ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

M0 ಕರ್ನಾಟಕ ಗ್ರಂಥಮಾಲೆ ಕ್ಷೇಪ ಮಾಡುವುದು ನಮ್ಮಲ್ಲಿ ವಿಶೇಷ ರೂಢಿಯಲ್ಲಿಲ್ಲವಾದರೂ ಕೇವಲ ನಾಗರಿಕತೆಯುಳ್ಳ ಪಂಕ್ತಾ ರಾಜ್ಯಗಳಲ್ಲಿ ಬಳಕೆಯಲ್ಲಿವೆ. ಈ ವಿಷಯ ದಲ್ಲಿ ರಿಚರ್ಡ್‌ಡಿ ಎಂಬ ಪ್ರಸಿದ್ಧನಾದ ಒಬ್ಬ ಪಂಡಿತನು ಈಗ್ಗೆ 500ವರ್ಷ ಗಳಿಗೆ ಮೊದಲೇ ಈ ರೀತಿಯಾಗಿ ಅಭಿಪ್ರಿಯಪಟ್ಟಿರುವನು-ಏನೆಂದರೆ ಪುಸ್ತಕಗಳು ಸರೋತ್ತಮವಾದ ಉಪಾಧ್ಯಾಯರು. ಅವರು ಕೋಪಿ ಕೊಳ್ಳದೆಯೂ ಬೆತ್ತ ಮೊದಲಾದುವುಗಳಿಂದ ಶಿಕ್ಷಿಸದೆಯ ಸಂಬಳ ವನ್ನು ಅಥವಾ ಅನ್ನವಸ್ತುದಿಗಳನ್ನು ಕೇಳದೆಯ ಒಳ್ಳೆಯ ವಿಷಯ ಗಳನ್ನು ತಿಳಯಿಸುವರು. ನಾವಾಗಿ ಅವರ ಸಹಾಯವನ್ನು ಅಪೇಕ್ಷಿಸಿ ದರೆ ಸಾಕು. ಅವರೇನೋ ಸದಾ ಎಚ್ಚರವಾಗಿಯೂ ಸಿದ್ದವಾಗಿಯ ಅರುವರು. ಇವರು ಮೌನವಾಗಿದ್ದೇ ನಮಗೆ ಬೋಧಿಸಬಲ್ಲರು. ನಮಗೆ ತಿಳಿಯದ ಅಂಶಗಳನ್ನು ಎಷ್ಟು ಸಲ ಕೇಳಿದರೂ ಅವರು ಬೇಸರಗೊಳ್ಳುವು ದಿಲ್ಲ, ಯಾವುದನ್ನೂ ಮುಚ್ಚಿಡದೆ ವ್ಯಕ್ತವಾಗಿ ತಿಳಿಯಿಸುವರು. ನಾವು ತಪ್ಪಾಗಿ ತಿಳಿದುಕೊಂಡರೆ ಅವರು ಅಸಮಾಧಾನದಿಂದ ಗೊಣಗುಟ್ಟುವು ದಿಲ್ಲ. ' ಇಂಥ ಪುಸ್ತಕಗಳುಳ್ಳ ಪುಸ್ತಕಭಂಡಾರವು ನವನಿಧಿಗಳ ಬೊಕ್ಕಸ ಕ್ಕಿಂತಲೂ ಬೆಲೆಯಾದುದು. ಇದಕ್ಕೆ ಸಮಾನವಾದುದು ಯಾವುದೂ ಇಲ್ಲ. * ನಿಕ್ಷಯಾಂಶಗಳು, ಸುಖ, ಕೌಶಲ, ಶಾಸ್ತ್ರ ವಿಚಾರ, ಭಕ್ತಿ ಇಂಥ ವನ್ನು ಪಡೆಯಬೇಕೆಂಬುವರು ಪುಸ್ತಕಗಳನ್ನು ಚೆನ್ನಾಗಿ ಪ್ರೀತಿಸಬೇಕು, ಪುಸ್ತಕಗಳ ಪ್ರಚಾರವು ಕಡಿಮೆಯಾಗಿದ್ದ ಅಷ್ಟು ಹಿಂದಿನ ಕಾಲದಲ್ಲಿ ಕಂಡ ಈ ವಿಷಯವು ಅಷ್ಟು ಶ್ಲಾಧ್ಯವಾಗಿರುವಲ್ಲಿ ಈಗ ಅದನ್ನು ಕುರಿತು ಎಷ್ಟು ಹೇಳಿದರೂ ತೀರದು. ನಮ್ಮಲ್ಲಿ ಪೂರದ ಪುಸ್ತಕಗಳು ಓಲೆಯುಗ ರಿಗಳ ರೂಪದಲ್ಲಿರುತ್ತಿದ್ದುದರಿಂದ ಅವನ್ನು ಹಿಡಿದುಕೊಳ್ಳುವುದಕ್ಕೂ ಓದು ವುದಕ್ಕೂ ಓದುವುದಕ್ಕಾಗಿ ಸಿಕ್ಕಿದ ಕಡೆಗೆ ತೆಗೆದುಕೊಂಡು ಹೋಗುವು ದಕ್ಕೂ ಸೌಲಭ್ಯವಿರಲಿಲ್ಲ. ಈಗಿನವಾದರೂ ಬಹಳ ಅನುಕೂಲವಾಗಿರು ವುವು. ಪೂರದಲ್ಲಿ ಪುಸ್ತಕಗಳನ್ನು ಕೈಬರಹದಿಂದಲೇ ಬರೆಯಬೇಕಾಗಿ ದ್ದಿತು. ಆದುದರಿಂದ ಒಂದು ಗ್ರಂಥವನ್ನು ಅನೇಕರು ಏಕಕಾಲದಲ್ಲಿ ಓದು ವುದಕ್ಕೆ ಆಗುತ್ತಿರಲಿಲ್ಲ. ಇತ್ಯಾದಿ ಕಾರಣಗಳಿಂದ ಅವಕ್ಕೆ ಕಯವು ಹೆಚ್ಚಾಗಿದ್ದಿತು. ಬಡವರಂತು ಅವನ್ನು ಕೊಳ್ಳುವುದು ಅಸಾಧ್ಯವಾಗಿ -