ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

nammannannan ಅ ಟ 4 ಕರ್ಣಾಟಕ ಗ್ರಂಥಮಾಲೆ ಖಂಡಿತ, ಪ್ರತಿಯೊಂದು ನಡವಳಿಕೆಯಲ್ಲೂ ತಾಳ್ಮೆಯಿಂದಿರಬೇಕು, ದುಡುಕಿ ನಡೆದು ಬಿಚ್ಚಬಹುದಾದ ಗಂಟನ್ನು ಕತ್ತರಿಸಲು ಯತ್ನಿಸುವ ದಡ್ಡ ರಂತೆ ರಸಾಭಾಸಮಾಡಿಕೊಳ್ಳಬಾರದು. ಸಪ್ರಯೋಜನಾಪೇಕ್ಷೆಗಿಂತಲೂ ಪರರ್ಥಕ್ಕಾಗಿಯೇ ಹೊಡೆದಾಡುವ ಪುಣ್ಯಾತ್ಮರು ಕೆಲವರಾದರೂ ಉಂಟು ಎಂಬುದನ್ನು ಮರೆಯಬಾರದು. ಕರೆಯದಿದ್ದ ಕಡೆಗೆ ಹೋಗಬಾರದು. * ದೇಶೋವಿಶಾಲ ಪ್ರಭವೋಪ್ಯನುತಾಃ ' ಎಂಬಂತೆ ಲೋಕವು ವಿಸ್ತಾರ ವಾಗಿರುವಲ್ಲಿ ಕರೆಯದ ಕಡೆಗೆ ಹೋಗಿ ಅವಮಾನ ಪಡುವುದೇತಕ್ಕೆ ? ಅದಕ್ಕೆ ಬದಲು ಬಂದು ಬಯಲಿಗೆ ಹೋಗಿ ಭಗವಂತನ ಸೃಷ್ಟಿ ವೈಚಿತ), ನನ್ನಾದರೂ ನೋಡಿ ಏತಕ್ಕೆ ಸಂತೋಷ ಪಡಬಾರದು ? ಯಾರೇನು ಹೇಳಿದರೂ ಅದರಲ್ಲಿ ಕೊಂಕು ಕೊರತೆಗಳನ್ನೆಣಿಸುತ್ತ ಆವಾಚ್ಯವನ್ನು ಸುಡಿಯುವ ದುಸ್ಸ ಭಾವವು ಕೆಲವಲ್ಲಿ ಉಂಟು. ಅಂಥವರು ಅದನ್ನು ತಿದ್ದಿಕೊಳ್ಳಬೇಕು. ಜನಗಳ ಯೋಗ್ಯತೆಯನ್ನು ತಿಳಿಯುವುದು ಶಾಸ್ತರ್ಥ ಗಳನ್ನು ತಿಳಿಯುವುದಕ್ಕಿಂತಲೂ ಕಷ್ಟವು. ಮುಖ್ಯವಾಗಿ ನಮ್ಮ ಜತೆಗಾರರ ಮತ್ತು ನಮ್ಮ ಕೈಕೆಳಗಿನವರ ಯೋಗ್ಯತೆಯೇನು ನಡತೆಯು ಹೇಗೆ ? ನಂಬಿಕೆಗೆ ಅರ್ಹರೆ? ಇಂಥಾದ್ದನ್ನೆಲ್ಲಾ ತಪ್ಪದೆ ತಿಳಿದುಕೊಂಡು ಅವರವರ ಸ್ಥಿತಿಗಳಿಗೆ ತಕ್ಕಂತೆ ಅವರವರನ್ನು ಕಾಣುತ್ತ ಬರಬೇಕು. ಯಾರ ನಡತೆಯ ವಿಜಯದಲ್ಲಿ ನಮಗೆ ಸಂಶಯ ಬರುವುದೋ ಅವರನ್ನು ನನ್ನ ಹತ್ತಿರ ಯಾವ ಕೆಲಸಕ್ಕೂ ಸೇರಿಸಬಾರದು. ಅಷ್ಟು ಪರೀಕ್ಷಿಸಿ ಸೇರಿಸಿದ ನಂತರ ಅವರಲ್ಲಿ ಸಂಶಯಪಡಬಾರದು. ಎಡಗೈ ಬಲಗೈ ನಂಬದೆ ಇರುವುದಕ್ಕಿಂ ತಲೂ ನಂಬಿ ನೋಡುವುದುತ್ತಮ. ಯಾವಾಗಲೂ ಸ್ಪಬುದ್ಧಿಯಿಂದ ಬಾಳು ಪುದು' ಮೇಲು. ಮತ್ತು ಬಾಬ್ರಿಗ್ರಹವು ಅತ್ಯಾವಶ್ಯಕವು. ಆದುದರಿಂದಲೇ ಬುದ್ಧಿವಂತನ ಬಾಯಿ ಮನಸ್ಸಿನಲ್ಲಿರುವುದು, ದಡ್ಡನ ಮನಸ್ಸು ಬಾಯಲ್ಲಿ ಕುವುದು ಎಂದು ಒಬ್ಬ ದೊಡ್ಡ ವಿದ್ವಾಂಸನು ಹೇಳಿದ್ದಾನೆ. ಮಾತಾಡುವುದ