ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ 442 annannnnnnnnnnnnnnnnnnnnnnnnnnn ಟನ್ ಪಡೆಯಬಹುದು. ಹುಡುಗರು ಬಹಳ ಹೊತ್ತು ನಿದ್ರಿಸಬೇಕು. ಆದುದರಿಂದ ಲೇ ಅವರು ಹೊತ್ತಿಗೆ ಮುಂಚೆ ಮಲಗಿಕೊಳ್ಳಬೇಕು. ಎಳೆಯ ಮಕ್ಕಳು ನಿತ್ಯವೂ ಹನ್ನೆರಡು ಗಂಟೆಗಳಷ್ಟು ಕಾಲ ನಿದ್ರಿಸಬೇಕು. ಮಿದುಳಿನಿಂದ ಅಂ ದರೆ ಬುದ್ಧಿಯಿಂದ ಕೆಲಸಮಾಡತಕ್ಕವರಿಗೆ ಎಂಟುಗಂಟೆಗಳಷ್ಟು ಕಾಲದ ನಿದ್ರೆಯು ಆವಶ್ಯಕ. ಶುಭ್ರವಾದ ಹಾಸಿಗೆಯಮೇಲೆ ನಿಮ್ಮಲವಾದ ಗಾಳಿ ಯಲ್ಲಿ ತಕ್ಕಷ್ಟು ಕಾಲ ನಿದ್ರೆ ಮಾಡದಿದ್ದರೆ ಆರೋಗ್ಯ ಸ್ಥಿತಿಯು ಸರಿಯಾಗಿ ರುವುದಿಲ್ಲ. ಹೊತ್ತಿಗೆ ಮುಂಚೆ ಏಳುವುದರಿಂದ ಸದಾ ಆರೋಗ್ಯವಾಗಿ ರಬಹುದು. ಇದು ನಿತ್ಯ ಗಟ್ಟಳೆ ಪಡೆಯತಕ್ಕೆ ವಿಶ್ರಾಂತಿ. ನಿತ್ಯವೂ ಏಕರೀ ತಿಯಾಗಿ ಕೆಲಸಮಾಡುವುದರಿಂದುಂಟಾಗುವ ಬೇಸರವನ್ನು ಪರಿಹರಿಸಿಕೊ ಳುವುದಕ್ಕೆ ವಾರಕ್ಕೊಂದು ದಿನವಾದರೂ ವಿಶ್ರಾಂತಿಯು ಆವಶ್ಯಕ. ಸತ್ಕಾರ ದವರು ಈಗ ಭಾನುವಾರ ರಜಾಕೊಡಿಸುತ್ತಿರುವುದೇ ಇದಕ್ಕೆ ದೃಷ್ಟಾಂತ ವಾಗಿದೆ. ಬುದ್ದಿಗೆ ಬೇಸರವಾಗಿರುವಾಗ ಆಟಪಾಟಗಳು, ವೃತ್ತಾಂತಪತ್ರಿಕ ಗಳನ್ನೂ ಕಾದಂಬರಿಗಳನ್ನೂ ಓದುವುದು, ಮಿತ್ರರ ಸಂಗಡ ಸರಸ ಸಲ್ಲಾ ಪಗಳು, ಮಕ್ಕಳನ್ನಾಟವಾಡಿಸುವುದು, ಇಂಥವುಗಳೆಲ್ಲಾ ಒಳ್ಳೆಯ ವಿಶಾ ತಿಮಾರ್ಗಗಳು ಆರೋಗ್ಯ, ನಮ್ಮ ಜೀವಮಾನಕ್ಕೆ ಆರೋಗ್ಯವೇ ಮೂಲಾಧಾರ, ಆರೋಗ್ಯ ವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇರುವುದು. ಇಂಗ್ಲೆಂ ಡಿನ .ಯಾರ್ಕ್‌ಪೈರಿನಲ್ಲಿ ೧೫೦೦ ನೆ ಮೇ ೧೭ ರಲ್ಲಿ ಜನಿಸಿದ ಹೆನ್ರಿ ಜಂರ್ಕ್ಸಿ ಎಂಬಾತನು ೧೭೦ ವರ್ಷಗಳು ಬದುಕಿದ್ದನು. ಈತನು ನಿತ್ಯವೂ ಬೆಳಗಾಗುತ್ತಲೇ ಬಂದು ಪಂಚಪಾತ್ರೆಯಷ್ಟು ನೀರನ್ನು ಕುಡಿಯುತ್ತ ಮಿತಾಚರಣೆಯಲ್ಲಿದ್ದುದರಿಂದ ಹಾಗೆ ದೀರ್ಘಾಯುಷ್ಮಂತನಾಗಿ ಸೇವಿಸಿ ದನು. ೧೬೩ ರಲ್ಲಿ ಇಂಗ್ಲೆಂಡಿನಲ್ಲಿ ಹುಟ್ಟಿದ ಥಾಮಸ್‌ಪಾಕ್ ಎಂಬಾತನು -