ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕಗ್ರಂಥಮಾಲೆ ವೆಂತಲೂ ಅವನ ನಡತೆಯಿಂದ ಮಾತ್ರ ನಿಶ್ಚಯಿಸಲ್ಪಡತಕ್ಕುದೆಂದೂ ದೊಡ್ಡವರು ಹೇಳುವರು. ಪುಸ್ತಕದಲ್ಲಿ ಓದಿ ತಿಳಿದುಕೊಳ್ಳುವ ಮೂತ್ರದಿಂದ ನಡತೆಯು ಬರ ತಕ್ಕುದಲ್ಲವೆಂತಲೂ ಆಚರಿಸಿ ಆಚರಿಸಿ ಅಭ್ಯಾಸ ಮಾಡಲ್ಪಡತಕ್ಕುದೆಂತಲೂ ಪ್ರಾಜ್ಞರು ಹೇಳುವರು. ಇದು ನಿಜ. ಹಾಗೆ ಕಲಿತುಕೊಳ್ಳುವುದಕ್ಕೆ ಬಾಲ್ಯದಿಂದ ಪ್ರಾರಂಭಿಸಬೇಕು. ಆದರೆ ಬಾಲ್ಯದಲ್ಲಿ ಸ್ಪಬುದ್ದಿ ಸಾಲ ದುದರಿಂದ ತಾಯ್ತಂದೆಗಳ, ಉಪಾಧ್ಯಾಯರೂ, ಈ ನೀತಿತಿಕ್ಷಣವನ್ನು ನಡೆಯಿಸಬೇಕು ಹೀಗೆ ನೈಶವದಲ್ಲಿ ಕಲಿಯತೊಡಗಿದ ಒಳ್ಳೆಯ ನಡತೆ ಯನ್ನು, ಒಳ್ಳೆಯ ಪುಸ್ತಕಗಳನ್ನೊದುವುದು, ಅನುಭವ-ಇವೇ ಮುಂತಾ ದುವುಗಳಿಂದ ಹೆಚ್ಚಿಸಿಕೊಳ್ಳಬಹುದು. ಒಳ್ಳೆಯ ನಡತೆಗಳಿಗೆ ಮಿತಿಯಿಲ್ಲ. ಅವು ಇಂತಿಂತಹವೇ ಸರಿ, ಇಸ್ರೇಸರಿ, ಎಂದು ನಿರ್ಧರಿಸಿ ಹೇಳ ಹೂಗುವನು ಆಕಾಶದಲ್ಲಿರುವ ನಕ್ಷತ್ರ ಗಳನ್ನೆಲ್ಲಾ ಎಣಿಸಿಬಿಡುವೆನೆಂದು ಹೇಳುವ ಮರುಳನಂತೆ, ಅಪಹಾಸಕ್ಕೆ ಗುರಿ ಯಾಗುವನು. ಹೀಗೆ ಅಪಾರಮಹಿಮೆಯುಳ್ಳ ನಡತೆಯ ವಿಷಯವನ್ನೆಲ್ಲಾ ಇಂತ ಹುದೊಂದು ಸಣ್ಣ ಪುಸ್ತಕದಲ್ಲಿಯೇ ಸಂಪೂರ್ಣವಾಗಿ ತಿಳಿಯಪಡಿಸುವುದು ಅಸಾಧ್ಯ. ಆದುದರಿಂದ ವಾಚಕರಿಗೆ ಮಾರ್ಗದರ್ಶಕಗಳಾಗಿರುವಂತೆ ಪ್ರಸಿದ್ಧ ವಾದ ಕೆಲವು ಅಂಶಗಳನ್ನು ಮಾತ್ರ ಆರಿಸಿಕೊಂಡು ಪ್ರತಿಯೊಂದು ವಿಷಯದಲ್ಲೂ ಒಂದೊಂದು ಪ್ರಬಂಧವನ್ನು ಬರೆದು ತಕ್ಕಮಟ್ಟಿಗೆ ವಿವರಿಸ ಲಾಗುವುದು