ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ murovanoumownoamnananaaammmm ನಿಟ್ಟಿಸುತ್ತಿರುವುದೂ ಕೆಟ್ಟ ಪದ್ಧತಿ, ಬಾಯಲ್ಲಿ ಆಹಾರವಿರುವಾಗ ಮಾತಾ ಡಬಾರದು. ದೋಸೆ ಅಂಗಡಿಗಳು, ಫಲಾಹಾರ ಮಂದಿರಗಳು, ಕಾಫಿಕ್ಲಬ್ಬುಗಳು ಮೊದಲಾದ ಸ್ಥಳಗಳಲ್ಲಿ ಮಾಡಿ ಮಾರುವ ಆಹಾರ ವಸ್ತುಗಳನ್ನು ಕೊಂಡು ತಿನ್ನುವುದು ಅಷ್ಟು ಮತ್ಯಾ ದಾವಹವೂ ಅಲ್ಲ; ಇದರ ಜೊತೆಗೆ ಅದು ಅಸಹ್ಯ ಕರವೂ, ಅಪಾಯಕ ಗವೂ ಆದ ಕೆಟ್ಟ ಪದ್ಧತಿ, ಹೇಗೆಂದರೆ:-ಅಲ್ಲಿನವರು ತುಂಬ ಕೊಳಕರಾಗಿರುವುದರಿಂದ ಶುಚಿತ್ವಕ್ಕೆ ಗಮನಕೊಡದೆಯ, ಪಾತ್ರೆ) ಗಳನ್ನು ಚೆನ್ನಾಗಿ ತೊಳೆಯದೆಯ ಕೊಳೆ ಪದಾರ್ಥಗಳನ್ನು ಪ್ರತ್ಯೇಕಿಸದೆ ಬೆರೆಯಿಸುತ್ತಲ, ಮಣಕು ಎಣ್ಣೆ, ಮುಗ್ಗಿದ ಹಿಟ್ಟು ಇಂತಹವುಗಳಿಂದ ತಿಂಡಿ ಪದಾರ್ಥಗಳನ್ನು ಮಾಡುತ್ತಲೂ ಇರುವುದುಂಟು. ಅಲ್ಲದೆ ಅವರು ಮಾರುವುದಕ್ಕೆಂದು ತೆರೆದಿಟ್ಟ ತಿಂಡಿಯ ಪದಾರ್ಥಗಳ ಮೇಲೆ ಎಂಜಲು, ಉಗುಳು ಹೇಸಿಕೆ ಮೊದಲಾದುವುಗಳ೦ದಿಗೆ ಸೇರಿದ ಬೀದಿಯ ದೂಳಲ್ಲಾ ಕಸದೊಡನೆ ಸೇರಿ ಬೀಳುವುದರಿಂದ ಈ ವಸ್ತುಗಳು ವಿಷಪಾಯ, ಮತ್ತು ಬಚ್ಚಲರೊಚ್ ತಿಪ್ಪೆ ಮೊದಲಾದುವುಗಳ ಮೇಲೆ ಕುಳಿತಿದ್ದ ನೊಣಗಳು ಈ ತಿಂಡಿಯ ಪದಾರ್ಥಗಳ ಮೇಲೂ ಕುಳಿತುಕೊಳ್ಳುವುದರಿಂದ ಇಂತಹ ವಸ್ತುಗಳನ್ನು ಸೇವಿಸತಕ್ಕವರಲ್ಲಿ ಸಾಂಕ್ರಾಮಿಕ ಜಾಡ್ಯಗಳು ಹರಡಿ ಪ್ರಾಣಾಪಾಯವನ್ನುಂಟುಮಾಡುವ ಸಂಭವವೂ ಉಂಟು. ಅಲ್ಲದೆ ಮನೆ ಯಲ್ಲಿ ಮಾಡಿಸಿದರೆ ಆಗುವುದಕ್ಕಿಂತಲೂ ಅಂಗಡಿಯ ತಿಂಡಿಗೆ ಹೆಚ್ಚು ಕ್ರಯವನ್ನು ಕೊಡಬೇಕಾಗುವುದರಿಂದ ತುಂಬ ನಷ್ಟವೂ ಆಗುವುದು, ಊಟವಾದನಂತರ ಸುಮಾರು ಅರ್ಧ ಗಂಟೆಯವರೆಗಾದರೂ ಯಾವ ಕೆಲಸ ವನ್ನೂ ಮಾಡದೆ ವಿಶ್ರಾಂತಿವಿನೋದಗಳಲ್ಲಿ ಕಾಲಕ್ಷೇಪಮಾಡಬೇಕು. ಊಟವಾದಕೂಡಲೆ ನಿದ್ರೆ ಮಾಡಬಾರದು. ಹಾಗೆ ಮಾಡಿದರೆ ಕೆಟ್ಟ ಕನ ಒ