ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬ ಕರ್ಣಾಟಕ ಗ್ರಂಥಮಾಲೆ ಸಾಲಾಗಿ ಅಡ್ಡಗಟ್ಟಿ ಕೊಂಡು ಇತರರಿಗೆ ತೊಂದರೆಯಾಗುವಂತೆ ಒಟ್ಟು ಬೀದಿಯನ್ನೆಲ್ಲಾ ಆಕ್ರಮಿಸಿಕೊಳ್ಳಬಾರದು ಮತ್ತು ಅನೇಕರು ಒಂದು ಕಡೆ ಗುಂಪಾಗಿ ನಿಂತುಕೊಂಡು, ಮಾತಾಡುತ್ತ ಹೋಗುವವರಿಗೂ ಬರುವ ರಿಗೂ ಅಡಚಣೆ ಮುನ್ನುಂಟುಮಾಡಬಾರದು. ಹೊಟ್ಟೆಕಿಚ್ಚಿನಿಂದ ಅಥವಾ ಕುಚೇಷ್ಟೆ ಮಿಂದ ಮಾಡುವ ಕೆಲವು ಅಲ್ಪಕಾರಿಗಳು ವರಾಗೆಗೆ ಭಂಗವನ್ನುಂಟುಮಾಡುವುವು ಕೆಲವರು ದುಷ್ಟರು ಅಸೂಯೆಯಿಂದ ನೆರೆಹೊರೆಯವರ ಮನೆಬಾಗಿಲುಗಳು ಅಂದ ವಾಗಿರುವುದನ್ನು ನೋಡಿ ಸಹಿಸದೆ ಕಡಿಸುವುದು, ಬೀದಿಯ ಲಾಂದರಗಳ ನೊಡೆಯುವುದು, ಇತರರ ಮನೆಗಳ ಬಳಿಯ ಹೂ ಗಿಡಗಳನ್ನು ಕಿತ್ಸೆ ಯುವುದು ಇಂತಹ ಅನ್ಯಾಯಗಳನ್ನು ಮಾಡುತ್ತಾರೆ. ಇದು ಅವಿವೇಕ. ನೆರೆಹೊರೆಯವರ ಮನೆ ಬಾಗಿಲುಗಳು ಅಂದವಾಗಿದ್ದರೆ ನಮ್ಮ ಬೀದಿಗೇ ಅಲಂಕಾಗವಲ್ಲವೆ ? ನಮ್ಮ ಬೀದಿಗಳು ಹೀಗಿದ್ದರೆ ನಮ್ಮ ಊರಿಗೇ ಸೊಗ ಸಲ್ಲವೆ ? ಬೀದಿಯ ಲಾಂದರಗಳನ್ನು ಒಡೆದರೆ ರಾತ್ರಿ ಬೆಳಕಿಲ್ಲದೆ, ಬೀದಿ ಯಲ್ಲಿ ನಾವೂ ಎಡವಿಬಿದ್ದೆವು. ನೆರೆಮನೆಗಳಲ್ಲೂ ಚಮಾಲುಗಳಲ್ಲೂ ಬಿಡುವ ಹೂಗಳಿಂದ ಅಲ್ಲಿರುವವರಿಗೆ ಮಾತ್ರವಲ್ಲದೆ ನಮಗೂ ಅವುಗಳ ಸುವಾಸನೆಯು ಬರುವುದಿಲ್ಲವೆ? ಆದುದರಿಂದ ಅವುಗಳನ್ನು ಕಡಿಸಿದರೆ ನಮಗೇ ನಷ್ಟ. ಬೀದಿಯ ಗೋಡೆಗಳ ಮೇಲೂ, ಹಾಳುಮಂಟಪ ದೇವಸ್ಥಾನ ಮೊದ ಲಾದುವುಗಳ ಗೋಡೆಗಳ ಮೇಲೂ ಸ್ಟೇಚ್ಛೆಯಾಗಿ ಬರೆವುದು ಬಲು ನೀಚ ವಾದ ಕೆಲಸ. (v) ಪ್ರಯಾಣಕಾಲದಲ್ಲಿ ಅನುಸರಿಸಬೇಕಾದ ನಡತೆ. ಪ್ರಯಾಣಮಾಡುವಾಗ ಆಚರಿಸಬೇಕಾದ ನಡತೆಗಳು ಎಷ್ಟೋ ಇವೆ. ಆಗ ಉಲ್ಲಾಸವಾಗಿರಬೇಕು. ಕೆಲವುವೇಳೆ ಯತ್ನವಿಲ್ಲದೆ ಹಲವು ( 5