ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕಗ್ರಂಥಮಾಲೆ (6) ದುರಭ್ಯಾಸಗಳು. ಚಾಳಿಯು ಒಳ್ಳೆಯದಾಗಲಿ ಕೆಟ್ಟುದೇ ಆಗಲಿ ಅದು ನಮ್ಮಲ್ಲಿ ಬೇ ರೂರಿದರೆ ನನ್ನ ಜೀವಮಾನದಲ್ಲೆಲ್ಲಾ ಬೆಂಬಿಡದೆ ಇರುವುದು, ಒಳ್ಳೆಯ ಚಾಳಿಯನ್ನು ಸುಶೀಲವೆಂದು ಕರೆಯುವರು. ಅದು ಎಂದೂ ಬಾಡದ ಪಪ್ಪ ಮಾಲಿಕೆಯಂತಿರುವುದು, ಕೆಟ್ಟ ಚಾಳಿಯು ಫುಟಸರ್ಪದಂತೆ ಪರಿಣಮಿಸು ವುದು, ನಡತೆಯೆಂಬ ನದಿಗೆ ಚಾಳಿಗಳ ಉಪನದಿಗಳು. ಕಾರಗಳೆಂಬ ಬೀಜಗಳನ್ನು ಬಿತ್ತಿದರೆ ಚಾಳಿಗಳೆಂಬ ಬೆಳೆಯ ಚಾಳಿಗಳಿಂದ ನಡತೆಯ ಉಂಟಾಗುವುವು. ನಮ್ಮ ಜೀವಮಾನವೆಂಬ ಉತ್ತಮ ಕ್ಷೇತ್ರದಲ್ಲಿ ಒಳ್ಳೆ ಯ ನಡತೆಯೆಂಬ ಪೈರನ್ನು ಕಷ್ಟಪಟ್ಟು ಬೆಳಯಿಸುತ್ತಿರುವಾಗ ದುರಭ್ಯಾ ಸಗಳೆಂಬ ಕಳಗಳು ತಾವಾಗಿಯೇ ಬೆಳೆದು ಉದ್ದಿಷ್ಟವಾದ ಬೆಳಕನ್ನು ಧ್ವಂ ಸಮಾಡುವುವು. ಇದಕ್ಕೆ ಅವಕಾಶಕೊಡದಂತೆ ಎಚ್ಚರಿಕಯೆ.೦ದಿಬೇಕು. ಮನುಷ್ಯನ ಒಳ್ಳೆಯ ಅಥವಾ ಕೆಟ್ಟ ಚಾಳಿಗಳೆಲ್ಲಾ ೨೦- ೧೫ ವರ್ಷಗಳಳಗೇ ಬೇರೂರುವುವೆಂತಲೂ ಅಲ್ಲಿಂದ ಮುಂದಕ್ಕೆ ಪ್ರಾಯಶಃ ಯಾವ ಹೊಸತಾಳಿಗೂ ಅವಕಾಶವಿರಲಾರದೆಂದೂ ಬಲ್ಲವರು :'ಒಳ್ಳವರು, ಚಾಳಿಯು ಕೆಲವು ಕಾಲದನಂತರ ಸ್ವಭಾವವಾಗಿಯೇ ಪರಿ ವಿ ಸುವುದು. ಒಬ್ಬ ಹುಟ್ಟು ಹುಚ್ಚನು ಬಂದು ಪಟ್ಟಣದಲ್ಲಿ ಒಂದು ದೊಡ್ಡ ಗಡಿಯಾರದ ಬಳಿ ವಾಸಮಾಡುತ್ತ ಅದು ಗಂಟೆಹೊಡೆದಾಗಲೆಲ್ಲಾ ಎಣಿಸಿಕೊಳ್ಳುತ್ತಿ ದ್ದನು. ಬಹುಕಾಲಾನಂತರ + ಗಡಿಯಾರವು ಕೆಟ್ಟು ಹೋದಮೇಲೂ ಅವನು ತಪ್ಪದೆ ಪ್ರತಿಯೊಂದು ಗಂಟೆಯಲ್ಲಿಯೂ ಒಂದು ನಿಮಿಷವೂ ಕೂಡ ವ್ಯತ್ಯಾಸವಿಲ್ಲದಂತೆ ಆಯಾಗಂಟೆಗಳನ್ನು ಎಣಿಸುತ್ತಿದ್ದನಂತೆ! ಚಾಳಿಯ ಮಹಿಮೆಯನ್ನು ನೋಡಿದಿರಾ ! ರ್ಚಾರ್ಸ ಎಂಬ ಘನಪಂಡಿತ ಕೊಬ್ಬನು ದಾರಿಯಲ್ಲಿ ಹೋಗುವಾಗ ದಾರಿಯಲ್ಲಿ ಸಿಕ್ಕ ತಕ್ಕ ಕಂಭಗಳ ನ್ನೆಲ್ಲಾ ಸವರಿಕೊಂಡು ಹೋಗುತ್ತಿದ್ದನಂತೆ. ಅಕಸ್ಮಾತ್ತಾಗಿ ಯಾವುದಾದ ಬ