ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳೆ ಕೊಂಡಿರುವುದು ನಮ್ಮ ಕರ್ತವ್ಯವಲ್ಲ. ಕಷ್ಟಪಟ್ಟು ದುಡಿಯುವ ಒಬ್ಬನ ಸಂಪಾದನೆಯಿಂದ ಎಂಟು ಹತ್ತು ಜನ ಸೋಮಾರಿಗಳು ನಾಚಿಕೆಯಿಲ್ಲದೆ ಜೀವನ ಮಾಡುತ್ತಿರುವಂಥ ಕಟ್ಟ ನಡವಳಿಕೆಯು ನಮ್ಮಲ್ಲಿ ಬೇರೂರಿರು ವುದರಿಂದಲೇ ಅಪ್ಪೆಶಲ್ಯ ಸಂಪನ್ನವಾದ ಭಾರತಭೂಮಿಯಲ್ಲೇ ಸಾವಿರಾರು ವರ್ಷಗಳಿಂದ ನೆಲೆಗೊಂಡು ಭಾರತೀಯರೆಂದೆನಿಸಿಕೊಳ್ಳುತ್ತಿದ್ದರೂ ನಮಗೆ ಇಂಥ ದರಿದ್ರಾವಸ್ಥೆಯು ಪಪ್ತವಾಗಿರುವುದು, ಜೀವನಕ್ಕೋಸ್ಕರವೆಂದು ಕೂಡ ಅಯುಕ್ತವಾದ ಕೆಲಸವನ್ನು ಎಂದಿಗೂ ಮಾಡಬಾರದು. ನಾವು ಮಾಡುವ ಕೆಲಸದಿಂದ ಇತರರಿಗೆ ಯಾವ ಕೆಡಕೂ ಆಗಕೂಡದಲ್ಲದೆ ಸಾಧ್ಯವಾದ ಮಟ್ಟಿಗೂ ಅವರಿಗೆ ಏನಾದರೊಂದು ಪ್ರತ್ಯಕ್ಷಫಲವು ತೋರಬೇಕು. (27) ಹೊತ್ತಿಗೆ ಸರಿಯಾಗಿ ಕೆಲಸಮಾಡಿಸುವುದು, ಪ್ರತಿಯೊಂದು ಕೆಲಸಕ್ಕೂ ಕ್ಲುಪ್ತವಾದ ಒಂದೊಂದು ಹೊತ್ತನ್ನು ಗೊತ್ತು ಮಾಡಿಕೊಂಡು ಆಯಾ ಕಾಲಗಳಲ್ಲಿ ಅದದನ್ನು ತಪ್ಪದೆ ಮಾರ ಬೇಕು. ಹೀಗೆ ಮಾಡತಕ್ಕವರಿಗೆ ಆತ್ಮಗೌರವವು ಉಂಟಾಗುತ್ತದೆ. ಮತ್ತು ಹಿಡಿದ ಕೆಲಸವೂ ಚೆನ್ನಾಗಿ ನಡೆಯುತ್ತದೆ. ಆಗಾಗಿನ ಕೆಲಸಗಳನ್ನು ಆಗಾ ಗಲೆ ಮಾಡಿ ಮುಗಿಸದಿದ್ದರೆ ಮುಂದಕ್ಕೆ ಎಲ್ಲಾ ಕೆಲಸಗಳೂ ಒಟ್ಟುಗೂಡಿ ರಾಶಿಯಾಗುವುದರಿಂದ ಆಗ ಮಾಡುವುದಕ್ಕೆ ಬೇಸರವಾಗುವುದು. ಹಾಗಿಲ್ಲದೆ ಒಂದು ಕ್ರಮವಾದ ನಿಯಮವನ್ನು ಅನುಸರಿಸಿದರೆ ಕಾಲವೂ ವ್ಯರ್ಥವಾಗು ವುದಿಲ್ಲ. ಯಾವ ಸಣ್ಣ ಪುಟ್ಟ ಕೆಲಸಗಳ ಬಿಟ್ಟು ಹೋಗದೆ ಸರಿಯಾಗಿ ನೆರವೇರುತ್ತವೆ. ಹೊತ್ತಿಗೆ ಸರಿಯಾಗಿ ನಡೆಯುವವರನ್ನು ಎಲ್ಲರೂ ಮೆಚ್ಚುವರು. ದೇವರ ಸೃಷ್ಟಿಯಲ್ಲಿ ಸೂರಚಂದ್ರಾದಿಗಳೂ ಕೂಡ ತಪ್ಪದೆ ಕಾಲ ನಿಯ ದಕ್ಕೆ ಬದ್ಧರಾಗಿ ನಡೆಯುತ್ತಾರೆ. ಉದಯಾಸ್ತ್ರಗಳು, ಹುಣ್ಣಿಮೆ ಅಮಾ