ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ೧೩ anananana aranornanononen on 14 1 ಯಾವ ಆಟಗಳಿಂದ ಮೈಗೆ ಬಲವೂ ಮನಸ್ಸಿಗೆ ವಿಶ್ರಾಂತಿಯ ದೊರೆಯುವುವೋ ಅಂತಹ ಆಟಗಳನ್ನು ಆಡಬೇಕಲ್ಲದೆ ಜೂಜು ಮೊದ ಲಾದುವನ್ನು ಎಂದಿಗೂ ಆಡಬಾರದು. ಇದರಿಂದ ಎಲ್ಲಾ ವಿಧವಾದ ನಮ್ಮ ಗಳ ಸಂಭವಿಸುವುವಲ್ಲದೆ ಮುಖ್ಯವಾಗಿ ನಮ್ಮ ನಡತೆಯೇ ಕೆಟ್ಟು ಹೋ ಗುವುದು. ಅಪಾಯಕರವಾದ ಆಟಗಳನ್ನು ಆಡಕೂಡದು. - (iv) ಬೀದಿಯಲ್ಲಿ ಆಚರಿಸಬೇಕಾದ ನಡತೆ, ಬೀದಿಯಲ್ಲಿಯೂ ಕೆಲವು ನಿಯಮಗಳಿಗೆ ಬದ್ಧರಾಗಿ ನಡೆಯುವುದು ಮೇಲು. ಬೀದಿಯನ್ನು ನನಗೋಸ್ಕರವೇ ಮಾಡಿಲ್ಲ. ಆದುದರಿಂದ ಇತ ರರ ಆನುಕೂಲ್ಯವನ್ನು ಯೋಚಿಸಿ ಅದನ್ನು ಉಪಯೋಗಿಸಿಕೊಳ್ಳಬೇಕು. ಬಂಡಿ ಬೈಸಿಕಲ್ ಮೊದಲಾದುವುಗಳ ಮೇಲೆ ಹೋಗುವಾಗ, ಸ್ತೆಯ ಎಡ ದ ಪಕ್ಕದಲ್ಲಿ ಹೋಗಬೇಕು. ಯಾವುದಾದರೊಂದು ಬಗೆಯ ಸದ್ದಿನಿಂದ ಜನಗಳನ್ನು ಎಚ್ಚರಗೊಳಿಸಬೇಕು. ಚೌಕಗಳ ಬಳಿಯಲ್ಲಿ ತಾವು ಯಾವ ದಿಕ್ಕಿಗೆ ಹೋಗಬೇಕೋ ಆಕಡೆಗೆ ಕೈ ತೋರಿಸಬೇಕು ಸಂಜೆಯಾದ ನಂತರ ದೀಪವಿಲ್ಲದೆ ಹೊರಡಕೂಡದು. ಮತ್ತು ಜನಸನ್ನರ್ದವು ಹೆಚ್ಚಾ ಗಿರುವ ಕಡೆಗಳಲ್ಲಿ ವೇಗವಾಗಿ ಹೋಗಕೂಡದು. ಮಿಕ್ಕ ಗಾಡಿಗಳಿಗಿಂತ ಬೇಗ ಮುಂದಕ್ಕೆ ಹೋಗಬೇಕಾದಂತಹ ಅವಸರದ ಕಾಗ್ಯವಿದ್ದಲ್ಲಿ ಅವುಗ ಳನ್ನು ಎಡಕ್ಕೆ ಬಿಟ್ಟು ಕೊಂಡು ಹೋಗಬೇಕು. ಕಾಲ್ನಡಿಗೆಯಲ್ಲಾದರೆ ಬಲಗಡೆಯ ಅಂಚಿನಲ್ಲಿ ಹೋಗುವುದು ಯಾವಾಗಲೂ ಒಳ್ಳೆಯದು. ಕೈಯಲ್ಲಿ ಬೆತ್ತವನ್ನು ಅಥವಾ ಕೊಡೆಯನ್ನು ಹಿಡಿದುಕೊ೦ಡು ಹೋಗು ವಾಗ ಅದರ ತುದಿಯು ಇತರರಿಗೆ ಚುಚ್ಚೆ ತೊಂದರೆಯಾಗದಂತೆ ನೋಡಿ ಕೊಳ್ಳಬೇಕು. ಸ್ತ್ರೀಯರನ್ನೂ ವೃದ್ಧರನ್ನೂ ಅಥವಾ ಮಕ್ಕಳನ್ನೂ ಸಂಗಡ ನಡಿಗೆ ಯಿಂದ ಕರೆದುಕೊಂಡು ಹೋಗುವಾಗ, ಯಾವ ಕಡೆ ಗದ್ದಲವೂ ತೊಂದರೆ