ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ho೬ ಅವರ ಮನೋಭಾವಗಳನ್ನು ತಿಳಿಯಬೇಕಾದುದು ಮೊದಲನೆಯ ಕಲಸ ನಾವು ದಯಾಳುಗಳಾಗಿ ಮೃದುವಾದ ಧ್ವನಿಯಿಂದ ತಕ್ಕ ಉತ್ತರಗಳನ್ನು ಹೇಳಬೇಕು. ಹೀಗೆ ಮಾಡುತ್ತ ಬಂದರೆ ಇಬ್ಬರ ಮನಸೂ ಸಂತೋಷ ದಿಂದ ತೃಪ್ತಿಗೊಳ್ಳುವುದು. ಮತ್ತು ಅನೇಕರು ಸಲಹೆಗಾಗಿ ನಮ್ಮಲ್ಲಿಗೆ ಬರುವರು, ಬೇಸರ ಪಡದೆಯ ಬಡುಕಿಲ್ಲದೆಯ ಮೃದುವಾದ ಸ್ವರ ದಿಂದ ಹೇಳುವ ಉತ್ತರವು ಕೇಳುವವರಿಗೆ ಕರ್ಣಾಮೃತಾಯವಾಗು ವುದು, ಏತಕ್ಕೆ ಇತರರು ನಕ್ಕರೂ ನನ್ನನ್ನೇ ನೋಡಿ ನಕ್ಕರಂದು ಸಂಶ ಹರಡಬಾರದು. ಒಂದುವೇಳೆ ಹಾಗೆ ಅದೇ ದಿಟವಾಗಿದ್ದರೆ ನಾವೂ ಅವ ರೊಚನೆ ನಕ್ಕು ಬಿಡುವುದೆಖಳ್ಳೆಯದು. ಆಗ್ಗೆ ಅವರು ಸುಮ್ಮನಾಗುವರು. ಮತ್ತು ಇದರಿಂದ ಅವರ ವಿನೋದದಲ್ಲಿ ನನಗೂ ಸ್ವಲ್ಪಭಾಗವು ಸಿಕ್ಕಿದಂ ಆಗುವುದು. ಹಾಗೆ ಮಾಡದೆ ತಲೆಯನ್ನು ತಗ್ಗಿಸಿಕೊಂಡರೆ ಮತ್ತಷ್ಟು ಬೆಚ್ಚಿ ಬೀಳಬೇಕಾಗುವುದು. ನಾವು ನ್ಯಾಯವಾಗಿ ನಡೆದಿದ್ದರೂ ಅದನ್ನು ತಿಳಿಯದೆ ಇತರರು ಪರಿಹಾಸ ಮಾಡಿದರೆ ಅದಕ್ಕಾಗಿ ನಾವು ವೃಥಾ ಕೊರಗ ಬಾರದು. ಇದರಿಂದ ಆರೋಗ್ಯಕ್ಕೆ ಭಂಗ ಬಂದೀತು. ಸ ವಿಷಯವನ್ನು ಹೊಗಳಿಕೊಳ್ಳುವುದು ಅಥವಾ ದೂಷಿಸಿಕೊಳ್ಳು ವುದು ಇವೆರಡೂ ನಮ್ಮ ಕೆಲಸವಲ್ಲ. ಇತರರಿಗೆ ಸೇರಿದುದು ಅವರಿಬ್ಬ ಬಂದಂತ ಆಡಿಕೊಳ್ಳಲಿ ಅನಾವಶ್ಯಕವಾಗಿ ಇಂಥವರು ಕಟ್ಟವರು ಎಂದು ನಾವಾಗಿಯೇ ಯಾರನ್ನೂ ದೂರಬಾರದು, ಮತ್ತು ಒಂದು ಜನಾಂಗದವರು ಮತ್ತೊಂದು ಜನಾಂಗದವರನ್ನು ಹೀಯಾಳಿಸುವುದು ಮೊದಲಾದುದು ಅದು ಇವು. ಆದರೆ ಇದಕ್ಕಿಂತಲೂ ಒಂದು ವ್ಯಕ್ತಿಯು ಮತ್ತೊಂದು ವ್ಯಕ್ತಿ ಯನ್ನು ದೂಷಿಸುಸಂಜೆ ತಪ್ಪೇ ಲೋಕದಲ್ಲಿ ಅತಿಯಾಗಿದೆ. ಇತರರನ್ನು ದೂರಿ ಆಚರಿಸಾಡಿ ಹೀಯಾಳಿಸುವುದರಿಂದ ನಮಗೆ ಯಾವ ಪ್ರಯೋ ಜನವೂ ಉಂಟಾಗಲಾರದಲ್ಲದೆ ನಮ್ಮ ಕೆಲಸಗಳು ಇಟ್ಟು ಹೋಗುವುದು