ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

wwwwwwwwww boy ಕರ್ಣಾಟಕ ಗ್ರಂಥಮಾಲೆ ಸ್ಸುಳ್ಳವರನ್ನು ಗುಣಾಡ್ಯರೆಂದೂ ಸುಸ್ವಭಾವದವರೆಂದೂ ಹೇಳುವರು. ನಾವು ಎಂಥವರೆಂಬ:ದನ್ನು ನಮ್ಮ ಸ್ವಭಾವವು ಪ್ರಕಟಗೊಳಿಸುತ್ತದೆ. ಯಾರು ಮನಃಪೂರಕವಾಗಿ ಕಟ್ಟದನ್ನು ತಿರಸ್ಕರಿಸಿ ಒಳ್ಳೆಯದನ್ನು ಪುರ ಸ್ಮರಿಸುವರೋ ಅವರೇ ಸುಸ್ವಭಾವದವರು. (25) ಕೆಲಸ ಮಾಡುವಿಕ. ತಿಳವಳಿಕೆಯನ್ನು ಜೀವನವನ್ನು ಅಥವಾ ಸಂತೋಷವನ್ನು ಇಂಥ ಯಾವುದನ್ನು ಪಡೆ ರುಬೇಕಾದರೂ ಕಷ್ಟಪಟ್ಟು ಕೆಲಸ ಮಾಡಲೇಬೇಕು. ಲೋಕದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವವ ಾನದ ಏಳಿಗೆಗಾಗಿ ಯಾವು ದಾದರೊಂದು ವೃತ್ತಿಯನ್ನು ಅವಲಂಬಿಸುವರಷ್ಟೆ. ಅದದಕ್ಕೆ ಸಹಾಯಕ ವಾದ ಇನ್ನೂ ಎಷ್ಟೋ ಕೆಲಸಗಳನ್ನು ಮಾಡಬೇಕಾಗುವುದು. ಹಲವು ಸಣ್ಣ ಪುಟ್ಟ ಝರಿಗಳೆಲ್ಲವೂ ಸೇರಿ ದೊಡ್ಡ ಪ್ರವಾಹಗಳಾಗಿಯೂ ಅಂಥ ಹಲವು ಪ್ರವಾಹಗಳು ಸೇರಿ ಉಪನದಿಗಳಾಗಿಯ ಇಂಥ ಹಲವು ಉಪ ನದಿಗಳು ಸೇರಿ ದೊಡ್ಡ ನದಿಯಾಗಿ ಪರಿಣಮಿಸಿ ವ್ಯಾಪಾರ ಮುಂತಾದುವು ಗಳಿಗೆ ಸಹಾಯಕವಾಗಿ ಲೋಕೋಪಕಾರಮಾಡುವಂತೆ ಸಣ್ಣ ಪುಟ್ಟ ಕೆಲಸ ಗಳೆಲ್ಲಾ ಸೇರಿ ಒಂದು ದೊಡ್ಡ ಕೆಲಸವೂ ಇಂಥ ಹಲವು ದೊಡ್ಡ ಕೆಲಸ ಗಳು ಸೇರಿ ಒಂದು ವೃತ್ತಿಯ ಆಗಿ ಮನುಷ್ಯನ ಪರಮೋದ್ದೇಶಕ್ಕೆ ಆಧಾರವಾಗಿ ಅವನನ್ನು ವೃದ್ಧಿಗೆ ತರುವಂತೆ ಆಗಬೇಕು. ಉಪಯುಕ್ತವಾದ ಯಾವ ಕೆಲಸವನ್ನೇ ಆದರೂ ಶ್ರದ್ಧೆಯಿಂದಲೂ ಸಂತೋಷದಿಂದ ಕೈಲಾದ ಮಟ್ಟಿಗೂ ಸಾಹಸಪಟ್ನ ಮಾಡಬೇಕು. ಸದಾ ಒಂದೇ ಕಲಸವನ್ನು ಮಾಡುತ್ತಿರುವುದಕ್ಕೆ ಬೇಸರವಾಗುವುದು ಆದುದರಿಂದ ಒಂದು ವಿಧವಾದ ಕೆಲಸವನ್ನು ಸ್ವಲ್ಪ ಕಾಲವೂ ಮತ್ತೊಂದು ವಿಧವಾದುದನ್ನು ಸ್ವಲ್ಪ ಕಾಲವೂ ಮಾಡುವುದು ಒಳ್ಳೆಯದು. ವಿಶ್ರಾಂತಿ, ವಿನೋದ ಮೊದಲಾದುವುಗಳ ಓಲ್ಪ ಮಟ್ಟಿಗೆ ಕಾಲವನ್ನು ಗೊತ್ತು ಮಾಡಿಕೊಳ್ಳುವುದು,