ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಗ್ರಂಥಮಾಲೆ ಮುಂದೆ ಓದಿದರೆ ಫಲಪುಪ್ಪಗಳು ದೊರೆತವೆ? ಆದುದರಿಂದ ಪ್ರಪಂಚದ ಪ್ರಕೃತಿ ವಸ್ತುಗಳನ್ನು ಪ್ರತ್ಯಕ್ಷವಾಗಿ ಪರೀಕ್ಷಿಸಿ ತಿಳಿದುಕೊಳ್ಳ ವುದೂ ಒಂದು ವಿಧವಾದ ವಿದ್ಯಾಭ್ಯಾಸವೇ ಸರಿ. ವಿದ್ಯೆಯನ್ನು ಕಲಿಸುವ ಉಪಾಧ್ಯಾಯರ ಕೆಲಸವು ಬಹಳ ಜವಾ ಬ್ದಾರಿಯುಳ್ಳದು ಇದು ಬಹಳ ಕಷ್ಟವಾದುದರಿಂದ ಬೇಸರಪಡಿಸಿ ಸಾಕ ನ್ನಿಸುವುದು, ಮಕ್ಕಳ ಸಂಗಡ ಆಡುವುದೇ ಸಂತೋಷಕರ. ಆದರೆ ಅವ ರಿಗೆ ಪಾಠಗಳನ್ನು ಮುಖ್ಯವಾಗಿ ಗಣಿತ ವ್ಯಾಕರಣ ಮೊದಲಾದುವುಗಳನ್ನು ಬೋಧಿಸುವಾಗ ಉತ್ತೇಜನಕೊಟ್ಟು ಕುತೂಹಲವನ್ನು ಹುಟ್ಟಿಸಿ ಕಲಸ ಮೂಡುತ್ತ ಬುದ್ಧಿ ಸಂಸ್ಕಾರ ಮಾಡುವುದಾದರೂ ಎಂದಿಗೂ ಸುಲಭವಲ್ಲ. ವಿದ್ಯೆಯನ್ನು ಕಲಿಯುವುದರಲ್ಲಿ ನ್ಯಾಯವಾದಿ, ಉಪಾಧ್ಯಾಯ ಅಥವಾ ವೈದ್ಯ ಇಂಥವರಾಗಬೇಕೆಂಬ ಉದ್ದೇಶಗಳು ಮುಖ್ಯವಲ್ಲ. ಸಂವಾದ ಅಥವಾ ರಾಜಕೀಯವಾದ ಯಾವ ಕಲಸವನ್ನಾದರೂ ನ್ಯಾಯವಾಗಿಯೂ ಬುದ್ದಿವಂತಿಕೆಯಿಂದಲೂ ಧಾರಾಳವಾಗಿ ನಿರಹಿಸಬಲ್ಲ ಶಕ್ತಿಯುಂಟಾಗುವ ಮಟ್ಟಿಗೆ ವಿದ್ಯೆಯಿಂದ ಫಲವಾಗಬೇಕು, ಮತ್ತು ದೇಶಾಭಿಮಾನ, ರಾಜ ಭಕ್ತಿ, ಆತ್ಮಸಂಯಮುನ, ಪರಿಶುದ್ದಿ ಇವೂ ಉಂಟಾಗಬೇಕು. ಮಕ್ಕಳಿಗೆ ಬರೀ ಪುಸ್ತಕಪಾಠಗಳನ್ನೇ ಕಲಿಸದೆ ಮರ, ಗಿಡ, ಬೆಟ್ಟ, ಗುಡ್ಡ, ಹೊಳ, ಆಕಾಶ, ನಕ್ಷತ್ರ, ಮೋಡ, ಗಾಳಿ, ಮಳೆ, ಪ್ರಾಣಿಗಳು ಇಂಥವನ್ನು ಪ್ರತ್ಯ ಕ್ಷವಾಗಿ ಬೆಧಿಸಬೇಕ... ಬರೀ ಪುಸ್ತಳಪಾಠದಲ್ಲಿ ಪ್ರತ್ಯಕ್ಷಾನುಭವಕ್ಕೂ ತನ್ಮೂಲಕವಾಗಿ ಪರಾಮರ್ಶಕ ಅವಕಾಶವಿರುವುದಿಲ್ಲ. ಯಾವ ವಿಷಯ ನನ್ನ ಕಣ್ಣಿಂದ ನೋಡುವಷ್ಟು ಚೆನ್ನಾಗಿ ಪುಸ್ತಕಗಳಲ್ಲಿ ವರ್ಣಿಸಲಾಗುವು ದಿಲ್ಲ. ಪ್ರತ್ಯಕ್ಷವಾದ ಪ್ರಕೃತಿಪಂಠಕ್ಕೆ ಹಳ್ಳಿಯ ಅತ್ಯಗಳಲ್ಲಿ ಸೌಕಯ್ಯ ಹೆಚ್ಚು. ಪ್ರಕೃತಿಪಾಠವನ್ನು ಸಾಕ್ಷಾತ್ತಾಗಿ ಕಲಿಯುವ ಅಭ್ಯಾಸವನ್ನು ನಾವು ಪಡೆಯದಿರುವುದರಿಂದಲೇ ನಮ್ಮಲ್ಲಿ ಪಾಠಶಾಲೆಯನ್ನು ಬಿಟ್ಟ ನಂತರ ವಿದ್ಯಾಭ್ಯಾಸವು ನಿಂತೇ ಹೋಗುವುದು. ವಿದ್ಯಾಭ್ಯಾಸದ ವಿಚಾರದಲ್ಲಿ ಪ್ರೊಫೆಸರ್ ಹಕ್ಷ್ಮಿಯು ಹೀಗೆ ಹೇಳಿದ್ದಾನೆ. “ ಹುಡುಗರು ೧೫-& ವಯ ಸ್ಸಿನೊಳಗೆ ಸೃಭಾಷೆಯನ್ನಾದರೂ ಚನ್ನಾಗಿ ಓದುವುದು, ಬರೆಯುವುದು, ಒಳ್ಳಯ ಕವಿಗಳ ಉದ್ಧಂಥಗಳನ್ನು ಗ್ರಹಿಸುವುದು, ಪ್ರದೇಶದ ಚರಿ