ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ಹತ್ತಿಯ ಬಟ್ಟೆಗಳಾದರೆ ಕಡೆಗೆ ವಾರಕ್ಕೊಂದುಸಲವಾದರೂ ಒಗೆಯಬೇಕು. ಇದರಿಂದ ಬಟ್ಟೆಗಳು ಬೆವರು ಮೊದಲಾದ ಕೊಳೆಯಿಲ್ಲದೆ ಶುದ್ಧವಾಗಿರು ವುವು. ಮಲಗುವುದಕ್ಕೆ ಒತಗಿ ನೆಯ್ದ ಜಂಖಾನೆ, ತುಂಬ ದಪ್ಪವಾದ ಸುಪ್ಪತ್ತಿಗೆ, ಸಿಂಗಿನ ಮಂಚ, ಇಂಥವುಗಳಿಗಿಂತಲೂ ಗಾಳಿಯಾಡಲನುಕೂ ಲಿಸುವ ಕಂಬಳಗಳು ಚಾಪೆ, ತೆಳುವಾದ ಸುಪ್ಪತ್ತಿಗೆ, ಕೇವಲ ಎತ್ತರವಿಲ್ಲದ ತಲೆದಿಂಬು, ಮರದ ಹಲಗೆಯ ಮಂಚ ಇಂಥವುಗಳು ಉತ್ತಮ. ಸರದಾ ಕೇವಲ ಮೃದುವಾದ ಹಾಸಿಗೆಯ ಮೇಲೆ ಮಲಗುವ ಅಭ್ಯಾಸವಾದರೆ ಕಾಲಕ್ರಮದಲ್ಲಿ ಮೂಲವ್ಯಾಧಿಯು ಪ್ರಾಪ್ತವಾಗುವುದೆನ್ನುವರು. ಮಲ ಗುವ ಮನೆಯಲ್ಲಿ ದೊಡ್ಡ ದೀಪಗಳನ್ನಿಡಬಾರದು. ಇದರಿಂದ ಅಲ್ಲಿಯ ವಾಯು ಕೆಟ್ಟು ಅಲ್ಲಿ ಮಲಗಿದವರ ಆರೋಗ್ಯವನ್ನು ಕಡಿಸುವುವು. ವ್ಯಾಯಾಮ, ಮನುಷ್ಯರು ಮಾಡುವ ಪ್ರತಿಯೊಂದು ಕೆಲಸವು ದೇಹಬಲದಿಂದ ಅಥವಾ ಬುದ್ದಿ ಬಲದಿಂದ ನಡೆಯುವುದಷ್ಟೆ. ಕಾಯ ಪುಷ್ಟಿಯು ಸರಿಯಾಗಿ ದ್ದರೆ ಬುದ್ದಿಯು ಕೆಲಸಮಾಡುವುದಕ್ಕೆ ತಕ್ಕಂತೆ ಒಳ್ಳೆಯ ಸ್ಥಿತಿಯಲ್ಲಿರು ವುದು. ಆದುದರಿಂದ ಯಾವುದು ಸರಿಯಾಗಿ ನಡೆಯುವುದಕ್ಕೆ ದೇಹದಾರ್ಡ್ಯ ವು ಇರಲೇಬೇಕೆಂದಾಯಿತು. ಇದಕ್ಕೆ ಹಿಂದೆ ತಿಳಯಿಸಿದವುಗಳು ಮಾತ್ರ ವಲ್ಲದೆ ವ್ಯಾಯಾಮವೂ ಆವಶ್ಯಕ. ಈಚೀಚೆಗೆ ನಾಗರಿಕತೆಯು ಹೆಚ್ಚುತ ಬಂದಂತೆಲ್ಲಾ ಜನರು ಕೈಗಾರಿಕೆ, ವಿದ್ಯಾಭ್ಯಾಸ ವ್ಯಾಪಾರ, ಇಂತಹ ಯಾವು ದಾದರೊಂದುದ್ದೇಶದಿಂದ ಪಟ್ಟಣವಾಸವನ್ನೇ ಹೆಚ್ಚಾಗಿ ಬಯಸುತ್ತಿರು ವರು. ಅಲ್ಲಿ ಹೆಚ್ಚು ಜನಗಳು ಕಡಿಮೆಯಸ್ಥಳದಲ್ಲಿ ಒತ್ತರಿಸಿಕೊಂಡು ತಕ್ಕಷ್ಟು ಗಾಳಿ ಬೆಳಕುಗಳಿಗನುಕೂಲವಲ್ಲದ ಮನೆಗಳಲ್ಲಿ ವಾಸಮಾಡಬೇ ಕಾಗುವುದು.