ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡವಳಿ ೧೧೬ ಒಳ್ಳೆಯದು, ಯಾವ ಕೆಲಸವನ್ನೇ ಆದರೂ ನ್ಯಾಯವಾದ ಮಾರ್ಗದಲ್ಲಿ: ಸಾಧಿಸಬೇಕೇ ಹೊರತು ಯಾವುದಾದರೊಂದು ಮೋಸದ ದಾರಿಯಿಂದ ಅದನ್ನು ನೆರವೇರಿಸಿಕೊಳ್ಳುವುದಕ್ಕೆ ಯತ್ನಿಸಬಾರದು. ಕಂಗಾರನಾಗಬೇ ಇಂದು ಕದಿಯುವುದು, ತೇರ್ಗಡೆಯಾಗಬೇಕೆಂದು ಪರೀಕ್ಷೆಯಲ್ಲಿ ಕಾಫೀ ಮಾಡುವುದು ಇಂಥವು ಕೆಟ್ಟ ಕೆಲಸಗಳು, ನ್ಯಾಯವಾದ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದರೆ ಸದ್ಯಕ್ಕೆ ಒಂದುವೇಳೆ ಆ ಕೆಲಸವು ನೆರವೇರದಿದ್ದರೂ ಚಿಂತೆ ಯಿಲ್ಲ. ನಮ್ಮ ನಡತೆಯಾದರೂ ಕೆಡದೆ ಕ್ರಮದಲ್ಲಿರುತ್ತದೆ. ಮತ್ತು ನಾವು ನ್ಯಾಯವಾದ ದಾರಿಯಲ್ಲಿ ನಡೆದೆವು ಎಂದು ಮನಸ್ಸು ಸಮಾಧಾನ ಸ್ಥಿತಿಯ ಲ್ಲಿರುತ್ತದೆ. ಅಲ್ಲದೆ ನಮ್ಮ ಗೌರವಕ್ಕೂ ಹಾನಿಯಿಲ್ಲ. ಅನ್ಯಾಯದಿಂದ ಕಾಠ್ಯವು ಕೈಗೂಡಿದರೂ ಅದು ಗೌರವಾವಹವಲ್ಲ. ಮತ್ತು ನಾವು ತಪ್ಪು ದಾರಿಯಲ್ಲಿ ನಡೆದುದಕ್ಕಾಗಿ ನಮ್ಮ ಅಂತರಾತ್ಮವೂ ಕೊರಗುತ್ತಿರುವುದು, ಯಾವ ಕೆಲಸವೂ ನಮ್ಮಿಂದ ಆಗದೆಂದು ಹೇಳಿಬಿಡದೆ ಸಾಧ್ಯವಾದ ಮಟ್ಟಿಗೂ ಪ್ರಯತ್ನಪಟ್ಟು ನೋಡಬೇಕು, ಪ್ರಯತ್ನ ಪಡದೆ ಇದ್ದರೆ ಯಾವ ಸಣ್ಣ ಪುಟ್ಟ ಕೆಲಸಗಳ ಕೂಡ ನಡೆಯಲಾರವು. ಆಸಕ್ತಿಯಿಂದ ಕೆಲಸಮಾಡುತ್ತ ಬಂದರೆ ಅದರಲ್ಲಿ ಸಂಭವಿಸಬಹುದಾದ ಎಂಥ ತೊಂದರೆ ಗಳೂ ಸುಲಭವಾಗಿ ಪರಿಹಾರವಾಗುವುವು. ಶಕ್ತಿಯಿರುವಾಗ ಕಲಸಮಾಡಿ ದ್ದರೆ ಅಶಕ್ತರಾದಾಗ ಅದರ ಫಲವನ್ನು ಅನುಭವಿಸಬಹುದು. ಯೌವನದಲ್ಲಿ ದುಡಿದು ಸಂಪಾದಿಸಿದ್ದ ರೆಮುಪ್ಪಿನಲ್ಲಿ ಇತರಿರ ಹಂಗಿಲ್ಲದೆ ಜೀವನ ಮಾಡಿ ಕೊಳ್ಳಬಹುದು, ಉದಾಸೀನತೆಯಿಂದ, ಅರ್ಧ ಮನಸ್ಸಿನಿಂದ ಕಡ್ಡಾಯ ದಿಂದ ಅಥವಾ ನಿರ್ಬಂಧದಿಂದ ಕೆಲಸಮಾಡಬಾರದು, ಹೀಗೆ ಮಾಡಿದರೆ ಕಲಸವು ನೆರವೇರುವುದಿಲ್ಲ. ಅಥವಾ ಆದರೂ ಚೆನ್ನಾಗಿ ನಡೆಯುವುದಿಲ್ಲ ನನ್ನ ಕಾಲವೂ ಶಕ್ತಿಯ ವ್ಯರ್ಥವಾಗಿ ವೆಚ್ಚವಾಗುವುವು. ಇತರರ ನಿಂದೆಗೂ ಪಾತ್ರರಾಗಬೇಕಾದೀತು. ಮತ್ತು ಇದೊಂದು ಕೆಟ್ಟ ಚಾಳಿಯು 5