ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೬ ಕರ್ಣಾಟಕಗ್ರಂಥಮಾಲೆ ® W + ಆ ಯೋಗ್ಯತೆಗೆ ತಕ್ಕುದಾಗಿರಬೇಕು. ಇಲ್ಲದಿದ್ದರೆ ಆತ್ಮಗೌರವಕ್ಕೆ ಹಾನಿ ಬರುವುದು. ಸುನತೆಯೆಂಬ ವೃಕ್ಷಕನಡತೆಯ ತಾಯಿಬೇರು, ತುಂಬ ಹೆಚ್ಚು ಬೆಲೆ ಬಾಳುವ ಅಥವಾ ಹೆಚ್ಚು ಬಣ್ಣವುಳ್ಳ ಉಡುಪುಗಳನ್ನು ಧರಿಸಿ ಎಲ್ಲರೂ ತಮ್ಮನ್ನೇ ನೋಡುವರೆಂದು ಭ್ರಮಿಸುವುದು ನಿಷಿದ್ಧ. ಮತ್ತು ಜಂಭ, ನಿಜಸ್ಥಿತಿಯ ಮುಂದೆ ಡಂಭವು ಎಂದಿಗೂ ಜಯಿಸಲಾ ರದು. ಹಗಲುಚಂದ್ರನಿಗೆ ಪ್ರಕಾಶವಿಲ್ಲದಿರುವುದೂ ಸತ್ಯನಿಗೆ ಪ್ರಕಾಶ ವಿರುವುದೂ ಸಾಕಾದ ದೃಷ್ಟಾಂತವಾಗಿದೆ. ಆದರೆ ನಿಜಸ್ಥಿತಿಯು ಮರೆಯಾ ದಾಗ ಸುಳ್ಳೇ ಮೋಹಕರವಾಗಿ ತೋರುವುದು. ಆದುದರಿಂದಲೇ ಸ್ವಯಂ ಪ್ರಕಾಶಮಾನವಾದ ಸೂರನು ಮರೆಯಾದನಂತರ ಚಂದ್ರನಿಗೇ ಪಾತಸ್ಯ ನಾವು ಧರಿಸುವ ಬಟ್ಟೆಗಳು ಎಷ್ಟೇ ಕಡಿಮೆಯ ಬೆಲೆಯುಳ್ಳವಾದರೂ ಚಿಂತೆ ಯಿಲ್ಲ. ಆದರೆ ಕೊಳೆಯಿಲ್ಲದೆ ಶುಭ್ರವಾಗಿರಬೇಕಾದುದು ಮುಖ್ಯ. ನಮ್ಮ ಚಾಳಿಗಳೂ ಕೆಲಸಗಳ ಕೊಳಕಿಲ್ಲದೆಯೂ ಒಪ್ಪವಾ ಗಿಯೂ ಇರಬೇಕು. ಬೀದಿಯಲ್ಲಿ ಸಿಳ್ಳು ಹಾಕುವುದು, ಪ್ರೇಕ್ಷೆಯಾಗಿ ಬಲು ಗಟ್ಟಿಯಾಗಿ ನಗುವುದು, ಜೂಜಾಡುವುದು, ಕುಸ್ತಿ ಇಂಥವುಗಳ ಘನತೆಯನ್ನು ಕೆಡಿಸುವುವು. ಆಹಾರಪಾನ ಮೊದಲಾದುವುಗಳಲ್ಲಿ ಮಿತಿ ಮೀರಿ ಹೊಟ್ಟೆಬಾಕರಾಗಿದ್ದರೆ ಇತರರ ಹೇಳದೆಗೆ ಗುರಿಯಾಗಬೇಕಾಗುವುದ ಲ್ಲದೆ ದೇಹಾರೋಗ್ಯವೂ ಕೆಡುವುದು, ಗೌರವಶಾಲಿಗಳಾಗಿರಬೇಕಾದವರಲ್ಲಿ ಯಾವ ಕೆಟ್ಟ ಚಾಳಿಗಳೂ ಇರಕೂಡದು, ನಾಲಗೆಯನ್ನು ಹದ್ದಿನಲ್ಲಿಟ್ಟು ಕಂಡಿರಬೇಕು. ಅಸತ್ಯ, ಪರನಿಂದೆ, ಕರೆಯದ ಕಡೆಗೆ ಹೋಗುವುದು ಹೇಚ್ಚುಮಾತು, ಪುಂಡುಮಾತು, ಅಥವಾ ಗ್ರಾಮ್ಯವಾದಮಾತು ಇವುಗಳಿಂದ ಇತರರೊಡನೆ ಸಲ್ಲಾಪಮಾಡುವುದು, ಕೆಟ್ಟ ಮಾತುಗಳಿಂದ ತನ್ನನ್ನೇ ಬೈದು ಕೊಳ್ಳುವುದು, ಹರ್ಷವಿಪಾದಗಳಲ್ಲಿ ಮಿತಿಮೀರಿದ ಉದ್ರೇಕ ಇವುಗಳಲ್ಲಾ ಮನುಷ್ಯನ ನಡತೆಯನ್ನು ಕೆಡಿಸುವುವು. ಸ್ತ್ರೀಪುರುಷರು ಪರಸ್ಪರವಾಗಿ