ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ಗಿ೧೫ ಒಂದು ಕೆಲಸಕ್ಕೆ ಕೈಹಾಕಿ ಅಥೈರಪಟ್ಟು ಮಧ್ಯದಲ್ಲಿಯೇ ಅದನ್ನು ನಿಲ್ಲಿಸಿ ಬಿಡಬಾರದು. ಎಷ್ಟು ಕಷ್ಟವಾದರೂ ಸಹಿಸಿಕೊಂಡು ಕಡೆಯ ವರೆಗೂ ಮಾಡಿ ಅದನ್ನು ಸಾಧಿಸಲೇ ಬೇಕು. ಕಲಸವು ಕಷ್ಟವೆಂದು ಗೊಂಗುಟ್ಟುವುದು, ಕೆಲಸ ಮಾಡಿಸುವ ದಣಿಯಮೇಲೆ ರೇಗುವುದು ಇವೆಲ್ಲಾ ನಿಸಿದ್ದ. ಕೆಲಸವು ಎಂಥಾದ್ದೇ ಆಗಲಿ ಅದನ್ನು ಇತರರಿಗಿಂತ ಚೆನ್ನಾಗಿ ಮಾಡಿ ವೃದ್ಧಿಗೆ ಬರಲು ಯತ್ನಿಸಬೇಕು. ಜೀವನಕ್ಕಾಗಿ ಹೊರಗೆ ದುಡಿಯುವ ಕೆಲಸವನ್ನು ಮನೆಯಲ್ಲಿಯ ಹೂಡಿಕೊಂಡು ಮಾಡುತ್ತ ಬಂದರೆ ಸುಖವು ಸ್ಪಷ್ಮಪಾಯವಾಗುವುದು. ಆರೋಗ್ಯವು ದುರ್ಲಭವಾಗು ವುದು, ಸ್ನೇಹಿತರು ಕೈಬಿಡುವರು. ಬೇವಮಾನವೇ ಕಡುವುದು. ಸರ ದನಿ ಸುಖದಲ್ಲಿಯೇ ಬೆಳೆದವರು ಕಷ್ಟಪಟ್ಟು ಕೆಲಸಮಾಡತಕ್ಕೆ ವರನ್ನು ನೋಡಿ ಅವರು ನಿರ್ಭಾಗ್ಯರೆಂದು ಭಾವಿಸಿ ಕನಿಕರಪಟ್ಟಾರು. ಆದರೆ ನ್ಯಾಯವಾಗಿ ನೋಡಿದರೆ ತಾವೇ ಕನಿಕರಕ್ಕೆ ಪಾತ್ರರು. ಪ್ರಕೃತಿಯು ಕಷ್ಟಪಟ್ಟವರನ್ನು ಮಾತ್ರ ಮುಂದಕ್ಕೆ ತರುವುದು. ಸೋಮಾರಿಗಳನ್ನು ಕೈಬಿಡುವುದು. ಕೆಲಸಮಾಡುವುದರಿಂದ ಆರೋಗ್ಯ, ಸುಖ, ಸಂತೋಷ, ಶಕ್ತಿ ಇವುಗಳು ಹೆಚ್ಚುವುದಲ್ಲದೆ ನಡತೆಯು ಉತ್ತಮವಾಗುವುದು. ಅದ ರಲ್ಲೂ ಮುಖ್ಯವಾಗಿ ತಾಳ್ಮೆ, ದೃಢಸಂಕಲ್ಪ, ಶಕ್ತಿಯ ಪ್ರಯೋಗ, ಕಲಸ ವನ್ನು ಕೈಗೂಡಿಸಿಕೊಳ್ಳುವ ಹುನ್ನರು, ಕ್ರಮ, ನಿಶ್ಚಯಜ್ಞಾನ, ಇಂಥವು ಬಲಪಡುವುವು. ಉದ್ಯೋಗಕ್ಕೆ ಬಡತನವೂ ಒಂದು ಸಹಕಾರಿಯು. ಲೋಕದಲ್ಲಿ ಬಡತನವೇ ಒಬ್ಬ ದೊಡ್ಡ ಉಪಾಧ್ಯಾಯ, ಇದು ಎಂಥೆಂಥ ಅನಾಮಧೇಯ ರನ್ನೂ ಸುಪ್ರಸಿದ್ಧರನ್ನಾಗಿ ಮಾಡಿದೆ. ಆದರೆ ಅಕ್ಷರವಂತರು ಕಷ್ಟಪಟ್ಟು ಕೆಲಸ ಮಾಡಬೇಕಾದುದಿಲ್ಲ ಎಂಬುದು ಅವಿವೇಕ, ರಷ್ಯಾ ಚಕ್ರವರ್ತಿ ಯಾದ ಓಟರ್' ದಿ ಗೇಟನು ಸುಖಾನುಭವಕ್ಕೆ ಅರ್ಹವಾದ ತನ್ನ ಯೌವನ