ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ೪ ummanananananananananananam ರೊಂದು ಕಂಬವನ್ನು ಮುಟ್ಟುವುದನ್ನು ಮರೆತಿದ್ದು ಜ್ಞಾಪಕಬರಲು ಪುನಃ ಅದನ್ನು ಮುಟ್ಟಿ ದಹೊರತು ಯಾವಕೆಲಸವನ್ನೂ ಮಾಡಲಾರದೆ ಬೇಸರ ಪಡುತ್ತಿದ್ದನಂತೆ ! ಒಬ್ಬರಲ್ಲಿ ಒಂದುಚಾಳಿಯು ಬೇರೂರಿದರೆ ಅದು ವಂಶಪಾರಂಪಯ್ಯ ವಾಗಿ ಅನುಸರಿಸಬರವುದೂ ಉಂಟು. ಕೆಲವರು ವಿನೋದಕ್ಕೆ ಅಥವಾ ಅನು ಕರಣಕ್ಕೆ ಎಂದು ಮಾಡುವಚೇಷ್ಟೆಗಳು ಕಾಲಕ್ರಮೇಣ ಚಾಳಿಗಳಾಗುವು ದುಂಟು. ಕೆಲವರು ಸದಾಮುಖದಮೇಲೆ ಕೈಯಾಡಿಸುತ್ತಿರುವುದು, ಕಣ್ಣು ಮಿಟಕಸುವುದು, ಕೈಗೆಟಿಕಹಾಕುವುದು, ಇಂಥಾಚಾಳಿಗಳನ್ನು ಪಡೆ ದಿರುವರು ಅವರು ಹಾಗೆ ಮಾಡದಿರುವುದಕ್ಕೆ ಆಗುವುದಿಲ್ಲ. ಇಷ್ಟಾದರೂ ತಮ್ಮತಾಳಿ ಇಂತಹುದೆಂದು ತಮಗೆ ಗೊತ್ತಿರುವುದಿಲ್ಲ. ಆದಿಯಿಂದಲೂ ಒಳ್ಳೆಯ ಅಭ್ಯಾಸಗಳನ್ನು ಪಡೆದಿರಬೇಕು. ಹೊತ್ತಿಗೆ ಸರಿಯಾಗಿ ಕೆಲಸಮಾಡುವುದು, ನಿಷ್ಕರ್ಷೆ, ಹಿಡಿದ ಕೆಲಸವನ್ನು ಬಿಡದೆ ಸಾಧಿಸುವುದು; ಇಂತಹವು ಒಳ್ಳೆಯಚಾಳಿಗಳು. ಯಾವುದೇಆಗಲಿ ಆದಿಯಲ್ಲಿ ಎಷ್ಟು ಕಷ್ಟವಾಗಿದ್ದರೂ ಅಭ್ಯಾಸಬಲದಿಂದ ಕಾಲಕ್ರಮದಲ್ಲಿ ಅದೇಚಾಳಿ ಯಾಗಿ ಅತಿಸುಲಭವಾಗುವುದು, ಹೊಸದಾಗಿ ಕಟುಕತನವನ್ನು ಕೈಗೊಳ್ಳ ತಕ್ಕವನಿಗೆ ಮೊದಲು ಕನಿಕರವು ತಕ್ಕಮಟ್ಟಿಗಾದರೂ ಇದ್ದೇ ಇರುವುದು. ಆದರೆ ಕೆಲವು ಕಾಲದನಂತರ ಅವನ ಎದೆಯು ಕಲ್ಲಾಗುವುದು. ಟೈಪಬರಿ ಯತಕ್ಕವರ ಬೆರಳುಗಳ ಕೆಲಸವನ್ನು ನೋಡಿದರೆ ಅಭ್ಯಾಸದಮಹಿಮಯು ಎಂತಹವರಿಗೂ ಸ್ಪಷ್ಟವಾಗಿ ಗೊತ್ತಾಗದೆ ಇರಲಾರದು. ಚಾಳಿಯು ಹೀಗೆ ತಾನೇತಾನಾಗಿ ಕೆಲಸಮಾಡುವುದರಿಂದ ಬುದ್ಧಿಯ ಸ್ಥಾನವಾದ ಮೆದುಳಿಗೆ ಆಯಾಸವು ಕಡಿಮೆಯಾಗುವುದು. ಮುದುಕನಾಗಿ ರ್ಪಪ್ರಪಡೆಯುತ್ತಿದ್ದ ಬಾರ್‌ಸಿಪಾಯಿಯು ಕೈಯಲ್ಲಿ ತರಕಾರಿಯಬುಟ್ಟಿಯನ್ನು ತೆಗೆದುಕೊಂಡು 9