ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

664 ಕರ್ಣಾಟಕಕವಿಚರಿತ [11 ನೆಯ ಅದ್ಯೆತಾನಂದ ಸು 1700 ಈತನು ಕೇಶವಕತಕವನ್ನು ಒರೆದಿದ್ದಾನೆ. ಇವನು ಬ್ರಾಹ್ಮಣಕವಿ; ಗಾಳಿಪೂಜೆಯ ಪೂರ್ಣಾನಂದಯೋಗೀಶ್ವರನ ಶಿಷ್ಯನು ಇವನ ಸ್ಥಳ ಹಳೆ ಯಬೀಡು, ಈತನು ಸುಮಾರು 1700 ರಲ್ಲಿ ಇದ್ದಿರಬಹುದು | ಇವನ ಗ್ರಂಥ ಕೇಶವಕತಕ ಇದು ಕಂದದಲ್ಲಿ ಬರೆದಿದೆ, ವೇಲಾಪುರಿಯ ಅಧವಾ ಬೇಲೂರ ಚೆನ್ನ ಕೇಶವದೇವರ ಸ್ತುತಿರೂಪವಾಗಿದೆ. ವಿಜಯವೆಂಕಟರವಣ ಸು 1700 ಇತನು ಭ ವಚ್ಛರಿತ್ರೆಯನ್ನು ಬರೆದಿದ್ದಾನೆ. ಇವನು ಬ್ರಾಹ್ಮಣ ಕವಿ. ಇವನ ಪಿತಾಮಹನು ಆತ್ಮೀಯತ್ರದ ನಾಗರಸ, ತಂದೆ ವೆಂಕಟ ಗುರು ಕೌಂಡಿನ್ಯಗೋತ್ರದ ವೆಂಕಟೇಶ, ಸ್ಥಳ ಚಿಕ್ಕಹೆಜ್ಜಾಜಿ. ಇವನ ಕಾಲವು ಸುಮಾರು 17ooಆಗಿರಬಹುದೆಂದು ಊಹಿಸುತ್ತೇವೆ” ಇವನ ಗ್ರಂಥ ಭಗವಚ್ಚರಿತ್ರೆ ಇದು ವಾರ್ಧ ಕಸಟ್ರದಿಯಲ್ಲಿ ಬರೆದಿದೆ, ಅಧ್ಯಾಯ 15 ಇದರೊಳಗೆ ಭಾಗವತಪುರಾಣದಲ್ಲಿ ಉಕ್ತವಾದ ಧ್ರುವತರಿತ ಮೊದಲಾದ ವಿಷಯಗಳು ಹೇಳಿವೆ. ಶಾಂತ ಚಾ ಸ 1700 ಇತನು ಪ್ರಸಾದಚಿಂತಾಮಣಿಗೆ ಕನ್ನಡಟೀಕೆಯನ್ನು ಬರೆದಿದ್ದಾನೆ. ತ ವನು ವೀರಶೈವಕವಿ; ಯೋಗಾಚಾರ್ಸಟ್ಟಲನಿಣFಯಾನ್ವಿತ ಎಂದು ಇನ್ನನು ವಿಶೇಷಿಸಿ ಹೇಳಿಕೊಂಡಿದ್ದಾನೆ, ಇವನ ಗುರು ಸಿದ್ದೇಶ್ವರ, ಈ ಕವಿ ಸುಮಾರು 1700 ರಲ್ಲಿ ಇದ್ದಿರಬಹುದು, ತನ್ನ ಟೀಕೆಯ ವಿಷಯವಾಗಿ ಹೀಗೆ ಹೇಳುತ್ತಾನೆ-- ಪ್ರಸಾದಚಿಂತಾಮಣಿಯೆಂಬ ವೇದಾಗಮನಿರತಾರ್ಧ ಸಂಗ್ರಹದಲ್ಲಿ ಗುರುಲಿಂಗ ಜಂಗಮಪಾದೋದಕಪ್ರಸಾದಚರವಿಶೇಷೋತ್ಪತ್ತಿಯಂ ಅನ್ಯಮತ ಶಾಸ್ತ್ರಂಗಳಲ್ಲಿ ಪ್ರತ್ಯಕ್ಷ ಪ್ರಮಾಣದಿಂ ಪೇಟ್ಟಿ ಸೆಂ. ಅಷ್ಟಾಂಗಯೋಗಸಂಪನ್ನರಾದ ಷಟೈಲಬ್ರಹ್ಮಸಮಾಧಿ ಸಿದ್ಧೇಶ್ವರನ ವರಕಾ ರುಣ್ಯ ಕೃಪಾವಲೋಕನದಿಂದ ಈ ಪ್ರಸಾದಚಿಂತಾಮಣಿಯಲ್ಲಿ ತೀರ್ಧಪ್ರಸಾದಗುರುಲಿಂ