ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡವಳಿ ೪೬ mmmmmmanna ಎದುರಿಗೆ ನಿಂತು ಜಗಳವಾಡುವುದರಿಂದ ಅವರಿಬ್ಬರ ಗೌರವಕ್ಕೂ ಹಾನಿ. ತಮ್ಮ ಯೋಗ್ಯತೆಗೂ ಫುನತೆಗೂ ತಕ್ಕಂತೆ ನಡೆದುಕೊಳ್ಳದೆ ಕಾಸಿನಾಸೆ ಗಾಗಿ ಸರದಾ ದೈನ್ಯದಾಸತ್ವಗಳಿಂದ ನಡೆಯುವುದು, ಇವೆಲ್ಲಾ ಬಹಳ ಹೀನಾಯ. ೦ದ ನಮಗೆ ಏನಾಗಬೇಕಾದರೂ ಆಯಾನಿಯಮಗಳಿಗೆ ತಪ್ಪದಂತೆ ನಡೆಯುತ್ತದೆ. ಕೆಲವು ಮುಖ್ಯ ನಿಯಮಗಳನ್ನಂತು ಯಾವ ದೊಡ್ಡ ಅಧಿಕಾರಿಗಳ ಮಾರಿನಡೆವುದಕ್ಕಾಗುವುದಿಲ್ಲ. ಹೀಗಿದ್ದರೂ ತಿಳಿ ವಳಿಕೆಯಿಲ್ಲದ ಅನೇಕಜನ ಕಕ್ಷಿಗಾರರು ತಮ್ಮ ಅರ್ಜೆಗಳಲ್ಲಿ-ಮಜಾ ಸ್ವಾಮಿ, ನಾನುಬಡವ, ಮಕ್ಕಳೊಂದಿಗ, ತಮ್ಮಿಂದಲೇ ಉದ್ಧಾರವಾಗ ಬೇಕು. ಇದರಿಂದ ತಮಗೆ ಪುಣ್ಯ ಬರುತ್ತದೆ-ಎಂಬಂಥ ಮಾತುಗಳನ್ನು ಬರೆದು ವೃಥಾ ತಮ್ಮ ಗೌರವವನ್ನು ತಾವೇ ಹಾಳುಮಾಡಿಕೊಳ್ಳುವರು ಇದರಿಂದ ತಮ್ಮ ಅಲ್ಪಸ್ವಭಾವವು ತೋರ್ಪಡುವುದುಹೊರತು ಮತ್ತೇನೂ ಇಲ್ಲ. ನಾವು ಸದಾ ಯೋಗ್ಯರ ಸಹವಾಸದಲ್ಲೇ ಇರಬೇಕು. ಅಲ್ಪರ ಸಂಗ ವನ್ನು ಮಾಡಬಾರದು. ನಾವು ಎಂಥವರಜತೆಯಲ್ಲಿ ರುವೆವೆಂಬುದನ್ನು ನೋಡುವುದರಿಂದಲೇ ನಮ್ಮ ನಡತೆ ಯಿಂಥಾದ್ದು ಎಂದು ಜನಗಳು ಊಹಿಸು ತ್ತಾರೆ. ದುರ್ಬೋಧನೆಯಿಂದ ಯಾರನ್ನೂ ತಪ್ಪುದಾರಿಗೆಳೆಯಬಾರದು. ಕೈಲಾಗದವರಿಗೆ ಸಹಾಯವನ್ನು ಮಾಡಬಹುದಾದ ಸಂದರ್ಭಗಳು ದೊರೆತಾ ಗಲೂ ಮಾಡದೆ ಬಿಟ್ಟುಬಿಡಬಾರದು. ನ್ಯಾಯಕ್ಕೆ ಕಟ್ಟುಬಿದ್ದು ನಡೆಯ ಬೇಕು. ನಾಗರಿಕರಾಗಿರಬೇಕು. ನಾವು ಮಾಡಬೇಕಾದ್ದನ್ನು ಧರವಾಗಿ ಪ್ರಾಮಾಣಿಕತೆಯಿಂದ ಮಾಡಬೇಕು. ನಾವು ಇತರರಿಗೆ ಮೇಲ್ಪಚ್ಚಿಯಾ ಗುವಮಟ್ಟಿಗೂ ಒಳ್ಳೆಯ ನಡತೆಯಲ್ಲಿರಬೇಕು. ಲಂಚವನ್ನು ತೆಗೆದುಕೊ ಳ್ಳುವುದು ಅಥವು ಕೊಡುವುದು ಹೇಡಿತನದಿಂದ ನಡೆಯಿಸುವ ಹೀನಕೃತ್ಯ.