ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಗ್ರಂಥಮಾಲೆ ಧೈಠ್ಯವು ನಾನಾವಿಧಗಳಲ್ಲಿ ತೋರ್ಪಡುವುದು, ತನಗೆ ಅಪಾರು ವಾಗುವುದೆಂಬ ಪರಿಜ್ಞಾನವೇ ಇಲ್ಲದೆ ಪ್ರವರ್ತಿಸತಕ್ಕುದು ಒಂದು ವಿಧ. ಮಗುವು ಹರಿಯುವ ಹಾವನ್ನು ಅಥವಾ ದೀಪವನ್ನು ಥಟ್ಟನೆ ಹಿಡಿದುಕೂ ಳ್ಳುವುದು ಇದಕ್ಕೆ ದೃಷ್ಟಾಂತವು ಆದರೆ ಈ ವಿಧವಾದ ದೈತ್ಯದಲ್ಲಿ ಆ ಜ್ಞಾನವು ಬೆರೆತಿರುವುದು. ಅಪಾಯದ ಸ್ವರೂಪವನ್ನು ತಿಳಿದಿದ್ದರೂ ತನ್ನ ಬಲಾಬಲಗಳನ್ನು ಯೋಚಿಸದೆ ಅವಿವೇಕವಾಗಿ ನುಗ್ಗಿ ನಡೆಯುವುದು ಎರಡ ನಯವಿಧ, ನಿರಾಯುಧನಾಗಿ ಏಕಾಂಗಿಯಾಗಿ ಹುಲಿಯನ್ನು ಎದುರಿಸುವುದು ಇದಕ್ಕೆ ಉದಾಹರಣೆ. ಒಂದು ಭೀತಿಯನ್ನು ತಪ್ಪಿಸಿ ಕೊಳ್ಳುವುದಕ್ಕೂ ಸ್ವರ ಮತ್ತೊಂದು ಅಂಚಿಕೆಯನ್ನು ಪ್ರತಿಭಟಿಸುವುದೂ ಉಂಟು, ಒಬ್ಬಳ ಟನು ತಾನು ಯುದ್ಧ ರಂಗವನ್ನು ಬಿಟ್ಟು ಓದಿದರೆ ದಳಪತಿಯು ತನ್ನನ್ನು ಗುಂಡಿನ ಬಾಯಿಗೆ ಕೊಡುವನೆಂಬ ಹೆದರಿಕೆಯಿಂದ ತನಗೆ ಇಷ್ಟವಿಲ್ಲದಿ ದ್ದರೂ ಶತ್ರುಗಳ ಮೇಲೆ ನುಗ್ಗಿ ಯುದ್ಧ ಮಾಡುವನು. ಇದು ನಿಜವಾದ ಧೈರವಲ್ಲ, ಸ್ವಾರ್ಥ ಪರತೆಯಿಂದಮಾಡುವ ಕುಯುಕ್ತಿಯು, ಹೇಗೆಂದರೆಯುದ್ಧ ಮಾಡುವುದರಲ್ಲಿ ಜಯಿಸುವಸಂಭವ ವಿರುವುದೆಂಬ ಆಸೆಯಾದರೂ ಉಂಟು. ತಪ್ಪಿಸಿಕೊಂಡು ಓಡುವುದಾಗಿ ಯತ್ನಿಸಿದರೂ ಪ್ರಬಿಡ ಬೇ ಆಗುವುದೇನಿದ್ದವು. ಮನೆಯ ಹೊತ್ತಿಕೊಂಡಾಗ ಉರಿಯೊಳಗೇ ನುಗ್ಗಿ ಹೋಗಿ ಇತರರನ್ನು ಕಾಪಾಡುವುದಕ್ಕೆ ಯತ್ನಿಸುವುದು. ನೀರೊಳಗೆ ಮುಳುಗಿದವರನ್ನು ಈಚೆಗೆ ಸೆಳೆದುಹಾಕುವುದು, ಎತ್ತರವಾದ ಸ್ಥಳದಿಂದ ಧುಮುಕುವುದು ಶಸ್ತ್ರಗಳ ಏಟಿಗೆ ಹಿಂಜರಿಯದೆ ಯುದ್ಧ ಮಾಡುವುದು. ಇವು ಗಳೆಲ್ಲಾ ಒಂದು ವರ್ಗಕ್ಕೆ ಸೇರಿದಧೈರಕಾರಿಗಳು, ಅನಾಗರಿಕರಾದ ಕಾಡುಜನಗಳಲ್ಲೂ ಇಂಥಧ್ಯೆಶ್ಯವಿದ್ದಿತು. ಇಂಥ ಧೈಠ್ಯವು ಪ್ರಯಕಃ ದೇಹಬಲದ ಕುಕವಾಗಿಯೇ ಹರಸರುವುದು,