ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

na ಕರ್ಣಾಟಳ ಗ್ರಂಥಮಾತಿ ಗಳನ್ನು ಕಲಿಸಿ ಅವರಿಂದ ಲೋಕಕೂ ಲೋಕದಿಂದ ಅವರಿಗೂ ಪರಸ್ಪರ ಉಪಕಾರವುಂಟಾಗುವಂತೆ ಮಾಡುವುದು, ಉತ್ತಮವಾದ ಮಾರ್ಗದಲ್ಲಿ ಒಳ್ಳೆಯ ವಿದ್ಯೆಯನ್ನು ಕಲಿಸಿ ಅವರಿಗೆ ಜ್ಞಾನವನ್ನು ಹೆಚ್ಚಿಸುವುದು, ದೈವಭಕ್ತಿಯುಂಟಾಗುವಂತೆ ಮಾಡುವುದು, ಇಂತವುಗಳೆಲ್ಲಾ ತಾಯಂದೆ ಗಳ ಕರ್ತವ್ಯಗಳು, ಉಪಾಧ್ಯಾಯರು ಬೋಧಿಸುವ ಪಾಠವನ್ನು ಗಮನ ವಿಟ್ಟು ಗ್ರಹಿಸುವುದು, ಅವರಿಗೆ ವಿಧೇಯರಾಗಿರುವುದು, ಕಷ್ಟಪಟ್ಟು ವ್ಯಾ ಸಂಗಮಾಡುವುದು, ಇಂಥವೆಲ್ಲಾ ವಿದ್ಯಾರ್ಥಿಯ ಕರ್ತವ್ಯಗಳು. ಇವನು ಹೀಗೆ ನಡೆಯದಿದ್ದರೆ ಉಪಾಧ್ಯಾಯರು ಎಷ್ಟು ಶ್ರಮಪಟ್ಟು ಬೋಧಿಸಿ ದರೂ ಒಡಕು ಮಡಿಕೆಯಲ್ಲಿ ಸುರಿದ ನೀರಿನಂತೆ ವ್ಯರ್ಥವಾಗುವುದು. ಉತ್ತಮವಾದ ರೀತಿಯಲ್ಲಿ ಪಾಠಗಳನ್ನು ಬೋಧಿಸುವುದು, ಸರಿಯಾಗಿ ಮೇಲ್ವಿಚಾರಣೆ ಮಾಡುವುದು, ಜವಾಬ್ದಾರಿಯನ್ನು ವಹಿಸಿ ಶಿಷ್ಯರನ್ನು ತಿದ್ದಿ ಸನ್ಮಾರ್ಗಕ್ಕೆ ತರುವುದು, ಸದ್ಗುಣಗಳಿಗೆಲ್ಲಾ ತಾವು ಮೇಲ್ಪದ್ಯಾಗಿರು ವುದು. ಇಂಥವುಗಳೆಲ್ಲಾ ಉಪಾಧ್ಯಾಯರ ಕರ್ತವ್ಯಗಳು, ಇವರು ಈ ಕೆಲಸಗಳನ್ನು ಆಶ್ರದ್ದೆಯಿಂದ ನಡೆಯಿಸಿದರೆ ಮಕ್ಕಳು ಕೆಟ್ಟು ಹೋಗಿ ಮುಂದೆ ಅಯೋಗ್ಯ ಪ್ರಜೆಗಳಾಗಿ ಪರಿಣಮಿಸುವುದರಿಂದ ಒಟ್ಟು ದೇಶಕ್ಕೆ ಅಪಾಯವು ಸಂಭವಿಸೀತು. ತನ್ನ ಕೆಲಸಗಾರರ ಯೋಗಕ್ಷೇಮವನ್ನು ನೋಡಿಕೊಳ್ಳತಕ್ಕುದು ದಣಿಗೂ ದಣಿಯ ಲಾಭನಷ್ಟಗಳನ್ನು ಯೋಚಿಸಿ ನಡೆದುಕೊಳ್ಳತಕ್ಕುದು ಕೆಲಸಗಾರರಿಗೂ ಕರ್ತವ್ಯಗಳು, ಸರದಾ ಪರ ಸ್ಪರ ಸಹಾಯಕರಾಗಿರತಕ್ಕದು ನೆರೆಹೊರೆಯವರ ಕರ್ತವ್ಯ. ಹೀಗೆಯೇ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ಸಂಪಾಲಿಸುತ್ತ ಪ್ರಜೆಗಳನ್ನು ನಮ್ಮ ದಿಯಾ ಗಿಟ್ಟು ಕೊಂಡಿರತಕ್ಕುದು ರಾಜನಿಗೆ ಕರ್ತವ್ಯವು. ಆತನ ಸತ್ಕಾರದ ವಿಧಿ ಗಳಿಗೆ ತಗ್ಗಿ ನಡಿ ಮುತ್ತ ತಮ್ಮ ಕಷ್ಟ ಸುಖಗಳನ್ನು ವಿನಯ ವಿಧೇಯತೆ ಗಳಿಂದ ವಿಜ್ಞಾಪಿಸಿಕೊಳ್ಳುತ್ತಲೂ ರಾಜ್ಯಭಾರವನ್ನು ನಿರಹಿಸುವುದರಲ್ಲಿ ದೊರೆಗೆ ಒತ್ತಾಸೆವಾಡುತ್ತಲೂ ಇರತಕ್ಕುದು ಪ್ರಜೆಗಳ ಕರ್ತವ್ಯ