ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಟಿಸಬೇಕು. ಇದು ಆಯಕಕ್ಕಿಯಿಂದ ಮಾಡುವ ಸಹಾಯಕ್ಕಿಂತ ಶ್ರೇಷ್ಠ ವಾದುದು. ನ್ಯಾಯಕ್ಕಾಗಿ ಹೀಗೆ ಪ್ರವರ್ತಿಸುವುದು ಎಂದಿಗೂ ಅಧರವಲ್ಲ: ನ್ಯಾಯಕ್ಕೆ ತಪ್ಪಿನಡೆಯುವ ಶಕ್ತಿಯು ಲೋಕಕಂಟಕವು. ಕಳ್ಳರು ದಂಗೆ ಕೋರರು, ಮೊದಲಾದವರು ಎಷ್ಟು ಧೈರವನ್ನು ತೋರಿಸುವರು ! ಆದರೂ ಅವರು ನ್ಯಾಯಪರರೆನಿಸಿಕೊಂಡಾರೆ ? ನ್ಯಾಯವು ದೈಹಿಕವಲ್ಲ, ಮಾನಸಿಕವಾದುದು. ಇದು ಜೀವನಿಗೆ ದಿಶ್ಯವಾದ ನಿತ್ಯಾಲಂಕಾರ, ನಾವು ಇತರರ ಹಕ್ಕು ಬಾಧ್ಯತೆಗಳನ್ನು ಗೌರ ವಿಸದಿದ್ದರೆ ಎಂದಿಗೂ ನ್ಯಾಯಪಕ್ಷಪಾತಿಗಳನಿಸಿಕೊಳ್ಳಲಾರವು. ಇತರರ ಸ್ವಾತಂತ್ರಕ್ಕೆ ಭಂಗತರುವುದು, ಇತರರು ಮಾತಾಡುವುದಕ್ಕೆ ಅಡ್ಡಿಮ ಡುವುದು, ಇಂಥವುಗಳಲ್ಲಾ ಅನ್ಯಾಯಕಾರಗಳು, ಅಧಿಕಾರದ ಅಥವಾ ಏಕ ಶ್ಯದ ಹೆಮ್ಮೆಯಿಂದ ಬಲಾತ್ಕಾರವಾಗಿ ಇತರರ ವಸ್ತುಗಳನ್ನು ಬಿಟ್ಟ ಯಾಗಿ ಅಥವಾ ಅಲ್ಪಕ್ರಯಕ್ಕೆ ಪಡೆಯುವುದು, ಬಿಟ್ಟ ಚಾಕರಿ ದುಡಿಸುತ್ತ ಜನಗಳಿಗೆ ತೊಂದರೆಯನ್ನುಂಟುಮಾಡುವುದು, ಹತ್ತು ಜನಗಳಿಗೆ ಸೇರಿದು ದನ್ನು ತನೊಬ್ಬನೇ ದಕ್ಕಿಸಿಕೊಳ್ಳುವುದು, ಇವೆಲ್ಲಾ ಅನ್ಯಾಯ, ತಪ್ಪು ಮೂಡದೆ ಇರುವವರಲ್ಲಾ ನ್ಯಾಯವಾದಿಗಳನಿಸಿಕೊಳ್ಳಲಾರರು. ಆದರೆ ತನ್ನ ಮೂಡುವುದಕ್ಕೆ ಅವಕಾಶವಿದ್ದಾಗ ಕೂಡ ಮನಸ್ಸನ್ನು ಬಿಗಿಹಿಡಿದು ಯಾರು ನ್ಯಾಯವಾಗಿ ನಡೆಯುವರೋ ಅವರೇ ನ್ಯಾಯಪಕ್ಷಪಾತಿಗಳು, ಮತ್ತು ಸಣ್ಣ ಪುಟ್ಟ ಅಂಶಗಳಲ್ಲಿ ಮಾತ್ರ ನ್ಯಾಯವಾಗಿ ನಡೆದಮಾತ್ರಕ್ಕೆ ಅವ ರನ್ನು ನ್ಯಾಯಪರರೆನ್ನಲಾಗದು. ಕಲವರಿಗೋಸ್ಕರ ಅನೇಕರನ್ನು ದೂಷಿ - ಸುವುದು, ಕೆಲವರು ರಾಜದ್ರೋಹವಾಡಿ ಒಟ್ಟು ದೇಕದವರೆಲ್ಲಾ ಸತ್ಕಾರ * ವಿರೋಧಿಗಳಾಗುವಂತೆ ಮಾಡುವುದು, ಎಲ್ಲಿಯೋ ಒಂದು ಕಡೆ ಅಕ ಸ್ಮತ್ತಾಗಿ ಅಚಾತುರವು ನಡೆದರೆ ಒಟ್ಟು ನ್ಯಾಯವನ್ನು ಮತ್ತು ನ್ಯಾಯಾ ಧಿಕಾರಿಗಳನ್ನು ದೂರುವುದು ಇಂಥದೆಲ್ಲಾ ನಿದ್ದ. ಉದಾ-ಸಹಾಯವು ದೊರೆಯುವುದಕ್ಕೆ ಮೊದಲೇ ಒಬ್ಬ ಬಡವನು ಸತ್ತರೆ ಅನಾಥಾಲಯವನ್ನು ನಿಂದಿಸುವುದು, ಮೊದಲಾದುವು. ಯಾರಾದರೂ ನಮಗೆ ಕರಕುಮಾಡಿದರೆ ಆ ವಿಷಯವನ್ನು ನಾ ಸ್ತನಗಳಿಗೆ ತಿಳಿಸದೆ ನವೆ ಪ್ರತೀಕಾರ ಮಾಡುವುದು ತಪ್ಪ, ಮುತಾ 19+