ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

389 ಕರ್ಣಾಟಕ ಕವಿಚರಿತ [12 ನೆಯ 17೧೦ ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ, ಟೀಕೆಯ ಕೊನೆಯಲ್ಲಿ ಈ ಗದ್ಯವಿದೆ ಇತಿ ಶ್ರೀಮದ್ಯದ ರೇದಾಂತಾಗಮಪುರಾಣಸ್ಕೃತೀ ತಿರಾ ಪ್ರತಿಪಾದಿತ ಶ್ರೀವೀ ರಶೈವಮಾರ್ಗ ಸ್ಥಾಪನಾಚಾವ್ಯಶ್ರೀಬಸವಾರಾಧ್ಯ ವಿರಚಿತ ಕರ್ಣಾಟಕವೇ ಕಾ ಸಮಾಪ್ತಾ - ದೈವಜ್ಞವಲ್ಲಭ ಸು 1700 ಈತನು ಮಹಾವೀರಾಚಾಯ್ಯನ ಗಣಿತಕ್ಕೆ ಕನ್ನಡವ್ಯಾಖ್ಯಾನವನ್ನು ಬರೆದಿದ್ದಾನೆ. “ಆಂಧ್ರಭಾಷಾಮಯವ್ಯಾಖ್ಯಾನಕರ್ತಾ ಶ್ರೀವತ್ಸರ್ವ ಮಂತ್ರ ಪ್ರಸಾದಾಸಾದಿತಗಣಿತಶಾಸ್ತ್ರತತ್ವತ್ಥೇನ ದೈವಜ್ಞವಲ್ಲಭಾಖ್ಯೆನ ವಿರ ಚಿತಾ” ಎಂಬುದರಿಂದ ಇವನು ಈ ಗಣಿತಕ್ಕೆ ತೆಲುಗಿನಲ್ಲಿಯೂ ವ್ಯಾಖ್ಯಾನ ವನ್ನು ಬರೆದಿರುವಂತೆಯೂ ಸರ್ವಮಂತ್ರ ಎಂಬವನಿಂದ ಗಣಿತಶಾಸ್ತ್ರ ವನ್ನು ಕಲಿತಂತೆಯೂ ತಿಳಿಯುತ್ತದೆ. ಬಾಲಬೋಧಾಖ್ಯಕರ್ಣಾಟದೇ ಶೀಯಭಾಸಾಯಟೀಕಾ' ಎಂಬುದರಿಂದ ಇವನ ಕನ್ನಡ ವ್ಯಾಖ್ಯಾನಕ್ಕೆ ಬಾಲಬೋಧ ಎಂಬ ಹೆಸರನ್ನು ಇಟ್ಟಿರುವಂತೆ ತಿಳಿಯುತ್ತದೆ. - ಬಸವಪ್ಪನಾಯಕ, ಸು€ 1700 ಈತನು ಸೂಕ್ತಿಸುಧಾಕರನೆಂಬ ವಸ್ತುಕ ಕಾವ್ಯವನ್ನು ಗೀರ್ವಾಣ ಕರ್ಣಾಟಕಭಾಷೆಗಳಿ೦' ರಚಿಸಿದಂತೆ ಕೆಳದಿನೃಪವಿಜಯದಲ್ಲಿ ಹೇಳಿದೆ ಈ ಗ್ರಂಧವು ನಮಗೆ ದೊರೆತಿಲ್ಲ. ಇವನು ಇಕ್ಕೇರಿಯ ಅರಸರಲ್ಲಿ ಒಬ್ಬನು; 1697 ರಿಂದ 1714ರ ವರೆಗೆ ಆಳಿದನು. ದೇವರಕ, ಸು 1700 ಈತನು ಶ್ರೀಪಾಲಚರಿತೆಯನ್ನು ಬರೆದಿದ್ದಾನೆ. ಇವನು ಜೈನಕವಿ, ವರ್ಧಮಾನ ಭಟ್ಟಾರಕನ ಶಿಪ್ಪನು ಇವನ ಕಾಲವು ಸುಮಾರು 17oo. ಆಗಿರಬಹುದು. ಇವನ ಗ್ರಂಧ ಶ್ರೀಪಾಲಚರಿತೆ ಇದು ಸಾಂಗತ್ಯದಲ್ಲಿ ಬರೆದಿದೆ, ನಮಗೆ ದೊರೆತ ಅಸಮಗ್ರಪತಿ ಯಲ್ಲಿ 2 ಸಂಧಿಗಳಿವೆ.