ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

AWv ಕರ್ಣಾಟಕ ಗ್ರಂಥಮಾಲೆ ಶನೂ ಕುಶಲನೂ ಆದ ಪುರುಷನಿಗೆ ವಿದ್ಯೆಯಿಲ್ಲದೆ ಮಢಳಾದ ಸ್ತ್ರೀಯ ಪತ್ನಿಯಾದರೆ ಆ ಸಂಸಾರವು ಒಂದು ಕುದುರೆಯನ್ನೂ ಒಂದು ಎತ್ತನ್ನ ಒಂದು ಬಂಡಿಗಕಟ್ಟಿ ಎಳಯಿಸಿದಂತ ಅಸಮಂಜಸವಾಗುವುದಲ್ಲವೆ? ಮತ್ತು ಆಕೆಯಿಂದ ಗೃಹಕೃತ್ಯವು ನಿರಾಹವಾಗುವ ಬಗೆ ಹೇಗೆ ? ಎರಡು ಕೆಲಸ ಗಳನ್ನೂ ಪುರುಷನೇ ಮಾಡಬೇಕಾಗುವುದಲ್ಲಾ ! ಇದೂ ಅಂತಿರಲಿ, ಕೃಪಾಳುವಾದ ಭಗವಂತನು ನಿಷ್ಪಕ್ಷಪಾತಿಯಲ್ಲವೆ ? ಆತನು ಸ್ತ್ರೀಯ ರಂದು ಅವರನ್ನೇನಾದರೂ ಕೀಳಾಗಿ ತಿರಸ್ಕರಿಸಿದ್ದಾನೆಯೇ ? ಅವರಿಗೆ ವಿದ್ಯೆಯನ್ನು ಕಲಿಸಿದ ಮಾತ್ರಕ್ಕೆ ಏನೂ ಕೇಡಾಗದಿರುವುದು ಮಾತ್ರ ವಲ್ಲದೆ ಬದುಕುವುದಕ್ಕೂ ಒಳ್ಳೆಯದಾರಿ ಸಿಕ್ಕುವುದು. ಪೂರ ಕಾಲದ .ಆರ್ ಮಹಿಳೆಯರು ಎಷ್ಟೋ ವಿದ್ಯಾವತಿಯರಾಗಿದ್ದರು. ಈಗಿನವರೂ ಅವರಂತೆಯೇ ಆಗಬೇಕು. ಪೂರದಲ್ಲಿ ವಿದ್ಯೆಯನ್ನು ಕೆಲವು ಜಾತಿಯವರು ಮಾತ್ರ ಕಲಿಯು ತಿದ್ದರು. ಉಳಿದವರು ಕೃಷಿ, ಕೈಗಾರಿಕೆ ಮೊದಲಾದವುಗಳಲ್ಲಿ ಮಾತ್ರ ಹೆಚ್ಚು ಪರಿಶ್ರಮವನ್ನು ಪಡೆದಿದ್ದರು. ವಿದ್ಯಾವಂತರು ಈ ಕೆಲಸಗಾರರನ್ನು ಕೀಳಾಗಿ ಕಾಣುತ್ತಿದ್ದರು. ಇದು ನಮ್ಮ ಭರತಖಂಡದಲ್ಲಿ ಮಾತ್ರವಲ್ಲ, ಇಂಗ್ಲೆಂಡ್ ಮೊದಲಾದ ದೇಶಗಳಲ್ಲಿಯೂ ಹೀಗೆಯೇ ಇದ್ದಿತು, ಈಗ ನಮ್ಮಲ್ಲಿ ಒಬ್ಬ ರೈತನು ತಕ್ಕಮಟ್ಟಿಗೆ ವಿದ್ಯೆಯನ್ನು ಕಲಿತರೂ ತನ್ನ ಕಸಬನ್ನೇ ತಿರಸ್ಕರಿಸಿ ಸತ್ಕಾರದ ಉದ್ಯೋಗ ಇತರ ಭೋಗಗ ಆಗ ಎಳಸುತ್ತಿರುವ ಕೆಟ್ಟ ಪದ್ಧತಿಗೆ ಈ ಮೇಲಿನ ದುರಭಿಪ್ರಾಯವೇ ೪ರಣವು. ಅಕ್ಷರವಿದ್ಯೆಯು ಸರರಿಗೂ ಆವಶ್ಯಕವೆಂದಮೇಲೆ ಸಾಮಾನ್ಯವಾಗಿ ಎಲ್ಲರಿಗೂ ಓದುಬರಹ ಲೆಕ್ಕಗಳಾದರೂ ಚೆನ್ನಾಗಿ ತಿಳಿದಿರಬೇಕು. ಅಲ್ಲದೆ ಆಯಾ ಕಸಬುದಾರರಿಗೆ ಅವರವರ ವೃತ್ತಿಗಳಲ್ಲಿ ದಕ್ಷತೆಯನ್ನುಂಟುಮಾಡಿ ಕೊಳ್ಳುವುದಕ್ಕೆ ವಿಶೇಷ ರೀತಿಯ ವಿದ್ಯಾಭ್ಯಾಸವೂ ಅತ್ಯಾವಶ್ಯಕ. ಪ್ರಕೃತಿ ದಲ್ಲಿ ನಮ್ಮ ದೇಶದ ಜನರ ಸ್ಥಿತಿಯನ್ನು ನೋಡೋಣೆ ಮೇಲೆ ಕಂಡಂಥ ಕಸಬುದಾರರಿಗೆ ಸಾಮಾನ್ಯವಾದ ಓದುಬರಹಗಳು ಕೂಡ ಬರಲ್ಲ, ರೈತರು ತಮ್ಮ ಹಳ್ಳಿಯಲ್ಲಿ ವಿದ್ಯಾಶಾಲೆಯನ್ನು ಪಡೆದಿದ್ದರೂ ಓದುವ