ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡವಳಿ ೧, \ ತೊಂದರೆಗಳು ಸಂಭವಿಸಿದರೂ ಸಂತೋಪಶೀಲರಾಗಿರುವುದು ಉತ್ತಮ. ಜೊತೆಯಲ್ಲಿ ಬರತಕ್ಕವರಿಗೆ ಕೂಡಿದಮಟ್ಟಿಗೂ ಸಹಾಯ ಮಾಡಬೇಕು. ಒಂದೊಂದು ಸಮಯದಲ್ಲಿ ವಿನಯದಿಂದ ಆಡಿದ ಒಂದೊಂದು ಮಾತು, ದಯೆ ಯಿಂದ ಮಾಡಿದ ಒಂದೊಂದು ಸಣ್ಣ ಸಣ್ಣ ಕೆಲಸವೂ ಇತರರಿಗೆ ಎಷ್ಟೋ ಸ್ಮರಣೀಯವಾಗಿರುವುವು ಬಂಡಿಗಳಲ್ಲೂ, ರೈಲಿನಲ್ಲೂ ಕುಳತಿರತಕ್ಕವರಿಗೆ ತುಂಬ ಆನ ನುಕೂಲವಾಗುವಂತೆ ಹೆಚ್ಚು ಜನಗಳು ನುಗ್ಗುವುದು ಅಥವಾ ಹೆಚ್ಚು ಸ್ಥಳ ವಿದ್ದರೂ ಇತರರನ್ನು ಒಳಕ್ಕೆ ಬಿಡದೆ ತಡೆದು ಅಡ್ಡಿ ಮಾಡುವುದು, ಹೆಜ್ಜೆ ವಾಸನೆಯುಳ್ಳ ವಸ್ತುಗಳನ್ನು ಪ್ರಯೋಗಿಸುವುದು, ರಾಗ ಹಾಡುವುದು, ಬಲು ಗಟ್ಟಿಯಾಗಿ ಮಾತಾಡುವುದು -ಇದೆಲ್ಲಾ ಅಸಹ್ಯಕರ. ರೈಲು, ರಸ್ತೆ, ಉದ್ಯಾನಗಳು ಇಂತಹ ಸ್ಥಳಗಳಲ್ಲಿ ಎಂಜಲು ಪದಾ ರ್ಥಗಳನ್ನು ಎಸೆಯಬಾರದು. ಹೇಗೂ ತಮ್ಮಿಂದ ಇತರರಿಗೆ ಯಾವ ವಿಧ ವಾದ ಅನಾನುಕೂಲವಾಗುವುದಕ್ಕೂ ಅವಕಾಶ ಕೊಡಬಾರದು, ಪ್ರಯಾಣ ಮಾಡುವಾಗ ಇತರರ ಮುಂದೆ ನಮ್ಮ ಗೃಹಕೃತ್ಯದ ವಿಚಾರನ್ನಾಗಲಿ ಸ್ನೇಹಿತರು ನೆರೆಹೊರೆಯವರು ಮೊದಲಾದ ಇತರರ ವಿಚಾರವನ್ನಾಗಲಿ ನುಡಿಯಕೂಡದು. ಹಾಗೆ ಒಂದು ವೇಳೆ ಯತ್ನವಿಲ್ಲದೆ ಹೇಳಲೇ ಬೇಕಾಗಿ ಬಂದರೆ ಪಿಸುಮಾತುಗಳನ್ನಾಡಬೇಕು. ಸರ್ಕಾರದವರನ್ನು ದೂಷಿಸುವಂ ತಹ ಮಾತುಗಳನ್ನು ಯಾವಾಗಲೂ ಆಡಲೇ ಕೂಡದು. (V) ಭೋಜನಕಾಲದಲ್ಲಿ ಅನುಸರಿಸಬೇಕಾದ ನಡತೆ. ಭೋಜನ ಮಾಡುವಾಗಲು ಕೆಲವು ಒಳ್ಳೆಯ ಕಟ್ಟಳೆಗಳನ್ನು ಅನು ಸರಿಸಿ ನಡೆವುದು ಮೇಲು. ಪಾಶ್ಚಾತ್ಯರಂತೆ ಕುರ್ಚಿಯ ಮೇಲೆ ಕುಳಿತು ಮೇಜಿನ ಮೇಲಿನಿಂದ ಆಹಾರವನ್ನು ತೆಗೆದುಕೊಳ್ಳುವ ಪದ್ಧತಿಯು ನನ್ನ