ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕಗ್ರಂಥಮಾಲೆ ವನೆಂದು ಹೆಸರುಗೊಂಡು ಸಂಘಜೀವಿಯಾಗಿರುವ ಮನುಷ್ಯನು ಇತರ ಮನುಷ್ಯರ ಸಂಗಡ ಎಷ್ಟು ಮಟ್ಟಿನ ತಿಳಿವಳಿಕೆಯಿಂದ ನಡೆದುಕೊಳ್ಳಬೇ ಆಂಬುದನ್ನು ಹೇಳಬೇಕಾದುದೇ ಇಲ್ಲ. ಜನಗಳು ಮನಸ್ಸಿಟ್ಟು ಪರಸ್ಪರವಾಗಿ ಆಚರಿಸುವ ಕ್ರಮವಿಶೇಷ ವನ್ನು ನಡೆವಳಿಕೆ, ನಡೆವಳ ಅಥವಾ ನಡತೆಯನ್ನುವರು. ನಡತೆಗೆ ಸಂಬಂಧ ಪಟ್ಟ ವಿಷಯಗಳನ್ನು ನೀತಿಶಾಸ್ತ್ರವು ವಿವರಿಸುವುದು. * ನಡತೆಯ ಕಟ್ಟಿನಿಂದಲೇ ಲೋಕದಲ್ಲಿ ಸಮಸ್ತವ್ಯಾಪಾರಗಳ ನಡೆ ಯುತ್ತಿರುವುದು, ನಡತೆಯೊಂದಿಲ್ಲದಿದ್ದಲ್ಲಿ ಒಬ್ಬರಮಾತನ್ನು ಮತ್ತೊಬ್ಬರು ಕೇಳದೆ ಎಲ್ಲವೂ ಅನಾಯಕವಾಗಿ ಹೋಗುತ್ತಿದ್ದಿತು. ಒಳ್ಳೆಯವರು, ಕಟ್ಟ ವರು; ದೊಡ್ಡವರು, ಚಿಕ್ಕವರು; ಸ್ವಾಮಿಗಳು, ನೃತ್ಯದು; ಧನಿಕರು, ಬಡ ವರು; ವಿದ್ವಾಂಸರು, ದಡ್ಡರು; ರಾಜಪ್ರಜೆ-ಎಂಬ ಯಾವಭೇದವೂ ಇಲ್ಲದೆ ಎಲ್ಲವೂ ಅವ್ಯವಸ್ಥೆಯಲ್ಲಿರಬೇಕಾಗಿದ್ದಿತು. ಆದರೆ ಲೋಕವು ಹಾಗೆ ನಾಶವಾಗಕೂಡದೆಂಬ ಸಂಕಲ್ಪದಿಂದಲೇ ಜಗದೀಶ್ವರನು ನೀತಿಮಾರ್ಗ ವನ್ನು ತೋರಿಸಿರುವನು. ನೀತಿಗೆ ಪಕ್ಷಪಾತವಿಲ್ಲ. ಇದು ಸರಿನಂತೆ ಸಂತ ಸಮದೃಷ್ಟಿಯುಳ್ಳದು. ಆದುದರಿಂದಲೇ ಪ್ರಪಂಚದ ಎಲ್ಲಾ ಮತದವರೂ ಏಕವಾಕ್ಯತೆಯಿಂದ ಜಯಘೋಪಮಾಡುತ್ತ ನೀತಿಯನ್ನು ಗೌರವಿಸುತ್ತಿರುವರು. ಸುಳ್ಳು ಹೇಳಕೂಡದು, ಕಳವು ಮಾಡಬಾರದು, ಗುರುಹಿರಿಯರಿಗೆ ವಿಧೇಯರಾಗಿರಬೇಕು, ಬಡವರನ್ನು ಕನಿಕರದಿಂದ ಕಾಣಬೇಕು, ಪರಸ್ಪರ ಮಯ್ಯಾದೆಯಿಂದ ನಡೆದುಕೊಳ್ಳಬೇಕು, ಎಂಬಂ ತಹ ನೀತಿರತ್ನಗಳನ್ನು ಯಾವ ಮತದವರಾದರೂ ತಿರಸ್ಕರಿಸುವರೆ ? ಹೀಗೆ ನ್ನುವಲ್ಲಿ ನೀತಿಯು ಲೋಕಪೂಜ್ಯವೆಂದಾಯಿತಲ್ಲವೆ? ನೀತಿಸುವಿಚಾರ ದಲ್ಲಿ ಪ್ರತಿಯೊಬ್ಬರೂ ತಕ್ಕಮಟ್ಟಿಗಾದರೂ ತಿಳಿವಳಿಕೆಯನ್ನು ಪಡೆದು ಅದರಂತೆ ನಡೆದುಕೊಳ್ಳು ತಬಂದರೆ ಯಾರಿಗೂ ಯಾವ ಕಷ್ಟ ನಿಷ್ಟುರಗಳ --