ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ORE ತೆರಿಗೆಯನ್ನೂ ಕೊಡಬೇಕಾದುದಿಲ್ಲ. ಕಡೆಗೆ ಒಡಹುಟ್ಟಿದವರಿಗೆ ಕೈಕ ಇದರಲ್ಲಿ ಪಾಲುಕೊಡುವಹಾಗಿಲ್ಲ. ಅವಿದ್ಯೆಯೇ ಮೌಡ್ಯ, ಇದು ಕಡಕಿಗೆ ತವರುಮನೆ, ಮತ್ತು ದೇವಶಾಪ, ಅಕ್ಷಬವಿದ್ಯೆಯ ಪ್ರಯೋಜನಗಳನ್ನು ಅಪ್ಪಿಷ್ಟೆಂದು ಹೇಳಲಾಗುವ ದಿಲ್ಲ. ಇದರಿಂದ ಬುದ್ಧಿಯು ಚುರುಕಾಗುವುದು. ಜ್ಞಾನವು ಹೆಚ್ಚುವುದು, ಸುಲಭವಾಗಿ ಜೀವನವನ್ನು ನಡೆಯಿಸಿಕೊಳ್ಳಬಹುದು. ಪರಸ್ಪರ ಸಹಾ ಯಕ್ಕೆ ಅನುಕೂಲ. ಯಾವ ಕೆಲಸವನ್ನಾದರೂ ಸುಲಭವಾಗಿಯ ಚೆನ್ನ ಗಿಯ ಮಾಡುವಂತಾಗುವುದು. ಆದುದರಿಂದ ಜೀವಮಾನಕ್ಕೆ ಸವು ಅತ್ಯಾವಶ್ಯಕ, ಅಷ್ಟೇ ಅಲ್ಲ, ಇದು ಸ್ವರ್ಗಕ್ಕೆ ಸೋಪಾನ; ಹೀಗೆ ವಿದ್ಯೆಯು ಇಹಪರಗಳೆರಡಕ್ಕೂ ಸಾಧಕವೆಂದಾಯಿತು. ಸುಬುದ್ದಿಯನ್ನೂ ಸುಜ್ಞಾನವನ್ನೂ ಪಡೆದವನೇ ಸುಖಿಯೆಂದೂ ಅವು ಅವನ ಭಾಗದ ಬೆಳ್ಳಿ ಯೆಂದೂ ಅವುಗಳಿಂದ ಪಡೆದ ಅನುಭವವು ಅಪರಂಜೆಯ ಚಿನ್ನವೆಂದೂ ಒಬ್ಬ ವಿದ್ವಾಂಸನು ಹೇಳಿರುವನು. ಆದುದರಿಂದ ವಿದ್ಯೆಯು ಸರಳ ವೆಂದಾಯಿತು. ಇಂಥ ವಿದ್ಯೆಯು ಸರಿಗೂ ಆವಶ್ಯಕ. ಆದರೆ ಸ್ತ್ರೀಯರಿಗೆ ಇದು ಬೇಕಿಲ್ಲವೆಂದು ಇನ್ಸ್, ಜನ್ಮನಿ ಮೋದ ಲಾದ ದೇಶಗಳವರೂ ಕೂಡ ಅಭಿಪ್ರಾಯಪಟ್ಟಿದ್ದರು. ಈಚೆಗೆ ವಿದ್ಯೆಯ ಮಹಿಮೆಯನ್ನು ಕಂಡುಕೊಂಡುದರಿಂದ ಈಗ ಅವರಲ್ಲಿ ಎಲ್ಲರೂ ವಿದ್ಯಾ ವಂತರಾಗಿದ್ದಾರೆ ನಮ್ಮ ಸ್ತ್ರೀಯರಿಗೆ ವಿದ್ಯೆಯು ಅನಾವಶ್ಯಕವೆಂದು ಹೇಳುತ್ತ ಕೆಲವರು ಅವರನ್ನು ಮೂಲೆಗೊತ್ತರಿಸಿರುವರಲ್ಲದೆ ಅದು ಅದು ಯಕರವೆಂದು ಕೂಡ ನಂಬಿಕೊಂಡಿದ್ದಾರೆ. ಇದು ನಿರಾಧಾರವಾದ ನಂಬಿಕೆ. ಈಗಿನ ಮಕ್ಕಳ ಮುಂದಿನ ಪ್ರಜೆಗಳು ತಾಯಿಯ ಪದವಿಯನ್ನು ಪಡೆಯು ತಕ್ಕ ಸ್ತ್ರೀಯರು ವಿದ್ಯಾಬುದ್ಧಿಗಳಲ್ಲದೆ ಪಶುಗಳಂತಿದ್ದರೆ ಅವರಲ್ಲಿ ಹತ್ತಿ ಸುವ ಮಕ್ಕಳು ಮೇಧಾವಿಗಳಾದಾರೆ ? ಪುರುಷರಂತೆ ಸ್ತ್ರೀಯ ವಿದ ವತಿಯರಾದರೆ ಸಂತಾನವು ಈಗ್ಗಿ ೦ತ ಎಪೆಟ್ಟ ಮೇಲಾದೀತು. ಇದು ಹಾಗಿರಲಿ, ದಾಂಪತ್ಯದಲ್ಲಿ ಸ್ತ್ರೀ ಪುರುಷರಿಗೆ ಪರಸ್ಪರವಾಗಿ ಶುದ್ಧವಾರ ಮೈತ್ರಿಯ ಒಂದು ಮುದ್ದೇಶವಷ್ಟೆ. ಸ್ನೇಹಿತರಾಗಿರತಕ್ಕವರು ಸಕಲವಿಷಯಗಳ ಪರಸ್ಪರ ಸಮಾನರಾಗಿರಬೇಕಲ್ಲವೆ? ವಿದ್ಯಾವೆ