ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕಗ್ರಂಥಮಾಲೆ nnnnn ಕಳ್ಳುವುದಕ್ಕಾಗಲಿ, ಇಲಿಗಳು ತೋಡುವುದಕ್ಕಾಗಲಿ ಅವಕಾಶ ಕೊಡ ಕೂಡದು, ಹೊಗೆಯು ಧಾರಾಳವಾಗಿ ಹೊರಟು ಹೋಗುವಂತೆಯೂ ಆಗಿಗೆ ಸ್ವಲ್ಪವೂ ಆಸ್ಪದವಿಲ್ಲದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಪ್ರತಿಯೊಂದು ವಸ್ತುವಿಗೂ, ಪ್ರತಿಯೊಂದು ಕೆಲ ಸಕ್ಕೂ ಗೊತ್ತಾದ ಒಂದೊಂದು ಸ್ಥಳವಿರಬೇಕು. ಮತ್ತು ಎಲ್ಲ ವೂ ಶುಚಿ ಯಾಗಿಯ, ಅಂದವಾಗಿ ಇರಬೇಕು. ಮುಖ್ಯವಾಗಿ ಅಡಿಗೆಯ ಮುತ್ತು ನೀರಿನ ಪಾತ್ರೆಗಳು ನಿಶ್ಚಲವಾಗಿಯೂ ನೋಟಕ್ಕೆ ಅಂದವಾಗಿರುವ ಹೀಗೆ ಸ್ಪಷ್ಟವಾಗಿಯೂ ಇರಬೇಕು. ಅಡಿಗೆಯ ಪಾತ್ರೆಗಳನ್ನು ಬೆಳಗಿದ ಸಂತರ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಅಥವಾ ಬೆಂಕಿಯ ಮೇಲೆ ಇಟ್ಟರ ಬೇಕು. ಕಲಾಯಿ ಇಲ್ಲದೆ ಹಿತ್ತಾಳೆಯ ಅಥವಾ ತಾವು ದ ಪಾತ್ರೆಗಳಲ್ಲಿ ಅಡಿಗೆಯನ್ನು ಮಾಡಕೊಡದ ನೀರಿನ ಪಾತ್ರೆಗಳನ್ನು ಮುಖ್ಯವಾಗಿ ಒಳ ಗಣೆ ಚೆನ್ನಾಗಿ ಉಜ್ಜಿ ತೊಳೆಯಬೇಕು. ಮುಚ್ಚದೆ ಯಾವ ಪದಾರ್ಥ ಗಳನ್ನೂ ತೆರೆದಿಟ್ಟರಕೊಡದು. ಹಾಗೆ ತೆರೆದಿದ್ದರೆ ನೋಣ, ಹುಳು, ಧ.೧ಳು ಮೊದಲಾದುವು ಬಿದ್ದು ಕೆಡಿಸುವ ಸಂಭವವುಂಟು. ಹಾಲಿನ ಪಾತ್ರೆಯ ಮತ್ತು ಅದನ್ನು ಇಡುವ ಸ್ಥಳದ ವಿಷಯದಲ್ಲಿ ಹೆಚ್ಚು ಜಾಗರೂಕತೆಯು ಆವಶ್ಯಕ. ಅಕ್ಕಿ, ಬೇಳೆ ಮೊದಲಾದ ಧಾನ್ಯಗಳು ತರಕಾಗಿ ಉಪ್ಪಿನಕಾಯಿ ಮೊದಲಾದವುಗಳಲ್ಲಿ ಹುಳುಗಳು ಬೀಳಲವಕಾಶವಿಲ್ಲದಂತೆ ರಕ್ಷಿಸ ಬೇಕು, ಕುರ್ಚಿ, ಬಚ, ಮೊದಲಾದ ಮರದ ಸಾಮಾನುಗಳನ್ನು ಧಳ, ಸೇರಿದಂತೆ ನಿತ್ಯವೂ ಒರಸುತ್ತಲ ಆಗಾಗ್ಗೆ ಗಬ್ಬೆಣ್ಣೆಯನ್ನು ಹಾಕಿಸುತ್ತಲೂ ಇರಬೇಕು, ಪುಸ್ತಕಗಳಿಗೆ ಹುಳ ಹತ್ತದಂತೆ ನೋಡಿಕೊಳ್ಳ ಬೇಕು. ಇದಕ್ಕಾಗಿ ನ್ಯಾರ್ಲೈಗುಳಿಗೆಗಳನ್ನುಪಯೋಗಿಸುವುದು ಮೇಲು ನಾವು ನಿದ್ರೆಯಿಂದ ಎದ್ದ ಕೂಡಲೆ ಹಾಸಿಗೆಯನ್ನು ಸುತ್ತಿಬಿಡದೆ ಅದನ್ನು ಬಿಸಿನಲ್ಲಿ ಅಥವಾ ಗಾಳಿಯಲ್ಲಾದರೂ ಸ್ವಲ್ಪ ಹೊತ್ತು ಆರಹಾಕಬೇಕು.