ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡವಳಿ ರಡೂ ಇದಕ್ಕೆ ಮುಖ್ಯ ಮಾರ್ಗಗಳು. ಒಳ್ಳೆಯ ಕೊಬ್ಬರಿಯೆಣ್ಣೆಗೆ ನಿಂಬೆಯ ಹುಳಿಯನ್ನು ಬೆರೆಸಿ ಕೂದಲಿಗೆ ಸವರಿ ಬಾಚಿಕೊಂಡರೆ ಸದಾ ನಿಮ್ಮಲವಾಗಿ ರುವುದು. ಒಂದುಭಾಗ ಹರಳೆಣ್ಣೆಗೆ ನಾಲ್ಕು ಭಾಗ ರೆಕ್ಸಿಫೈಡ್ ಸ್ಪಿರಿಟ್ (Rectified Spirit) ಸೇರಿಸಿ ತಲೆಗೆ ಹಚ್ಛಿಕೊ೦ಡರೆ ಹುರುಪುಗಳು ಏಳು ಇದೂ, ಸುಂಡು ಮೊದಲಾದುವೂ ಗುಣವಾಗುವುವು. ಏನಾದರೂ ಕೆಲಸಗ ಳನ್ನು ಮಾಡಿದನಂತರ ಕೈ ಕಾಲು ತೊಳೆದುಕೊಳ್ಳುವುದು ಸಾಮಾನ್ಯವಾಗಿ ಎಲ್ಲರಲ್ಲೂ ರೂಢಿಯಾಗಿದೆಯಷ್ಟೆ. ಆದರೆ ಹಾಗೆ ತೊಳೆದುಕೊಂಡಮೇಲೆ ಕೂಡ ಕಲವರ ಉಗುರು ಕಣ್ಣುಗಳಲ್ಲಿ ಕೊಳೆಯು ಶಾಶ್ವತವಾಗಿ ಅಂಟಿ ಕೂಂಡೇ ಇರುವುದು. ಇಂತಹವರು ಊಟಮಾಡುವಾಗ ಈ ಕೊಳೆಯು ಆಹಾರದೊಡನೆ ಸೇರಿ ಹೊಟ್ಟೆಯೊಳಕ್ಕೂ ಹೋಗುವ ಸಂಭವವುಂಟು. ಇದು ಕೇವಲ ಅನಾರೋಗ್ಯಕರ ಮತ್ತು ಹೀಗೆ ಕೊಳೆಗೂಡಿ ಕದ ಉಗುರುಗಳು ತಮಗೆಮಾತ್ರವಲ್ಲದೆ ಇತರರಿಗೂ ಅಸಹ್ಯವಾಗಿರುವುವು. ಆದುದರಿಂದ ಆಗಾಗ್ಗೆ ಉಗುರುಗಳನ್ನು ಕತ್ತರಿಸುತ್ತಿರಬೇಕು. ಪಾದಗಳು ಸರದಾ ಒದ್ದೆಯಾಗಿರಕೂಡದು. ಹಾಗಿದ್ದರೆ ಕ್ವಾಸಕೋಶಗಳಿಗೂ, ನರ ಗಳಿಗೂ ಸಂಬಂಧಪಟ್ಟ ಶೀತರೋಗಗಳಿಗೆ ಆಸ್ಪದವುಂಟಾಗುವುದು, ಕಾಲು ಶೈತ್ಯದಿಂದ ಕೂಡಿದ್ದರೆ ಬೇಗಬೇಗ ಓಡುವುದು. ತುಪ್ಪಟದ ಕಾಲುಚೀಲ, ಕಾಲು, ಕಂಬಳ ಮೊದಲಾದವುಗಳನ್ನು ಧರಿಸುವುದು ಅಥವಾ ಬೂದಿ ಯಿಂದ ತಿಕ್ಕುವ್ರದು ಇವೇ ಮೊದಲಾದವುಗಳಿಂದ ಶಾಖಹುಟ್ಟುವಂತೆ ಮಾಡ ಬೇಕು. ಉಟ್ಟ ಬಟ್ಟೆಯಲ್ಲಿ ಸಂಬಳವನ್ನು ನೀಡುವುದು ಅದನ್ನು ಕಿವುಚುವುದು, ಅಥವಾ ನೆಲದ ಮೇಲೆಯೋ ಗೋಡೆಯ ಮೇಲೆಯೋ ಸೀತು ಉಜ್ಜುವುದು ಇವೆಲ್ಲಾ ಕೊಳಕು ಚಾಳಿಗಳು. ಇದಕ್ಕಾಗಿ ಕೈ ಚೌಕವನ್ನುಪಯೋಗಿಸಬೇಕು. ಹಲ್ಲು ಕೊಳೆಯಾಗಿದ್ದರೆ ನೋಡುವು ದಕ್ಕೆ ಚೆನ್ನಾಗಿ ಕಾಣುವುದಿಲ್ಲವಲ್ಲದೆ ಉಸಿರಿನಲ್ಲಿ ಕೆಟ್ಟ ನಾತವೂ ಉಂಟ