ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ಕರ್ಣಾಟಕ ಕವಿಚರಿತ AppendiX 1 ಪರಿಶಿಷ್ಯ 1 ಕರ್ನಾಟಕ ಕವಿಚರಿತೆಯ ದ್ವಿತೀಯಸಂಪುಟಕ್ಕೆ ಸೇರಬೇಕಾದ ಕೆಲವರು ಕವಿಗಳ ವಿಷಯ ಬಾಯಣಾಚಾರ್, ಸು, 1410 - ಇತನು ದಾವಣಗೆರೆ 23 ನೆಯ ಶಾಸನವನ್ನು ಬರೆದಂತೆ ಆ ಶಾಸ ನದ ಕೊನೆಯಲ್ಲಿರುವ “ ಈ ಶಾಸನ ಕೃತಿಯನು ಹೇಟ'ದುದಕೆ ಕಾಶ್ಯಪ ಗೋತ್ರದ ಯಜುಶ್ಯಾಖೆಯ ಚಲಸಂಪ್ರದಾಯದ ಮಲ್ಲಿಕಾರ್ಜನಾಚಾರರ ಮಕ್ಕಳು ಬಾಯಣಾಚಾರರಿಗೆ ಧಾರಾಪೂರ್ವಕವಾಗಿ ಕೊಟ್ಟುದು ಎಂಟು ಕೊಳಗದ ಗದ್ದೆ” ಎಂಬ ವಾಕ್ಯದಿಂದ ತಿಳಿಯುತ್ತದೆ. ಯದ್ಯಪಿ ಈ ಶಾಸ ನವು ಸಂಸ್ಕೃತಶ್ಲೋಕರೂಪವಾಗಿದ್ದರೂ ಅಲ್ಲಲ್ಲಿ ಕನ್ನಡಗದ್ಯಭಾಗಗಳೂ ಕೊನೆಯಲ್ಲಿ ಎರಡು ಕಂದಗಳೂ ಇರುವುದರಿಂದ ಬಾಯಣಾಚಾರ್ನು ಕನ್ನಡಕವಿಯೂ ಆಗಿದ್ದನು ಎಂಬುದರಲ್ಲಿ ಸಂಶಯವಿಲ್ಲ. ಈ ಶಾಸನವ ವಿಜಯನಗರದ ರಾಜನಾದ 1ನೆಯ ದೇವರಾಜನೆ (1406-1416) ಆಳಿಕೆಯಲ್ಲಿ ಶಕ 1332 ನೆಯ ವಿಕೃತಿಯಲ್ಲಿ ಬರೆದುದು, ಇದರಲ್ಲಿ ಹೊನ್ನನಿಕ್ಕಿ ಹರಿದ್ರಾನದಿಯನ್ನು ಕಟ್ಟಿ ಹರಿಹರಕ್ಕೆ ಕಾಲುವೆ ಯನ್ನು ತಂದ ಮಹಾಜನಗಳಿಗೆ ಆ ಕಾಲುವೆಯ ಕೆಳಗೆ ಒಂದು ಪಾಲು ಭೂಮಿಯ ಹರಿಹರದೇವರಿಗೆ ಎರಡು ಏಾಲು ಭೂಮಿಯ ಸಲ್ಲಬೇ ಕೆಂದು ನಿರ್ಣಯವು ಮಾಡಲ್ಪಟ್ಟಿದೆ, ಇದರ ಕೊನೆಯಲ್ಲಿರುವ ಸದ್ಯಗ ಳನ್ನು ತೆಗೆದು ಬರೆಯುತ್ತೇವೆ - ಅಗುಹದನವಮದಸಂ | ಹರಣಂಗಳ್ ಎಮಲಕರಣಭಟಕಾನೀಕೊ | ದೃರಣಂಗಳ* ಹರಿಹರವರ | ಚರಣಂಗಳ ಪೊರೆಗೆ ಧರೆಯನಾಚಂದ್ರಾರ್ಕ೦ || ಹರಿಹರಸೇವಾ ಪರಿಣತ | ಕರಣಂ ಸಂಗಾಯಪುಣ್ಯ ಜಠರಾಗ್ನಿ ಸುಧಾ || ಕಿರಣಂ... ........ ... ..... .... ಶಿಲಾಶಾಸನಮಂ ||