ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಗ್ರಂಥಮಾಲೆ wwwwwwwwwww ದರು. ಹಿಂದೆ ಆರ್ಕಾಡಿನ ಮುತ್ತಿಗೆಯಲ್ಲಿ ಬಹಳ ಸಾಹಸವನ್ನು ತೋರಿ ಸಿದುದಕ್ಕಾಗಿ ಮೆಚ್ಚಿ ಕೈವನಿಗೆ ಇಂಡಿಯಾ ಕಂಪೆನಿಯವರು ವಜ್ರ ಗಳನ್ನು ಕೆತ್ತಿದ ಹಿಡಿಯುಳ್ಳ ಅಮವಾದ ಒಂದು ಕತ್ತಿಯನ್ನು ಬಹು ಮಾನವಾಗಿ ಕೊಡಹೋಗಲು ಆತನು ತನಗೆ ಮೇಲ್ಪಟ್ಟ ಅಧಿಕಾರಿಯಾಗಿ ಮದ್ರಾಸಿನಲ್ಲಿ ಕೆಲಸಮಾಡುತ್ತಿದ್ದ ಮೇಜರ್‌ಲಾರೆನ್ಸ್ನಿಗೆ ಆ ಬಹುಮಾ ನವು ಸಲ್ಲಬೇಕಾದುದು ಯುಕ್ತವೆಂದು ಹೇಳಿದುದರಿಂದ ಆತನ ಆದಾಗ್ಯವು ಇನ್ನೂ ಚೆನ್ನಾಗಿ ಪ್ರಕಟಗೊಂಡಿತು. ಹಿಂದೆ ಸಿಂಧುದೇಶಕ್ಕೆ ಮುತ್ತಿಗೆ ಹಾಕಬೇಕೆಂದು ಸರ್‌ಜೇಮ್ಸ್ ಉಟಾಮನಿಗೆ ಮೇಲಿನವರು ಅಪ್ಪಣೆ ಮಾಡಲು ಆತನು ಅಲ್ಲಿ ಬಹಳ ಸಾಹಸವಾಡಿ ಗೆದ್ದನು. ಅಲ್ಲಿ ನಡೆಯಿ ಬದ ಊಟಿಯಲ್ಲಿ ಲಕ್ಷಾಂತರ ದ್ರವ್ಯವು ಸಿಕ್ಕಿತು. “ ಇದೆಲ್ಲಾ ನಿನ್ನ ಸಾಹಸದಿಂದ ದೊರೆತುದಾದುದರಿಂದ ನೀನು ಬೇಕಾದಷ್ಟನ್ನು ತೆಗೆದುಕೊ ಎಂದು ಮೇಲ್ಪಟ್ಟವರು ಉಟಾಮನಿಗೆ ಹೇಳಲು ಆತ ನು-ಇದು ನನ್ನ ಸೈನಿಕರ ಪರಾಕ್ರಮದಿಂದ ಬಂದದ್ದು ಆಗದರಿಂದ ಎಲ್ಲವೂ ಅವರಿಗೇ ಸೇರತಕ್ಕದ್ದು ನಾನು ಬಲ್ಲೆನು ' ಎಂದು ಹೇಳಿಬಿಟ್ಟನಂತೆ ! ಬಂದೇ ತರ. ಗತಿಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳಲ್ಲಿ ಚೆನ್ನಾಗಿ ವ್ಯಾಸಂಗ ಮಾಡಿದವನೊಬ್ಬನು ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಇನ್ನೊಬ್ಬನು ಸಂತಪ್ಪಿಸುವುದು ಔದಾರ್ಯ, ಕರುಬುವುದು ಹೀನಾಯ. ಈ ವಿಷ ಯವಾಗಿ ಇನ್ನೂ ಎಷ್ಟೋ ಉದಾಹರಣೆಗಳಿರುವುವು - ವಾತಾಡುವುದರಲ್ಲಿ ಕೂಡ ಔದಾರ್ಯವು ಆವಶ್ಯಕ. ಮನುಷ್ಯ ರೆಲ್ಲರೂ ಸಂಘದಲ್ಲಿ ಜೀವಿಸತಕ್ಕ ಪ್ರಾಣಿಗಳು, ಹುಲಿಕರಡಿಗಳಂತೆ ಕಾಡಿನಲ್ಲಿ ಒಂಟೊಂಟಿಯಾಗಿರತಕ್ಕವರಲ್ಲ. ಇವರು ತಮ್ಮ ಮಂಡಲಿಯ ನಡುವೆ ಸರಿಯಾಗಿ ಬಾಳಬೇಕಾದರೆ ಇತರರ ಮನಸ್ಸು ನೋಯದಂತೆ ಯ ಅವರ ಉಲ್ಲಾಸವು ಕುಂದದಂತೆ ನಡೆದುಕೊಳ್ಳಬೇಕು