ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

661 ಶತಮಾನ] ಸಿದ್ದಪ್ಪ ಧೃತರಾಷ್ಟ್ರನನ್ನು ಕುರಿತು ವ್ಯಾಸನುಕ್ಕಿ ನರನು ನಾನಾರೂಪಗಳ ತಾ | ಧರಿಸಿ ಬಹುತರಿಸಾ ಮಗಳನನು | ಕರಿಸಿ ನಾಟ್ಯವನಾಡುವಂದದಿ ದೇಹಿಯಾದವನು || ಪರಿಪರಿಯ ಜನ್ಮಗಳ ಬಳಸುತ | ದುರಿತವೆಚ್ಚಿರೆ ಜನನಮೃತಿಗಳ | ಪರಿವಿಡಿಯಲೋಲಾಡುತಿರ್ಪನು ಕಾಲಗತಿಯಿಂದ ||


ಶಾಂತವೃಷಭೇಶ ಸು 1700 ಈತನು ಅನುಭವಶತಕವನ್ನು ಬರೆದಿದ್ದಾನೆ. ಇವನು ವೀರಶೈವ ಕವಿ. ಶಾಂತೇಶ್ವರನ ಕರುಣದಿಂದ ಈ ಗ್ರಂಥವನ್ನು ಬರೆದಂತೆ ಹೇಳು ತಾನೆ. ಇವನ ಕಾಲವು ಸುಮಾರು 17oo ಆಗಿರಬಹುದು, ಇವನ ಗ್ರಂಥ ಅನುಭವಶತಕ ಇದು ಕಂದದಲ್ಲಿ ಬರೆದಿದೆ; ಪದ್ಯ 115. ತನ್ನ ಗ್ರಂಥವನ್ನು ಶರಣರು ಕೇಳಲು ಭ್ರಾಂತದಬಿದವರು ವೀರಶೈವದ ಮತಮಂ' ಎಂದು ಕವಿ ಹೇಳುತ್ತಾನೆ, ಇದರಿಂದ ಒಂದು ಪದ್ಯವನ್ನು ತೆಗೆದು ಬರೆಯುತ್ತೇವೆ. ಮಾಯದ ತನುವೆಂದೆನ್ನದು | ಹೇಯದ ತನುವೆಂದು ನುಡಿದು ಸೂತಕಗೈಯದು | ಕಾಯ ಶಿವಕಾಯವದನಾ | ಮ್ಯಾ ಯದೊಳಜಿವವನೆ ವೀರಶೈವಾಚಾರಂ || ~--- ಸಿದ್ದಪ್ಪ ಪು. 1700 ಇವನು ನಿದ್ದ ನೀತಿಯನ್ನು ಬರೆದಿದ್ದಾನೆ. ಇತನು ವೀರಶೈವಕವಿ ಯೆಂದು ತೋರುತ್ತದೆ; ಇವನ ತಂದೆ ಅಕ್ಕಪ್ಪ; ಸ್ಥಳ ಕೆಳಲೆಯನಾಡ ತೈಲೂರು, ಇವನು ಸೇನಬೋವನಾಗಿದ್ದನೆಂದು ಹೇಳುತ್ತಾರೆ, ಇವನ ಕಾಲವು ಸುಮಾರು 1700 ಆಗಿರಬಹುದೆಂದು ಊಹಿಸುತ್ತೇವೆ. ಇವನ ಗ್ರಂಧ ನಿದ್ದ ನೀತಿ ಇದು ಕಂದದಲ್ಲಿ ಬರೆದಿದೆ; ಪದ್ಯ 103; ನೀತಿಬೋಧಕವಾದ ಗ್ರಂಥ. ಗ್ರಂಥಾರಂಭದಲ್ಲಿ ಶಿವಸ್ತುತಿ ಇದೆ. ಬಳಿಕ ಕವಿ ವೀರಭದ್ರ, ಗಣೇ,