ಪುಟ:ಕರ್ನಾಟಕ ಗತವೈಭವ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


श्री
ಕರ್ನಾಟಕ - ಗತ ವೈಭವ

೧ನೆಯ ಪ್ರಕರಣ


ಈ ಮೃತವಾದ ಕರ್ನಾಟಕದಿಂದೇನು?

कार्पण्यदोषोपहतः स्वभावः पृच्छामित्वां धर्मसंमूढचेताः।
यच्छ्रेय: स्यान्निश्चितं ब्रूहि तन्मे शिष्यस्तेऽहं शाधि मां त्वां प्रपन्नम् ॥

- ಗೀತಾ, ೨. ೭.

ಕಕ್ಕುಲತೆಯಿಂ ಕೆಟ್ಟ ಚಿತ್ತದಿ |
ಸೊಕ್ಕಿ ಧರ್ಮದ ನೆಲೆಯ ಕಾಣದ |
ಚಿಕ್ಕವನು ನಾನಿಮ್ಮ ಕೇಳುವೆ ಲೇಸದಾವುದನು ||
ಸಿಕ್ಕರಿಯೆ ಪೇಳೆನಗೆ ನೀ ಹಿಂ |
ದಿಕ್ಕಿಕೋ ಮರೆವೊಕ್ಕೆನೆನ್ನನು |
ಮಕ್ಕಳೋಪಾದಿಯಲಿ ರಕ್ಷಿಸಿ ಕಾಯಬೇಕೆಂದ ||

-ನಾಗರಸ

ಮ್ಮ ಭರತಭೂಮಿಯ ಈಗಿನ ಸ್ಥಿತಿಯನ್ನು ಕಂಡು, ತಳಮಳ ಗೊಂಡು, ಅದರ ಉದ್ಧಾರಾರ್ಥವಾಗಿ ಹಲವು ಪುಣ್ಯಾತ್ಮರು ಹಲವು ಬಗೆಗಳಿಂದ ಪ್ರಯತ್ನ ಪಡುತ್ತಿರುವರಷ್ಟೆ! ಈ ಬಗೆಯ ಪ್ರಯತ್ನಗಳಲ್ಲಿ, ನಮ್ಮ ದೇಶದ ಬುದ್ಧಿ ಸಾಮರ್ಥ್ಯವನ್ನೂ,ವೈಭವವನ್ನೂ, ಜನರ ನೆನಪಿಗೆ ತಂದುಕೊಟ್ಟು, ಅವರಲ್ಲಿ ತಮ್ಮ ಪೂರ್ವಜರ ವಿಷಯವಾಗಿಯೂ, ಪೂರ್ವ ಸಂಸ್ಕೃತಿಯ ವಿಷಯವಾಗಿಯೂ, ಪೂರ್ವದ ಘನತೆಯ ವಿಷಯವಾಗಿಯೂ, ಸಾನಂದಾಶ್ಚರ್ಯವಾದ ಅಭಿಮಾನ