ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ಮೊದಲಾದ ವಸ್ತುಗಳ ಕೊಳೆಯಾಗದಂತೆ ನೋಡಿಕೊಳ್ಳುತ್ತಿರ ಬೇಕು. ನಮ್ಮ ಮನೆಯೊಳಕ್ಕೇ ಆಗಲಿ ಅಥವಾ ಇತರರ ಮನೆಯೊ ಳಕ್ಕೆ ಆಗಲಿ ಜೋಡು ಎಕ್ಕಡ ಮೊದೆಲಾದ ಪಾದರಕ್ಷೆಗಳನ್ನು ಮೆಟ್ಟಿ ಕೊಂಡೇ ಮನೆಯೊಳಕ್ಕೆ ನುಗ್ಗಬಾರದು. ಒಂದುವೇಳೆ ಪಾದರಕ್ಷೆಯನ್ನು ಕಾಲಿಗೆ ಹಾಕಿಕೊಂಡು ಇದ್ದಾಗ ಥಟ್ಟನೆ ಅವನ್ನು ಬಿಚ್ಚಿ ತೆಗೆಯುವುದು ಅಸಾಧ್ಯವಾಗಿ ಹಾಗೆಯೇ ಒಳಕ್ಕೆ ಹೋಗಬೇಕಾಗಿ ಬಂದರೂ ನಡುಮನೆ, ಅಡಿಗೆಯವನೆ, ದೇವರಮನೆ, ಊಟದಮನೆ ಇಂತಹ ಸ್ಥಳಗಳಿಗೆ ಪ್ರವೇತಿ ಸುವುದು ನಮ್ಮ ಹಿಂದುಗಳಲ್ಲಿ ಸುತರಾಂ ನಿಸಿದ್ದ. ಇಂತಹ ಪರಿಶುದ್ಧವಾದ ಸ್ಥಳಗಳಿಗೆ ಹೋಗಬೇಕಾದರೆ ಕೈಕಾಲುಗಳನ್ನು ತೊಳೆದುಕೊಂಡು ಕೇವಲ ಶುಚಿಯಾಗಿರಬೇಕಾದುದು ಅತ್ಯಂತಾವಶ್ಯಕ. (ii) ಪಾಠಶಾಲೆಯಲ್ಲಿ ನಡೆಯಬೇಕಾದ ನಡತೆ. ಮಕ್ಕಳು ಕೆಲವು ವರುಷ ಮನೆಯಲ್ಲಿಯೇ ಬಳದನಂತರ ಓದುವುದ ಕೋಸ್ಕರ ಪಾಠಶಾಲೆಗೆ ಹೋಗುವರಷ್ಟೆ. ಹೊರಗಿನವರ ಸಂಗಡ ಬಳಕೆ ಯನ್ನು ಸಂಪಾದಿಸಿಕೊಳ್ಳಬೇಕಾದರೆ ಪಾಠಶಾಲೆಯೇ ಮೊದಲನೆಯ ಸ್ಥಳ ವಾಯಿತು ಆದುದರಿಂದ ಅಲ್ಲಿ ಯಾವ ರೀತಿಯಾಗಿ ನಡೆಯಬೇಕೆಂಬುದನ್ನು ತಿಳಿದಿರಬೇಕಾದುದು ಅತ್ಯಾವಶ್ಯಕ. ಕೊಳಕುಬಟ್ಟೆಗಳನ್ನು ಹಾಕಿ ಕೊಂಡು, ಉಡುಪುಗಳನ್ನು ಹೊಟ್ಟೆ ಪಟ್ಟೆಯಾಗಿ ಧರಿಸಿಯಾಗಲಿ, ತಲೆಗೆ ಟೋಪಿ ಮೊದಲಾದ ಯಾವುದನ್ನೂ ಧರಿಸದೆಯಾಗಲಿ ಅಥವಾ ತಲೆ ಮೈ ಮೊದಲಾದುವನ್ನು ಕೊಳೆಯಾಗಿಟ್ಟು ಕೊಂಡು ಆಗಲಿ ಪಾಠಶಾಲೆಗೆ ಹೋಗು ವುದರಿಂದ ಮರಾದೆಯು ತಪ್ಪುವುದು. ಬರೀ ತಲೆಯಲ್ಲಿರುವುದು ಘನತೆಗೆ ವಿರುದ್ಧ. ಬರಿಯ ಹಣೆಯಲ್ಲಿಸುವುದು ಹಿಂದೂವತದಲ್ಲಿ ನಿಷಿದ್ಧ. ನಿತ್ಯವೂ ಪಾಠಶಾಲೆಗೆ ಹೋದಕೂಡಲೆ ಉಪಾಧ್ಯಾಯರನ್ನೂ ಜೊತೆಯವರನ್ನೂ ವಂದಿಸಬೇಕು. ಹೀಗೆ ಮರಾದೆಯನ್ನು ತೋರಿಸುವುದರಲ್ಲಿ ಸ್ವಲ್ಪವೂ ಟೆ