ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಗ್ರಂಥಮಾಲೆ ದಲ್ಲಿ ಕೂಡ ಒಬ್ಬ ಕೂಲಿಯವನಂತೆ ದುಡಿಯುತ್ತ ಹಾಲೆಂಡಿನಲ್ಲಿ ಹಡಗು ಕಟ್ಟುವುದನ್ನೂ, ಇಂಗ್ಲೆಂಡಿನಲ್ಲಿ ಗಡಿಯಾರವನ್ನು ರಚಿಸುವುದು, ಕಾಗದ ಮಾಡುವುದು, ಮರ ಕೊಯ್ಯುವುದು ಇಂಥ ಕೆಲಸಗಳನ್ನೂ ಕಲಿತುಕೊಂಡ ನಂತೆ ! ಮನುಷ್ಯನಿಗೆ ಎಷ್ಟು ಶಕ್ತಿಯಿದ್ದರೂ ಅವನು ಕೆಲಸಮಾಡದಿದ್ದರೆ ಅದು ಉಪಯೋಗಿಸಲ್ಪಡದ ಕಬ್ಬಿಣವು ತುಕ್ಕು ಹಿಡಿದು ಕೆಟ್ಟು ಹೋಗುವಂತೆ ನಶಿಸಿ ಹೋಗುವುದು. ಕೆಲಸವನ್ನು ಅಂದರೆ ವೃತ್ತಿಯನ್ನು ಕೈಗೊಳ್ಳುವುದ ರಲ್ಲೂ ಸ್ವಲ್ಪಮಟ್ಟಿಗೆ ವಿಚಕ್ಷಣೆಯು ಆವಶ್ಯಕ. ಯಾರಾರಿಗೆ ಯಾವಯಾವ ವೃತ್ತಿಯಲ್ಲಿ ಅಭಿರುಚಿಯೋ ಅವರವರು ಅಂಥಂಥಾದ್ದನ್ನು ಕೈಗೊಳ್ಳು ವುದು ಮೇಲು. ಹಿಡಿದ ಕೆಲಸವನ್ನು ಬಿಡದೆ ಸಾಧಿಸತಕ್ಕವರಿಗೆ ಐಶ್ವಯ್ಯ, ಅಧಿಕಾರ, ಇತರರನ್ನು ವಶಪಡಿಸಿಕೊಳ್ಳುವ ಶಕ್ತಿ, ಇಂಥ ಸೌಕಯ್ಯಗಳೇನೂ ಇಲ್ಲದಿ ದ್ದರೂ ಜಯವು ಕೈಸೇರುವುದು. ಪ್ರಯತ್ನ ಮಾಡಿದ ಕೂಡಲೆ ಯಾವ ಕಲ ಸವೂ ಕೈ ಸೇರಲಾರದು, ಆಯಾ ಕೆಲಸದ ಯೋಗ್ಯತೆಗೆ ತಕ್ಕಷ್ಟು ಕಾಲ ವನ್ನು ಅದದು ತೆಗೆದುಕೊಂಡೇ ತೀರುವುದು, ತೆಂಗು, ಮಾವು ಮೊದಲಾದ ಫಲವೃಕ್ಷಗಳ ಪಾಲನೆಯು ಇದಕ್ಕೆ ಒಳ್ಳೆಯ ದೃಷ್ಟಾಂತವಾಗಿರುವುದು. ಫಲಶಾಪ್ತಿಯಾಗುವವರೆಗೆ ಎಷ್ಟು ಕಾಲವೇ ಆದರೂ ತಡೆದುಕೊಂಡು ನಿರೀಕ್ಷಿಸಲೇ ಬೇಕಾಗುವುದು. ಏನೂ ಮಾಡದೆ ಕೆಲವು ಕಾಲ ಸುಮ್ಮನಿರು ವುದು, ಬಳಿಕ ಹಗಲೂ ರಾತ್ರಿಯ ಹೆಚ್ಚಾಗಿ ದುಡಿದು ಕೆಲಸಮಾಡು ವುದು ಇಂಥ ಅಕ್ರಮಗಳಿಂದ ಆರೋಗ್ಯಕ್ಕೆ ಕೂಡ ಹಾನಿ ಬರುವುದುಂಟು. ಅನೇಕ ವಿದ್ಯಾರ್ಥಿಗಳು ಆದಿಯಿಂದಲೂ ವ್ಯರ್ಥ ಕಾಲಕ್ಷೇಪ ಮಾಡಿ ಪರೀ ಕ್ಷೆಯು ಸಮೀಪಿಸಿದಾಗ ಎಡೆಬಿಡದೆ ನಿದ್ದೆಗೆಟ್ಟು ಓದುತ್ತ ರೋಗಗ್ರಸ್ತರಿ ಗುತ್ತಿರುವುದು ಈ ಕಾಲದಲ್ಲಿ ಸರರಿಗೂ ತಿಳಿದ ಅಂಕವೇ ಆಗಿದೆ. ತನ್ನ ಶಕ್ತಿ ಮೀರಿ ಹೆಚ್ಚಾಗಿ ಕೆಲಸಮಾಡುವುದಾಗಿ ಹೊರಟು ಅದನ್ನು ಆಡಿಸುವುದಕ್ಕಿಂತಲೂ ಸ್ವಲ್ಪ ಕೆಲಸವನ್ನೇ ಆದರೂ ಚೆನ್ನಾಗಿ ಮಾಡುವುದು