ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳ ಪ್ರದೇಶದ ವಿಷಯದಲ್ಲಿ ಮಾತ್ರವಲ್ಲದೆ ಪರದೇಶಗಳಲ್ಲಿಯ ಬೆಂಕಿ ಯ ಅಥವಾ ನೀರಿನ ಅನಾಹುತ, ಜ್ಞಾನ, ಭೂಕಂಪ, ಬಿರುಗಾಳಿ, ಯುದ್ಧ ಮೊದಲಾದವುಗಳಿಂದ ಏನಾದರೂ ಕಷ್ಟನಷ್ಟಗಳು ಸಂಭವಿಸಿದುದನ್ನು ತಿಳಿ ದರೂ ನಮ್ಮಿಂದ ಸಾಧ್ಯವಾಗುವಷ್ಟು ಸಹಾಯವನ್ನಾದರೂ ಮಾಡಿ ನನ್ನ ಅನುತಾಪವನ್ನು ತೋರಿಸಬೇಕು. ರೈಲುರಸ್ತೆಗಳು ಬಂಡಿಯಮಾರ್ಗಗಳು, ಪರ್ತಮಾನಪತ್ರಿಕೆಗಳು, ಅಂಚೆ, ಇಂಥ ಸೌಕಯ್ಯಗಳು ಹೆಚ್ಚುತ ಬಂದಂತ ಈ ಜನಗಳು ಪ್ರತ್ಯಕ್ಷವಾಗಿ ಅಥವಾ ಬರವಣಿಗೆಯ ಮೂಲಕವಾಗಿ ಪರಸ್ಪರ ಅಭಿಪ್ರಾಯಗಳನ್ನು ಗ್ರಹಿಸಿಕೊಂಡು ಒಬ್ಬರ ಕಷ್ಟ ಸುಖಗಳನ್ನು ಮತ್ತೊಬ್ಬರು ತಿಳಿದು ಆಯಾ ಕಾಲದೇಶಗಳಿಗನುಗುಣವಾಗಿ ನಡೆದು ದೇಶಾ ಭಿಮಾನವನ್ನು ತೋರ್ಪಡಿಸುವುದಕ್ಕೆ ಬಹಳ ಅನುಕೂಲ. ಎಲ್ಲರೂ ಸ್ವಲ್ಪಸ್ವಲ್ಪ ಕಷ್ಟಪಟ್ಟರೂ ಒಟ್ಟು ಹೆಚ್ಚು ಫಲವನ್ನು ಅನುಭವಿಸುವು ದಕ್ಕೆ ದೇಶಾಭಿಮಾನವು ತುಂಬ ಸಹಾಯಕ, ಉದಾ-ಯಾವುದೋ ಒಂದು ದೊಡ್ಡ ಸಹಾಯವಾಗಬೇಕೆಂದು ಅರ್ಜಿಯನ್ನು ಬರೆದು ಸತ್ಕಾರಕ್ಕೆ ಕಳುಹಿಸಬೇಕಾಗಿರುವಲ್ಲಿ ಆ ಅರ್ಜೆಗೆ ರುಜು ಹಾಕುವಷ್ಟು ಮಟ್ಟಿನ ಅಲ್ಪಾಯಾಸವನ್ನು ಮಾತ್ರ ಎಲ್ಲರೂ ವಹಿ ಸುವುದು ಹೊರತು ಮತ್ತೆ ಯಾವ ವಿಧದಲ್ಲಿಯೂ ಯಾರೂ ಏನೂ ಕಪ್ಪದ ಡಬೇಕಾಗಿರುವುದಿಲ್ಲವೆಂದು ಭಾವಿಸೋಣ, ಆದರೂ ಅದರಿಂದ ಹೆಚ್ಚಾದ ಮತ್ತು ಉತ್ತಮವಾದ ಫಲವಾಗುವ ಸಂಭವವೇನೋ ಉಂಟು. ಯಾವ ನಿಜವಾದ ದೇಶಾಭಿಮಾನಿಗಳೂ ಅವರೇ ನಿಜವಾದ ದೇಶೋದ್ದಾರಕರು ಅವರೇ ಸ್ವರಾಜ್ಯ ಮಾತೃವಿಗೆ ಚಿರಸಪುತ್ರರು. ಅಂಥವರನ್ನು ಪಡೆದಿರುವ ದೇಶವೇ ಪುಣ್ಯಭೂಮಿಯು.