ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨Y ಕರ್ಣಾಟಕ ಗ್ರಂಥಮಾಲೆ ನಮಗೆ ಸಲಿಗೆ ಇದೆಯೆಂದು ತಾತ್ಸಾರ ಮಾಡದೆ ಅವರ ಮಯ್ಯಾದೆ ಯನ್ನು ತೋರಿಸಬೇಕು. ದೇವಸ್ಥಾನಗಳೊಳಕ್ಕೆ ಹೋಗುವಾಗ ಪಾದರ ಕ್ಷಗಳನ್ನೂ, ಕೊಡೆಗಳನ್ನೂ ಒಳಕ್ಕೆ ತೆಗೆದುಕೊಂಡು ಹೋಗಕೂಡದು. ದೇವರ ದರ್ಶನ ಮಾಡುವಾಗ ಇತರರಿಗೆ ಅಡ್ಡವಾಗದಂತೆ, ಬಂದು ಪಕ್ಕದಲ್ಲಿ ನಿಂತುಕೊಳ್ಳಬೇಕು ದೇವಸ್ಥಾನ, ರಾಜಾಸ್ಥಾನ ಮೊದಲಾದ ಸನತೆಯ ಸ್ಥಳಗಳಲ್ಲೂ ಕೈಗಳನ್ನು ಹಿಂದಕ್ಕೆ ಮಡಿಸಿಕೊಳ್ಳದೆ ಮುಂದುಗಡೆ ಜೋಡಿಸಿ ಗಾಂಭೀರದಿಂದ ನಿಂತುಕೊಳ್ಳಬೇಕು. ದೊಡ್ಡ ಮನುಷ್ಯರನ್ನು ಕಾಣಬೇಕಾದರೆ ಬರೀ ತಲೆಯಲ್ಲಿ ಹೋಗ ಭಾರದು. ಮತ್ತು ಹಾಗೆ ಹೋಗತಕ್ಕವರು ಲೌಕಿಕರಾಗಿದ್ದರೆ ನಿಲುವಂಗಿ (Long coat) ಯನ್ನು ಧರಿಸುವುದು ಉತ್ತಮ, ನನ್ನ ಕೈ ಬರಹವನ್ನು ಮುಖ್ಯವಾಗಿ ನಮ್ಮ ಹೆಸರು ಮತ್ತು ವಿಳಾಸವನ್ನು ಕೂಡ ಇತರರು ಸುಲಭವಾಗಿ ಓದುವುದಕ್ಕಾಗುವಂತೆ ಬರೆಯಬೇಕು. ಬೇಗಬೇಗ ಪರಸ ರನೆ ಗೀಚುವುದರಿಂದ ನಮಗೆ ಕಾಲವು ಕೂಡಿಬರುವುದೆಂದು ಭಾವಿಸುವೆ ವಾದರೂ ಅದನ್ನು ಓದತಕ್ಕವರಿಗೆ ಎಷ್ಟು ತೊಂದರೆಯಾಗಿ ಕಾಲವು ನಷ್ಟ ವಾದೀತೆಂಬುದನ್ನು ಯೋಚಿಸಬೇಕು. ಓದುವುದಕ್ಕೆ ತಿಳಿಯದಂತೆ ವಿಳಾ ಸವನ್ನು ಬರೆದವರು ತಮ್ಮ ಕಾಗದವನ್ನು ಅದೇ ವಿಳಾಸದಾರರಿಗೆ ಸರಿ ಯಾಗಿ ತಲಪಿಸಲಿಲ್ಲವೆಂದು ಅಂಚೆ ಯವರನ್ನು ಆಕ್ಷೇಪಿಸುವುದು ತಪ್ಪಲ್ಲವೆ? ಕಾಗದದ ಒಳಗೆ ಮತ್ತು ಮೇಲ್ವಿಳಾಸದಲ್ಲಿ ಸಹ ನಾವು ಯಾರಿಗೆ ಬರೆಯು ವೆವೋ ಅವರ ಹೆಸರಿನ ಹಿಂದೆ ಮು| ರಾ||, ತೀ! |, ಇಂತಹ ಮಯ್ಯಾದೆಯ ಮಾತುಗಳನ್ನು ಅಥವಾ ಸಂಕೇತಾಕ್ಷರಗಳನ್ನು ಆಯಾ ಪಾತ್ರಗಳಿಗೆ ಉಚಿತವಾಗುವಂತೆ ಬರೆಯಬೇಕು. ಮನುಷ್ಯರಾದವರಿಗೆಲ್ಲಾ ಸರದಾ ಯಾವುದಾದರೊಂದು ದೊಡ್ಡ ಅಥವಾ ಸಣ್ಣ ಪುಟ್ಟ ಯೋಚನೆ ಇದ್ದೇ ಇರುವುದಷ್ಟೆ. ಇದಕ್ಕೆಲ್ಲಾ