ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳ Ah ರಿಂದಲೇ ದೇಹಕ್ಕೆ ಕೊಡಬೇಕಾದಷ್ಟು ಎಚ್ಚರಿಕೆಯು ಗೇಹದ ವಿಷಯ ದಲ್ಲೂ ಆವಶ್ಯಕವೆನ್ನುವರು. ಕಲಸಕ್ಕೆ ಬಾರದ ಮತ್ತು ಕೊಳೆಯಾದ ಸಾಮಾನುಗಳನ್ನು ಮನೆಯಲ್ಲಿ ಇಟ್ಟಿರಬಾರದು. ಇದರಿಂದ ಕೊಳಲು ಹೆಚ್ಚಿ ರೋಗಾದಿಗಳುಂಟಾಗುವುವು. ಆದುದರಿಂದ ಅಂತಹವುಗಳನ್ನೆಲ್ಲಾ ಸುಟ್ಟು ಬಿಡುವುದುತ್ತಮ. ಬಚ್ಚಲುಗಳನ್ನು ಆಗಾಗ್ಗೆ ತೊಳಯುತ್ತ ಕುಳಿ ಯಾಗಿಟ್ಟಿರಬೇಕು. ಗೋಡೆಗಳಿಗೆ ವರ್ಷಕ್ಕೆರಡುಸಲವಾದರೂ ಸುಣ್ಣವನ್ನು ತೊಡೆಯಿಸಬೇಕು. ಹೆಂಚಿನ ಮನಯಾದರೆ ತಪ್ಪದೆ ವರ್ಷಕ್ಕೊಂದು ಸಲ ಹಂಚುಗಳನ್ನು ಕೈಯಾಡಿಸಬೇಕು. ಕೆಲವು ಮಣ್ಣಿನದಾಗಿದ್ದರೆ ಕೆಲವು ವರ್ಷಗಳಿಗೊಂದು ಸಲವಾದರೂ ಹಳೆಯ ಮಣ್ಣನ್ನು ತೆಗೆಯಿಸಿ ಹೊಸ ಮಣ್ಣನ್ನು ಹಾಕಿಸಬೇಕು. ಮನೆಯಲ್ಲಿ ಯಾವ ವಿಧವಾದ ಕಟ್ಟ ನಾತವು ಕಂಡು ಬಂದರೂ ಅಲಕ್ಷ್ಯಮಾಡದೆ ಥಟ್ಟನೆ ಅದರ ಕಾರಣವನ್ನು ಕಂಡು ಹಿಡಿದು ಅದನ್ನು ತಪ್ಪಿಸಬೇಕು. ಮುಖ್ಯವಾಗಿ ಸ್ಥಗಿನ ಕಾಲ ದಲ್ಲಿ ಈ ವಿಷಯವಾಗಿ ಬಲು ಎಚ್ಚರಿಕೆಯಿಂದಿರಬೇಕು. ಮನೆಯಲ್ಲಿ ಮೇಲ್ಲಡೆಯ ಕಿಟಕಿಗಳನ್ನು ಸರ್ವದಾ ತೆರೆದಿರಬೇಕು, ಗಾಳಿಯ ಕಾಲ ದಲ್ಲಿ ಬಿರುಗಾಳಿಯ ರಭಸವನ್ನೂ ಬೇಸಗೆಯಲ್ಲಿ ಬಿಸಿಲಿನ ಜಳವನ್ನೂ ತಡೆ ಯುವುದಕ್ಕೋಸ್ಕರ ಕಿಟಕಿಗಳಿಗೆ ಗೌಸು ಹಾಕಿರುವುದು ಮೇಲು. ಮನೆಯ ಒಳಗಡೆ ಮಾತ್ರವಲ್ಲದೆ ಹೊರಗಡೆಯೂ ಬಹಳ ನಿರಲವಾಗಿರ ಬೇಕು. ವಾಸ ಮಾಡತಕ್ಕ ಮನೆಯ ಅಂಗಳದಲ್ಲಿ ಕೂಡ ಪಶುಗಳನ್ನು ಕಟ್ಟಕೂಡದು ಬೀದಿಕಸ, ಬಚ್ಚಲಿನೀರು ಮೊದಲಾದುವು ದೂರವಾಗಿ ಸಾಗಿಹೋಗುವುದಕ್ಕೆ ತಕ್ಕ ಏರ್ಪಡುಗಳನ್ನು ಮಾಡಿರಬೇಕು. ಮನೆ ಯ ಹತ್ತಿರ ಎತ್ತರವಾಗಿ ಬೆಳೆದ ಹುಣಿಸೆ ಮೊದಲಾದ ಯಾವ ದೊಡ್ಡ ಮರ ಗಳೂ ಇರಕೂಡದು. ಸುತ್ತಲೂ ಸಣ್ಣ ಪುಟ್ಟ ಹೂ ಗಿಡಗಳು ಮಾತ್ರ ಇರಬಹುದು. ಮನೆಯ ಯಾವ ಭಾಗದಲ್ಲೂ ಪಕ್ಷಿಗಳು ಗೂಡು ಕಟ್ಟಿ