ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ maanananananananmunoamnarman ಬ ಇಲ್ಲದೆ ಲೋಕವೆಲ್ಲಾ ರಾಮರಾಜ್ಯವಾಗಿ ಪರಿಣಮಿಸುವುದು. ಕೊಡು ವುದು ತೆಗೆದುಕೊಳ್ಳುವುದು ಅಂದರೆ ಪರಸ್ಪರವಾಗಿ ಗುಣವನ್ನು ಕೊಟ್ಟು ಗುಣವನ್ನು ಪಡೆಯುವುದು ಎಂಬುದರಲ್ಲಿ ನೀತಿಯ ಅರ್ಥವಲ್ಲಾ ಅಡಕ ವಾಗಿದೆ. ಯಾರೂ ಇನ್ನೊಬ್ಬರ ಹಂಗಿಲ್ಲದೆ ಬಾಳುವುದಕ್ಕಾಗುವುದಿಲ್ಲ. ಪ್ರತಿಯೊಬ್ಬರೂ ಅನ್ನ, ಬಟ್ಟೆ, ವಿದ್ಯೆ, ಬುದ್ಧಿ, ಇಂತಹ ಯಾವ ಅಂಶದಲ್ಲಿ ಯಾದರೂ, ಇತರರ ಹಂಗಿಗೆ ಒಳ ಪಡದೆ ಬಾಳುವುದಕ್ಕೆ ಆಗುವುದೇ ಇಲ್ಲ. ನಡತೆಯು ಒಲೀ ತಿಳವಳಕೆಗಿಂತ ಮುಖ್ಯವಾದುದು. ಲೋಕದಲ್ಲಿ ಉಪಕಾರಾಚರಣೆಗಳು ನಡತೆಯಿಂದಲ್ಲದೆ ಬರೀ ತಿಳವಳಿಕೆಯಿಂದಲ್ಲ. ಒಂದುವೇಳೆ ಒಬ್ಬ ಮನುಷ್ಯನು ವಿದ್ಯಾಬುದ್ಧಿಗಳಲ್ಲಿ ಎಷ್ಟೇ ಒಂದಾಗಿದ್ದರೂ, ಒಳ್ಳೆಯ ನಡತೆಯುಳ್ಳವನಾಗಿದ್ದರೆ ಅವನಿಂಗ ಇತರರಿಗೆ ಏನೂ ತೊಂದರೆ ಯಾಗದಿರುವುದು ಮಾತ್ರವಲ್ಲದೆ ಉತ್ತಮವಾದ ಸಹಾಯವೂ ಆಗುವುದು. ನಮ್ಮ ದೇಶದ ರೈತರನ್ನು ಈ ವಿಷಯದಲ್ಲಿ ಉದಾಹರಿಸಬಹುದು. ತಿಳಿವ ಆಕೆಯನ್ನು ಮಾತ್ರ ಪಡೆದು ನಡತೆಯ ಹಾದಿಯನ್ನೇ ಅರಿಯದ ಮನುಷ್ಯ ನಿಂದಲಾದರೂ ಯಾರಿಗೂ ಏನೂ ಸಹಾಯವಾಗದೆ ಎಲ್ಲವೂ ಸ್ವಾರ್ಥದಲ್ಲಿ ಯೇ ಮುಗಿವುದು. ಇಷ್ಟೇ ಅಲ್ಲ ತಿಳಿವಳಿಕೆಯು ಕೆಟ್ಟ ನಡತೆಯೊಡನೆ ಬೆರೆತರೆ ಇತರರಿಗೆ ಬಹಳ ಅನರ್ಥಗಳನ್ನುಂಟುಮಾಡುತ್ತ ಲೋಕಕಂಟಕ ವಾಗುವುದು. ಹೇಗೆಂದರೆ-ಕೇವಲ ವಿದ್ಯಾವಂತರೂ ಕುಶಾಗ್ರ ಬುದ್ದಿಗಳ ಆದವರನೇಕರು ಕೇವಲ ಹೀನವಾದ ದುಷ್ಕೃತ್ಯಗಳನ್ನು ಮಾಡಿ ತಾವೂ ಕಡುತ್ತಲೂ ಸಾಂಕ್ರಾಮಿಕ ಜಾಡ್ಯಗಳ೦ತೆ ಇತರರನ್ನೂ ಕೆಡಿಸುತ್ತಲೂ ಇರುವರು. ದುಮ್ಮಾರ್ಗದಲ್ಲಿ ಪ್ರವರ್ತಿಸಿದ ತಿಳಿವಳಿಕೆಯಿಂದ ಉಂಟಾಗತಕ್ಕೆ ಅನರ್ಥಗಳು ಸಾಧಾರಣವಾದುವುಗಳಲ್ಲ. ಮನುಷ್ಯನು ಹೇಗಿರುವನೆಂಬುದು ಅವನ ರೂಪ, ಸಂಪತ್ತು, ಅಧಿ ಕಾರ, ಯೌವನ, ಪದವಿ-ಇಂತಹವುಗಳಿಂದ ನಿರ್ಧರಿಸಲ್ಪಡತಕ್ಕುದಲ್ಲ