ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡವಳಿ ವೆನಿಸಿಕೊಂಡಿತಾದರೂ ಬದುರ್ಯವೆಂಬ ಗಣವೆಲ್ಲಾ ದಾನಮಾಡುವುದೆಂ ಬುದೊಂದರಲ್ಲಿಯೇ ಅಡಕವಾಗುವುದಿಲ್ಲ. ನಿಸ್ಪಕ್ಷಪಾತವಾಗಿ ಗn ಗ್ರಹಣ ಮಾಡುವುದೂ ಒಂದು ಬಗೆಯ ಔದಾರ್ಯ, ಲೋಕದಲ್ಲಿ ಎಲ್ಲಿ ನೋಡಿದರೂ ಒಬ್ಬರನ್ನು ಕಂಡು ಮತ್ತೊಬ್ಬರು ಕರುಬದೆ ಇರು ವುದೇ ಕಡಿಮೆ. ಅದರಲ್ಲೂ ಒಂದೇ ವೃತ್ತಿಯಲ್ಲಿರುವ ಸರಿಸಮಾನಸ್ಕಂ ಧರಂತು ಸರದಾ ಹೊಟ್ಟೆಕಿಚ್ಚಿನ ಮೊಟ್ಟೆಗಳಾಗಿರುತ್ತಾರೆ. ಒಬ್ಬ ಕವಿಯು ಮತ್ತೊಬ್ಬ ಕವಿಯನ್ನು ಹಳಿಯುವುದು, ಒಬ್ಬ ಅಧಿಕಾರಿಯು ಮತ್ತೊಬ್ಬ ಅಧಿಕಾರಿಯ ದೋಷಗಳನ್ನೇ ಎತ್ತಿಯಾಗುವುದು. ಒಬ್ಬ ಬಡಗಿಯು ಇನ್ನೊಬ್ಬ ಬಡಗಿಯು ಮಾಡಿದ ಸಾಮಾನುಗಳಲ್ಲಿ ಕೊರತೆ ಗಳನ್ನೇ ಎಣಿಸುವುದು. ಹೀಗೆ ತನ್ನಂತಿರುವ ಇತರರ ಹುಳುಕನ್ನು ಮಾತ್ರ ಹುಡುಕಿ ಹೊರಗೆ ಹಾಕುವುದೇ ಹೊರತು ಅವರಲ್ಲಿ ಯ ಅವರ ಕೆಲಸಗಳಲ್ಲಿಯ ದೋಷಗಳಿಗಿಂತ ಹೆಚ್ಚಾದ ಎಷ್ಟೇ ಸುಗುಣಗಳಿದ್ದರೂ ಅದನ್ನು ಪರಿಗಣಿಸದೆ ಮಲೆ ಗೊತ್ತುವರು. ಉದಾರಗುಣ ಪರಿಪೂರ್ಣ ರಾದ ಮಹಾನುಭಾವರಾದರೋ ಎಂದಿಗೂ ಹಾಗೆ ಮಾಡದೆ ಇತರರ ಸುಗುಣಗಳನ್ನು ಶ್ಲಾಘಿಸುವರು, ನಮ್ಮ ಉತ್ತರ ಹಿಂದುಸ್ಥಾನದ ರಾಜಪುತ್ರರು ಗುಣಗ್ರಹರೂಪ ವಾದ ಔದಾರ್ಯಕ್ಕೆ ಸುಪ್ರಸಿದ್ಧರಾಗಿದ್ದಾರೆ ಅವರು ಯುದ್ಧಕ್ಕೆ ನಿಂತಾಗ ಶತ್ರುಪಕ್ಷದವರು ತಮ್ಮ ಮೇಲೆ ನುಗ್ಗಿ ಮಾಡುವ ಸಾಹಸಗಳನ್ನು ಕೂಡ ಮೆಚ್ಚುವರು. ತಾವು ಕೈಲಿ ಕತ್ತಿಯನ್ನು ಹಿಡಿದಿರುವಾಗ ವೈರಿಯು ಬರಿಕೈಯ್ಯಲ್ಲಿ ಎದುರಿಸುವುದಕ್ಕೆ ಬಂದರೆ ಅವನಿಗೂ ಒಂದು ಕತ್ತಿಯನ್ನು ಕೊಟ್ಟು ಅಥವಾ ತಾವೇ ಬರಿಗೈಯಲ್ಲಿ ನಿಂತಾದರೂ ಯುದ್ಧ ಮಾಡುವರು. ಇವರು ಇತರರ ಸ್ಥಿತಿಯನ್ನು ತಾವೇ ಅವರಾಗಿದ್ದರೆ ಹೇಗೋಹಾಗೆ ಭಾವಿಸ 13