ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಚಿವಳಿ ಮೇಲೆ ಹೇಳಿದಂತೆ ಎಲ್ಲರೂ ತಮ್ಮ ತಮ್ಮ ಕರ್ತವ್ಯಗಳನ್ನು ಸರಿ ಯಾಗಿ ನೆರವೇರಿಸುವುದರಿಂದ ಬಹಳ ಪ್ರಯೋಜನಗಳುಂಟು. ನಡತೆಯು ಕರದೆ ಸರದಾ ಮೇಲಾದ ಮಾರ್ಗದಲ್ಲಿರುವುದು. ಘನತೆಯ ಅದರಿಂದ ಕೀರ್ತಿಯ ಲಭಿಸುವುವು. ಮತ್ತು ಇದರಿಂದ ಯಾವ ರೂಪದಲ್ಲಾದರೂ ಇತರರಿಗೆ ಸಹಾಯವಾಗಿಯೇ ಆಗುವುದು, (29) ಮಿತವ್ಯಯ, ಆಗಾಗ್ಗೆ ಜೀವನಕ್ಕೆ ಸಂಪಾದಿಸಿಕೊಳ್ಳುವುದೇ ಕಷ್ಟವಾಗಿ ಮುಂದ ಕ್ಕೆ ಏನೂ ಕೂಡಿಸಿಟ್ಟು ಕೊಳ್ಳಲಾರದಂಥ ಕಡು ಬಡವರೇನೋ ಉಂಟು. ಆದರೆ ಅಂಥವರ ಸಂಖ್ಯೆಯು ಅತಿಸ್ಪಲ್ಪ, ಇತರರನೇಕರು ಪುಷ್ಟರಾಗಿಯೇ ಇರುವರು. ಅಂಥವರು ಮುಂದಾಲೋಚನೆಯನ್ನಿಟ್ಟುಕೊಂಡು ಕೆಲಸಮಾ ಡುತ್ತಾ ಸ್ವಲ್ಪಸ್ವಲ್ಪ ಹಣವನ್ನು ಶೇಖರಿಸುತ್ತ ಬಂದರೂ ಕಡೆಗಾಲದಲ್ಲಿ ತಮಗೆ ಕಷ್ಟಬಾರದಂತೆ ಮಾಡಿ ಕೊಳ್ಳಬಹುದು, ಮುಂದಾಲೋಚನೆಯ ಜಾಗರೂಕತೆಯ ಇದ್ದರೆ ಮಿತವ್ಯಯವನ್ನು ಸುಲಭವಾಗಿ ನಡೆಯಿಸಿ ಕೊಳ್ಳಬಹುದು. ವಿತವ್ಯಯವು ಉತ್ತಮವಾದುದೆಂದು ಒಟ್ಟು ಲೋಕವೇ ಹೊಗಳು ತಿರುವುದು. ನಮ್ಮ ನಿತ್ಯಗಿಯ ಜೀವಮಾನದಲ್ಲಿ ಮಿತವಾಗಿ ನಡೆಯು ತಲೂ, ಮುಂದಕ್ಕೆ ಅನುಕೂಲಿಸುವಂತೆ ಕುಪ್ತವಾಗಿ ಸ್ವಲ್ಪಕಲ್ಪವನ್ನಾ ದರೂ ಶೇಖರಿಸುತ್ತಲ, ಬರುವುದೇ ಮಿತವ್ಯಯವೆಂದೂ ಸಂಗ್ರಹವೆಂದೂ ಎನಿಸಿಕೊಳ್ಳುವುದು. ಮಿತವ್ಯಯವು ದುಂದುಗಾರಿಕೆಗೆ ವಿರುದ್ಧವಾದ ನಡ ತೆಯು ಆದರೆ ಮಿತವ್ಯಯವೆಂದರೆ ಯಾವುದನ್ನೂ ಸಾಲದಿರುವಂತೆ ಪ್ರಶ್ನೆ ವಾಗಿ ನಡೆಯಿಸುವುದೆಂಬುದಲ್ಲ. ಎಷ್ಟಾಗಬೇಕೋ ಅಷ್ಟನ್ನು ಮಾತ್ರ ನ್ಯೂನತೆಯಿಲ್ಲದೆ ನಡೆಯಿಸತಕ್ಕದ್ದು. ಮಿತವ್ಯಯವನ್ನು ಧನದ ವಿಷಯ ದಲ್ಲಿ ಮಾತ್ರ ಆಚರಿಸಬೇಕೆಂದು ತಿಳಿಯಬಾರದು. ಕಾಳಿ, ವಸ್ತು, ಆರೋಗ್ಯ, ಶಕ್ತಿ, ಸಂದರ್ಭ, ಇಂಥವುಗಳಲ್ಲೆಲ್ಲಾ ಮಿತಾಚರಣೆ ಯು ಆವ ಶ್ಯಕ. ಉದಾ-ಒಬ್ಬನು ತನಗೆ ಪ್ರಾಪ್ತವಾಗಬಹುದಾದ ಅನಾರೋಗ್ಯ ವನ್ನು ಪರಿಗಣಿಸದೆ ಹೆಚ್ಚಾಗಿ ದುಡಿದು ಹಣವನ್ನು ಸಂಪಾದಿಸುತ್ತಾನೆಂದು

  • 16