ್ವ ಎ || ಸ್ತಾರದ ಪುಣ್ಯಸಂಪದದಿನೊಪ್ಪುವ ಸೆಟ್ಟಿಗೆ ಕುಂಜನಂ ಏಗಿ | ನ್ಮಾರೆಣೆಯೆಂಬಿನಂ ನೆಗರ್ದನಗ್ಗದ ಹೊಯ್ಸಳರಾಜ್ಯದೊಳ್3 | ಶಿಲ್ಪಿಗಳು---ವಾಸ್ತುವಿದ್ಯಾವಿಶಾರದರಾದ ಶಿಲ್ಪಿಗಳು ಎಲ್ಲೋರ, ಇಟ್ಟಗಿ, ಬೇಲೂರು, ಹಳೆಯಬೀಡು, ಸೋಮನಾಥಪುರ, ನಂದಿ, ಶೃಂಗೇರಿ, ಶ್ರವಣಬೆಳಗೊಳ, ಹಂಪೆ ಮೊದಲಾದ ಸ್ಥಳಗಳಲ್ಲಿ ನಿರ್ಮಿಸಿರುವ


–------------------------ --- ---- ----- ----- ---- ---- ----

1. ಶ್ರವಣಬೆಳುಗೊಳದ ಶಾಸನ ನಂಬರು 137(ಹೊಸಮುದ್ರಣ) 2. ಅರಸೀಕೆರೆ 22, 3. ಅರಸೀಕೆರೆ 108