ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕಗ್ರಂಥಮಾಲೆ ಸಹಾಯ ಮಾಡಬೇಕು. ಹೆಣ್ಣು ಮಗಳು ತಾಯಿಗೆ ಎಷ್ಟೋ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಡಬಹುದು. ಹೀಗೆಯೇ ಮಗನು ತಂದೆಗೂ ಸಹಾ ಯಮಾಡಬಹುದು. ದೊಡ್ಡ ದೊಡ್ಡ ಕೆಲಸಗಳನ್ನು ಮಾಡುವುದರಲ್ಲಿ ಮಾತ್ರ ಮಯ್ಯಾದೆಯಿಂದ ನಡೆಯಬೇಕೆಂಬುದು ಅಷ್ಟು ಉಚಿತವಾದು ದಲ್ಲ. ಸಣ್ಣ ಪುಟ್ಟ ಕೆಲಸಗಳಲ್ಲೂ ಮರಾದೆಯ ನ್ನು ತೋರಿಸು ವುದೇನೂ ಅಷ್ಟು ಕಷ್ಟತರವೂ ಅಲ್ಲ. ದೊಡ್ಡವರು ಹೇಳಿದವಸ್ತುಗಳನ್ನು ತಂದುಕೊಡುವುದು, ಅವರು ಮರೆತುದನ್ನು ಜ್ಞಾಪಿಸುವುದು, ಮನೆಗೆ ಯಾರಾ ದರೂ ಬಂದುದನ್ನು ತಿಳಿಸುವುದು, ಬಂದವರನ್ನು ಮರಾದೆಯಿಂದ ಆದರಿಸು ವುದು, ಇಂತಹ ಎಷ್ಟೋಬಗೆಯ ಕೆಲಸಗಳನ್ನು ಸಣ್ಣವರುಕೂಡ ಆಚರಿಸ ಬಹುದಾಗಿದೆ. ಇತರರ ಸಂಗಡ ತಾಯ್ತಂದೆಗಳ ವಿಷಯವಾದ ಮಾತುಗ ಳನ್ನು ಆಡುವುದರಲ್ಲಿ " ತಾಯಿಯವರು ” “ ತಂದೆಯವರು ” ಎಂದು ಹೇಳ ಬೇಕೇ ಹೊರತು, ಸಣ್ಣ ಮಾತುಗಳನ್ನುಪಯೋಗಿಸಬಾರದು. ಮತ್ತು ಏಕವ ಚನಪ್ರಯೋಗವೂ ಅನುಚಿತ ಸ್ತ್ರೀಯರು ತಮಗಿಂತ ದೊಡ್ಡವರಾಗಿಗಲಿ ಅಥವಾ ಚಿಕ್ಕವರೇ ಆಗಿರಲಿ ಯಾವ ಸಂದರ್ಭದಲ್ಲೂ ಅವರನ್ನು “ ಏನೆ” “ ಬಾರೆ ಎಂದೂ, ಪುರುಷರಲ್ಲಿ ಯಾರನ್ನಾದರೂ “ಏನೋ ೨ ಬಾರೋ | ಎಂದೂ ಕರೆಯಬಾರದು. ಮತ್ತು ಪುರುಷರಲ್ಲಿ ಚಿಕ್ಕವರನ್ನೂ ಕೂಡ « ಏನಯ್ಯಾ” ಎಂದು ಮರಾದೆಯಿಂದ ಸಂಬೋಧಿಸಬೇಕೇ ಹೊರತು ಎಷ್ಟೇ ಸಲಿಗೆಯಿದ್ದರೂ ಸಣ್ಣ ಮಾತುಗಳಿಂದ ಕರೆಯ ಬಾರದು. ಅಲ್ಲಿ ತಂಮ್ಮಂದಿ ರನ್ನೂ ಅಕ್ಕ ತಂಗಿಯರನ್ನೂ ಪ್ರೀತಿಯಿಂದ ಕಾಣಬೇಕು. ಇತರರ ಸಂಗಡಮಾತ್ರವಲ್ಲದೆ ನಾವು ಒಬ್ಬೊಂಟಿಗರಾಗಿರುವಾಗಲೂ ಎಚ್ಚರಿಕೆಯಿಂದ ಆಚರಿಸಬೇಕಾದ ಎಷ್ಟೋ ಸಂಗತಿಗಳುಂಟು. ಮನೆಯ ಬಾಗಿಲುಗಳನ್ನು ಬಲವಾಗಿ ಹಾಕುತ್ತಲೂ, ಸಿಕ್ಕಿದ ವಸ್ತುಗಳನ್ನು ಮೇಲಿ ನಿಂದ ಎತ್ತಿ ಕುಕ್ಕುತ್ತಲ ಗದ್ದ ಲಮಾಡಬಾರದು, ಚಾಪೆ, ಕುರ್ಚಿ, ಬೆಂಚು I |