ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ಯಾವ ರಾಜ್ಯದಲ್ಲೂ ಯಾವುದೊಂದು ಅನ್ಯಾಯವೂ ನಡೆಯದಿರು ವುದು ಅಸಾಧ್ಯ, ಒಂದೇಸಲಕ್ಕೆ ಅದನ್ನು ತಪ್ಪಿಸುವುದು ದುಸ್ತರವಾದರಗಿ ಅದಕ್ಕಾಗಿ ಸತ್ಕಾರದವರೂ ಪ್ರಜೆಗಳೂ ಸೇರಿ ಯತ್ನಿಸಬೇಕು. ಉತ್ತಮ ವಾದ ಸತ್ಕಾರವನ್ನು ಪಡೆದಿರುವುದರಿಂದ ನಾವೇ ಪುಣ್ಯಶಾಲಿಗಳು. ಜಾತಿ, ಮತ, ಕುಲ, ಬಡತನ, ನಿರಿತನ ಮುಂತಾದ ಯಾವ ಪಕ್ಷಪಾತವೂ ಇರ ಕೂಡದೆಂದು ಸತ್ಕಾರದವರು ಸರಸವವಾದ ವಿಧಿಗಳನ್ನು ಏರ್ಪಡಿಸಿದ್ದಾರೆ. ಎಲ್ಲರೂ ತನುಧನಮನಗಳಿಗೆ ಸ್ವತಂತ್ರರಾಗಿದ್ದಾರೆ. ತಪ್ಪಿತಸ್ಥರೆಂದು ರುಜು ವಾತಾದರೆ ವಿನಾ ಎಲ್ಲರೂ ಸಭ್ಯರೆಂದೇ ಗಣಿಸಲ್ಪಟ್ಟಿದಾರೆ. " ಒಂದೇ ತಪ್ಪು ತಕ್ಕೆ ಎರಡುಸಲ ಶಿಕ್ಷೆಯಾಗುವುದಿಲ್ಲ. ಯಾವ ವ್ಯವಹಾರದಲ್ಲಿಯ ಕಕ್ಷಿ ಪ್ರತಿಕಕ್ಷಿಗಳನ್ನು ಪ್ರತ್ಯಕ್ಷವಾಗಿ ನಿಲ್ಲಿಸಿಕೊಂಡು ಬಹಿರಂಗವಾಗಿ ನ್ಯಾಯಾ ಧಿಪತಿಗಳ ಮುಂದೆ ವಿಚಾರಣೆಯು ನಡೆಯಿಸಲ್ಪಡುತ್ತದೆ. ಯಾವನೂ ತನ್ನ ಸ್ವಂತವ್ಯವಹಾರದಲ್ಲಿ ತಾನೇ ನ್ಯಾಯಾಧಿಪತಿಯಾಗಕೂಡದೆಂದಾಗಿದೆ. ನಮ್ಮ ಶ್ರೀಮನ್ಮಹಾರಾಜರವರು ತಮ್ಮ ಪ್ರಜೆಗಳನ್ನೆಲ್ಲಾ ಪುತ್ರನಿರಿಶೇಷವಾಗಿ ರಕ್ಷಿಸುತ್ತಿದಾರೆ. ಇಂಥ ಅಪಾರವಾದ ಸೌಕಯ್ಯಗಳುಳ್ಳ ಧರಪಭುಗಳ ರಾಜ್ಯಭಾರದಲ್ಲಿ ನ್ಯಾಯವಾಗಿ ನೆಮ್ಮದಿಯಿಂದಿರುವುದಕ್ಕೆ ನನಗೇ ಕಷ್ಟ?

  • ಜನಗಳಿಗೆ ಉಪನ್ಯಾಸಗಳ ಮೂಲಕವಾಗಿ ಬುದ್ದಿ ಹೇಳುವುದು, ಪ್ರತಿ ನಿಧಿಗಳನ್ನು ಚುನಾಯಿಸುವುದು, ಸಭೆಗಳಾಗಿ ಸೇರುವುದು, ಸತ್ಕಾರದ ಪಕ್ಷ ದಲ್ಲಿ ಸಾಕ್ಷಿಯಾಗಿ ಅಥವಾ ಪಂಚಾಯಿತರಾಗಿ ಸೇರಿ ಕೆಲಸಮಾಡುವುದು ಇತರರಿಗೆ ಅನ್ಯಾಯವಾಗುತ್ತಿದ್ದುದು ಗೋಚರವಾದರೆ ಸತ್ಕಾರಕ್ಕೆ ತಿಳಯಿ ಸುವುದು, ಇತರರ ಸ್ವತ್ತು ಸಿಕ್ಕಿದಾಗ ಮಾಲೀಕರು ಯಾರೆಂಬುದು ತಿಳಿಯ ದಿದ್ದರೆ ಅದನ್ನು ಸತ್ಕಾರಕ್ಕೆ ಒಪ್ಪಿಸುವುದು, ಸಂಬಳವನ್ನು ಪಡೆಯದೆ ಸರಾ ರದ ಅಪ್ಪಣೆಯಂತೆ ಬೆಂಚ್‌ಮೆಜಸ್ಟಿಟ್, ಸ್ಕೂಲುಗಳ ಅಟೆಂಡೆಕ್ಸ್ ಆಫೀ ಸರು, ಸ್ಕೂಲ್ಕಮಿಟಿಯ ಮೆಂಬರು ಸೆಕ್ರೆಟರಿ ಗ್ರಾಮಾಭಿವೃದ್ಧಿಯ ಕಮಿಟಿ ಮುಂಬರು ಇಂಥ ಕಲಸಗಳನ್ನು ಕೈಗೊಂಡು ಪರಮಾರ್ಥಿಕತೆಯಿಂದ ನರ ಯಿಸುವುದು, ಇಂಥವನ್ನು ನಡೆಯಿಸಲು ಶಕ್ತಿಯು ಅಥವಾ ಅವಕಾಶವು ಇಲ್ಲದಿದ್ದಲ್ಲಿ ದ್ರವ್ಯದಿಂದ ಅಥವಾ ಇತರ ವಿಧಗಳಿಂದಲಾದರೂ ಲೋಕೋ ಭದಮಾಡುವುದು, ಇವತ್ತು ನಾಗರಿಕರಿಂದ ಪಚಗಳ ಕರ್ತವ್ಯಗಳು,

24