ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

f17 ಸಿತ; ಕರ್ಣಾಟಕ ಕವಿಚರಿತೆ ಚೆನ್ನವೃಷಭ ಸು 1700 ಈತನು ನುಲಿಯಚಂದಯ್ಯನ ಕಥೆಯನ್ನು ಬರೆದಿದ್ದಾನೆ. ಇವನು ವೀರಶೈವಕವಿ ಕರಪುರೀತನ ಕರುಣದಿಂದ ತನ್ನ ಗ್ರಂಥವನ್ನು ಬರೆದಂತ ಹೇಳುತ್ತಾನೆ, ಇವನು ಸುಮಾರು 17oo ರಲ್ಲಿ ಇದ್ದಿರಬಹುದೆಂದು ತೋರು ಇದೆ, ಇವನ ಗ್ರಂಥದಲ್ಲಿ 25 ಹಾಡುಗಳಿವೆ, ನುಲಿಯಚಂದಯ್ಯನು ಬಸ ವನ ಸಮಕಾಲದವನು; ನೊದೆಯಹುಲ್ಲ ನುಲಿಹೊಸೆದು ಕಲ್ಯಾಣಪುರದಲ್ಲಿ ಮಾರಿ ಜೀವಿಸುತ್ತಿದ್ದನು. ಸಿದ್ಧ, ಸು 1700 ಈತನು ಸಿರುಮನ ಸಾಂಗತ್ಯವನ್ನು ಬರೆದಿದ್ದಾನೆ. ಇವನು ವೀರ ಶೈವಕವಿ; ಸುಮಾರು 1poo ರಲ್ಲಿ ಇದ್ದಿರಬಹುದು, ಇವನ ಗ್ರಂಥ - ಸಿರುಮನ ಸಾಂಗತ್ಯ ಸಂಧಿ 5, ಮದ್ಯ 6 26, ಇದರಲ್ಲಿ ಶಿವಭಕ್ತನಾದ ಗೊಲ್ಲಸಿರುಮನ ಕಥೆ ಹೇಳಿದೆ. ರಾಮಚಂದ್ರ ಕವಿ ಸು 1200 ಈತನು ಮಲ್ಲಿಕಾರ್ಜುನಕತಕವನ್ನು ಬರೆದಿದ್ದಾನೆ; ಪಾರ್ವತಿ ಸೋಬಾನೆಯನ್ನೂ ಬರೆದಿರುವಂತೆ ತೋರುತ್ತದೆ. ಅಲ್ಲದೆ ಇವನು ಮಾ ಡಿದ ವೀರಭದ್ರರಾಜಸ್ತುತಿರೂಪವಾದ ಕೆಲವು ಪದ್ಯಗಳೂ ದೊರೆಯುತ್ತವೆ ಇವನು ಬ್ರಾಹ್ಮಣಕವಿ; ತಮ್ಮಯಾನ್ಯನ ಮಗನು, ಇವನ ಕಾಲವು ಸುಮಾರು [700 ಆಗಿರಬಹುದು. ಇವನ ಗ್ರಂಥಗಳಲ್ಲಿ 1 ಮಲ್ಲಿಕಾರ್ಜುನಶತಕ ಇದು ವೃತ್ತಗಳಲ್ಲಿ ಬರೆದಿದೆ, ಮಲ್ಲಿಕಾರ್ಜನಶಿವಸ್ತುತಿರೂಪ ಪಾಗಿದೆ. 2. ಪಾರ್ವತಿಯ ಸೋಬಾನೆ ಇದರಲ್ಲಿ 27 ಹಾಡುಗಳಿವೆ; ಒಂದು ನುಡಿಯನ್ನು ಉದಾಹರಿಸುತ್ತೇವೆ